ನಂದಿ ಕಾಲೋನಿಯಲ್ಲಿ ಗಣೇಶನ ವಿಗ್ರಹ ವಿರೂಪ

0
1226

ಕಲಬುರಗಿ, ಸೆ. 13: ಪ್ರತಿಷ್ಠಾಪನೆ ಮಾಡಲಾಗಿದ್ದ ಶ್ರೀ ಗಣೇಶವ ಮೂರ್ತಿಯನ್ನು ಕಿಡಗೇಡಿಗಳು ವಿರೂಪಗೊಳಿಸಿದ ಘಟನೆ ನಗರದ ನಂದಿ ಕಾಲೋಯಲ್ಲಿ ನಡೆದಿದೆ.

ಕಳೆದ ರಾತ್ರಿ ಘಟನೆ ನಗರದ ನಂದಿ ಕಾಲೋನಿಯ ನಂದೀಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಗಣೇಶ ವಿಗ್ರಹಕ್ಕೆ ಹಾನಿ ಮಾಡಿ ಮೂರ್ತಿಯನ್ನು ವಿರೂಪಗೊಳಿಸಿದ್ದನ್ನು ಬಡಾವಣೆಯಲ್ಲಿ ಜನರಲ್ಲಿ ತೀವ್ರ ಆತಂಕ ಮೂಡಿದೆ.

ನಗರದ ಚೌಕ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನಂದಿ ಕಾಲೋನಿಯ ಪ್ರತಿಷ್ಠಾಪನಾ ಸಮಿತಿಯ ಯಾವ ಸದಸ್ಯರು ಕೂಡ ಈ ವರೆಗೆ ಪೋಲಿಸರಿಗೆ ದೂರು ಸಲ್ಲಿಸಿಲ್ಲ.

ಸಂಶಯ:
ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಬಡವಾಯ ಎರಡು ಗುಂಪುಗಳ ಮಧ್ಯೆ ವೈಮನಸ್ಸಿದ್ದರಿಂದ ಅಸಮಾಧಾನಗೊಂಡ ಇನ್ನೊಂದು ಗುಂಪು ಮೂರ್ತಿಯನ್ನು ವಿರೂಪಗೊಳಿಸರಬಹುದೆಂಬ ಸಂಶಯ ಪೋಲಿಸರದ್ದಾಗಿದೆ.
ಒಟ್ಟಾರೆ ಈ ಬಗ್ಗೆ ದೂರು ಬಂದ ಮೇಲೆಯೆ ಸತ್ಯಾಂಶ ಹೊರಬರಬಹುದು.

LEAVE A REPLY

Please enter your comment!
Please enter your name here