ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಮಠಾಧೀಶರ ಹೋರಾಟ ಮತ್ತಷ್ಟು ತೀವ್ರ

0
651

ಕಲಬುರಗಿ, ಸೆ. 13: ಪಂಚಮಸಾಲಿ ಜನಾಂಗವನ್ನು 2ಎ ಮೀಸಲಾತಿಗೆ ಒಳಪಡಿಸಲು ಆಗ್ರಹಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃಂತ್ಯುಜಯ ಸ್ವಾಮಿಜಿ ಹೇಳಿದ್ದಾರೆ.

ಅವರು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಪಂಚಮಸಾಲಿಯನ್ನು 2ಎ ಗೆ ಸೇರಿಸಲು ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ಸರಕಾರವಿದ್ದಾಗ ಆಗ್ರಹಿಸಿದರೂ ಸರಕಾರ ಮಣಿಯದಿದ್ದಾಗ ಆಗ ಬಹುದೊಡ್ಡ ಹೋರಾಟ ಮಾಡಿದ್ದೀವಿ, ಅಲ್ಲದೇ 23 ದಿನಗಳ ಕಾಲ ಧರಣಿ ಸತ್ಯಾಗ್ರಹ ಮಾಡಿದಾಗಿ, ಸೆಪ್ಟಂಬರ್ 15ರ ವರೆಗೆ ಪಂಚಮಸಾಲಿಯನ್ನು 2ಎಗೆ ಸೇರಿಸಲು ಕಾಲಾವಕಾಶ ನಿಗದಿ ಮಾಡಿತ್ತು.

ಇದೀಗ ಸರಕಾರ ಕೊಟ್ಟ ಮಾತಿನಂತೆ ಕಾಲಾವಕಾಶ ಮುಗಿಯುತ್ತಿದೆ, ಅಧಿವೇಶನದಲ್ಲಿ ಕೊಟ್ಟ ಮೊತಿನಂತೆ ಪಂಚಮಸಾಲಿಯನ್ನು 2ಎಗೆ ಮೀಸಲಾತಿಗೊಳಿಪಡಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ವಾಮೀಜಿ ಅವರು ಆಗ್ರಹಪಡಿಸಿದ್ದಾರೆ.
ಈ ಕುರಿತುಂತೆ ಸೆಪ್ಟೆಂಬರ್ 15ರಂದು ಎತ್ತಿನಗಾಡಿಯಲ್ಲಿ ಹೋಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು, ಈ ವೇಳೆ ಹತ್ತು ಹದಿನೈದು ನಿಮಿಷ ಧರಣಿ ಸತ್ಯಾಗ್ರಹ ಹಮ್ಮಕೊಳ್ಳಲಾಗುವುದು ಎಂದರು.
ಭರವಸೆ :
ಅಂದಿನ ಮುಖ್ಯಮಂತ್ರಿಗಳು ನಮ್ಮ ಪಂಚಮಸಾಲಿಯನ್ನು 2ಎಗೆ ಸೆ. 15ರೊಳಗೆ ಸಮಯವಕಾಶ ತೆಗೆದುಕೊಂಡಿದ್ದರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳು ಬದಲಾಗಿದ್ದು, ಇಗಿದ್ದ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನಮ್ಮ ಸಮುದಾಯಕ್ಕೆ 2ಎ ಸೇರಿಸುವ ಮೂಲಕ ನ್ಯಾಯ ಒದಗಿಸುವ ಭರವಸೆ ನಮಗಿದೆ ಎಂದು ಸ್ವಾಮೀಜಿಯವರು ವಿಶ್ವಾಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here