ಪಾಲಿಕೆ ಚುನಾವಣೆ: ಜೆಡಿಎಸ್‌ಗೆ ಮೇಯರ್ ಸ್ಥಾನ ಆ ಪಕ್ಷಕ್ಕೆ ನಮ್ಮ ಬೆಂಬಲ: ನಾಸಿರ್ ಹುಸೇನ್

0
994

ಕಲಬುರಗಿ, ಸೆ. 18: ಅಚ್ಚರಿಯ ಫಲಿತಾಂಶದೊAದಿಗೆ ಅತಂತ್ರ ಸ್ಥಿತಿಯ ಕಲಬುರಗಿ ಮಹಾನಗರಪಾಲಿಕೆಯ ಮೇಯರ್ ಚುನಾವಣೆ ಕಗ್ಗಂಟು ಇನ್ನು ಹಾಗೇಯೇ ಮುಂದುವರೆದಿದೆ.
ತಮ್ಮ ಪಕ್ಷಕ್ಕೆ ಯಾರು ಮೇಯರ್ ಸ್ಥಾನ ಕೊಡುತ್ತಾರೋ ಆ ಪಕ್ಷಕ್ಕೆ ನಮ್ಮ ಬೆಂಬಲ ನೀಡುವುದಾಗಿ ಜನತಾ ದಳ ಸ್ಪಷ್ಟಪಡಿಸಿದೆ.
ಕಲಬುರಗಿಯಲ್ಲಿ ಶನಿವಾರ ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷರಾದ ಉಸ್ತಾದ್ ನಾಸೀರ್ ಹುಸೇನ್ ಅವರು ಹೇಳಿಕೆ ನೀಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಈ ಯಾವುದೇ ಪಕ್ಷಗಳು ಆಹ್ವಾನಕ್ಕೆ ಬಂದ್ರು ಸ್ವಾಗತ ಎಂದ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನ ಬಿಟ್ರೆ ಕಾಂಗ್ರೆಸ್‌ನ ಯಾವ ನಾಯಕರು ಜೆಡಿಎಸ್‌ಗೆ ಸಂಪರ್ಕ ಮಾಡಿಲ್ಲ, ಆದರೆ ಬಿಜೆಪಿಯಿಂದ ಸಾಕಷ್ಟು ನಾಯಕರುಗಳು ನಮ್ಮ ಸಂಪರ್ಕ ಮಾಡಿದ್ದಾರೆ ಎಂದು ನುಡಿದರು.
ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಸಹ ಮೇಯರ್ ಪಟ್ಟ ನಮ್ಮ ಪಕ್ಷಕ್ಕೆ ಯಾವ ಪಕ್ಷ ನೀಡುತ್ತದೆಯೋ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳೋಣ ಎಂದಿದ್ದಾರೆ ಎಂದು ವಿವರಣೆ ನೀಡಿದರು.
ಚುನಾವಣೆಯ ಫಲಿತಾಂಶದ ಮಾರನೆ ದಿನವೇ ಬೆಂಗಳೂರಿಗೆ ಪ್ರಯಾಣ ಬೆಳಸಿದ ಜೆಡಿಎಸ್ ಪಕ್ಷದ ನಾಲ್ವರು ಸಹ ಇದೀಗ ನಾಲ್ಕು ಜನ ಸದಸ್ಯರುಗಳು ಕಲಬುರಗಿ ನಗರಕ್ಕೆ ಬಂದಿದ್ದಾರೆ ಎಂದರು.
ನಿನ್ನೆಯಷ್ಟೆ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ನಮ್ಮ ಪಕ್ಷದ ಅಭ್ಯರ್ಥಿಯೇ ಮೇಯರ್ ಆಗುವುದು ನಿಶ್ಚಿತ ಹಾಗೂ ಜೆಡಿಎಸ್ ಪಕ್ಷ ನಮಗೆ ಬೆಂಬಲಿಸುವ ಆತ್ಮವಿಶ್ವಾಸನ್ನು ವ್ಯಕ್ತಪಡಿಸಿದ್ದರು.
ಕಾಂಗ್ರೆಸ್‌ನ ಡಾ. ಶರಣಪ್ರಕಾಶ ಪಾಟೀಲ್ ಅವರು ಕೂಡ ನಮ್ಮ ಪಕ್ಷವೇ ಪಾಲಿಕೆಯಲ್ಲಿ ಅಧಿಕಾರ ನಡೆಸಲಿದೆ ಎಂದು ಹೇಳಿದ್ದು, ಎರಡು ಪಕ್ಷಗಳು ತಮ್ಮ ತಮ್ಮ ಪಕ್ಷದವರೇ ಮೇಯರ್ ಆಗುವಿರೆಂಬ ಹೇಳಿಕೆ, ಇಂದು ನಾಸೀರ್ ಹುಸೇನ್ ಅವರು ನೀಡಿದ ಹೇಳಿಕೆ ನೋಡಿದರೆ ಪಾಲಿಕೆಯಲ್ಲಿ ಮೂರು ಪಕ್ಷಗಳ ಪೈಕಿ ಯಾರು ಮೇಯರ್ ಆಗುವರು ಎಂಬುದು ಕಲಬುರಗಿ ನಗರದ ಜನತೆಯಲ್ಲಿ ಮೂಡಿದ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಮುಂದಿನ ವಾರವೇ ಮೇಯರ್ ಯಾರು ಎಂಬುದು ಸ್ಪಷ್ಟವಾಗಲಿದೆ.

LEAVE A REPLY

Please enter your comment!
Please enter your name here