ಕಲಬುರಗಿ 100% ಪಾಲಿಕೆಯ ಬಿಜೆಪಿ ಅಭ್ಯರ್ಥಿಯೇ ಮೇಯರ್ :ರವಿಕುಮಾರ

0
1046
Various combinations worked for BJP in Sira: N Ravikumar | Deccan Herald

ಕಲಬುರಗಿ, ಸೆ. 12: ಕಲಬುರಗಿ ಮಹಾನಗರಪಾಲಿಕೆಯಲ್ಲಿ ನೂರಕ್ಕೆ ನೂರು ಪ್ರತಿಶತ ಬಿಜೆಪಿ ಅಭ್ಯರ್ಥಿಯೇ ಮೇಯರ್ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತ, ಪ್ರಸ್ತುತ ಪಾಲಿಕೆಯಲ್ಲಿ ಮೇಯರ್ ಖುರ್ಚಿಗಾಗಿ ಹಗ್ಗ ಜಗ್ಗಾಟ ವಿಚಾರವಾಗಿ ನಮ್ಮ ನಾಯಕರುಗಳು ಈಗಾಗಲೇ ಜೆಡಿಎಸ್ ಮುಖಂಡರ ಜೊತೆ ಮಾತನಾಡಿದ್ದಾರೆ, ಮೇಯರ್ ಚುನಾವಣೆಯ ಅಧಿಸೂಚನೆ ಪ್ರಕಟಿಸದ ಬಳಿಕ ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎಂದು ಅವರು ನುಡಿದರು.
ನಮಗೆ ಮೇಯರ್ ಸ್ಥಾನ ಬೇಕು ಎಂಬ ಜೆಡಿಎಸ್ ಮುಖಂಡರ ವಿಚಾರವಾಗಿದ್ದು, ಆದರೆ ಕೇವಲ 4 ಸ್ಥಾನಗಳನ್ನು ಪಡೆದ ಅವರಿಗೆ ಮೇಯರ್ ಸ್ಥಾನಕೊಡುವುದು ಕಷ್ಟದ ಕೆಲಸವಾಗಿದೆ ಎಂದು ಹೇಳಿದರು.
ಮೇಯರ್ ಸ್ಥಾನವೊಂದನ್ನು ಹೊರತುಪಡಿಸಿ ಉಳಿದ ಸ್ಥಾನಗಳನ್ನು ಜೆಡಿಎಸ್‌ಗೆ ನೀಡಬಹುದಾಗಿದೆ, ಈ ನಿಟ್ಟಿನಲ್ಲಿ ಮಾತುಕತೆ ಪ್ರಗತಿಯಲ್ಲಿವೆ ಎಂದರು.
ಜೆಡಿಎಸ್ ನಮ್ಮೊಂದಿಗೆ ಬರಲಿದೆ ಎಂಬ ವಿಶ್ವಾಸವನ್ನು ಕೂಡ ಅವರು ವ್ಯಕ್ತಪಡಿಸಿದರು.
ಮಹಾನಗರಪಾಲಿಕೆಗೆ ಚುನಾವಣೆ ನಡೆದು ಫಲಿತಾಂಶ ಪ್ರಕಟಿಸಿ ಒಂದು ವಾರವಾದರೂ ಇನ್ನು ಮೇಯರ್ ಯಾರು ಎಂಬುದು ಕಗ್ಗಾಂಟಾಗಿ ಉಳಿದಿದ್ದು, ಈ ಮೇಯರ್ ಹಗ್ಗ ಜಗ್ಗಾಟದ ಅಂತಿಮ ಘಟ್ಟ ಇನ್ನೆರ

LEAVE A REPLY

Please enter your comment!
Please enter your name here