ಸೆ. 6ರಂದು ಎನ್.ವಿ. ಎಸಿಟಿ ಶಾಲೆಯಲ್ಲಿ ಮತ ಏಣಿಕೆ ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣ ಫಲಿತಾಂಶ

0
840

ಕಲಬುರಗಿ, ಸೆ. 05: ಸೆ. 3ರಂದು ನಡೆದ ಮಹಾನಗರಪಾಲಿಕೆ ಚುನಾವಣೆಯ ಮತ ಏಣಿಕೆ ಕಾರ್ಯ ನಾಳೆ ಸೆ. 6ರಂದು ಬೆಳಿಗ್ಗೆ 8.00 ಗಂಟೆಗೆ ನಗರದ ಎಸಿಟಿ ನ್ಯೂತನ ವಿದ್ಯಾಲಯ ಅಂತರಾಷ್ಟಿçÃಯ ಶಾಲೆಯಲ್ಲಿ ಜರುಗಲಿದೆ ಎಂದು ಜಿಲ್ಲಾಧಿಕಾರಿಗಳಾದ ವಿವಿ ಜೋತ್ಸಾö್ನ ಅವರು ತಿಳಿಸಿದ್ದಾರೆ.
ಮತ ಎಣಿಕೆಯ ಪೂರ್ವ ಸಿದ್ದತೆ ಬಗ್ಗೆ ಮತ ಏಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೌಂಟಿoಗಾಗಿ ಒಟ್ಟು 11 ಕೊಣೆಗಳ ವ್ಯವಸ್ಥೆ ಮಾಡಲಾಗಿದ್ದು, ಒಂದೊoದು ಕೊಣೆಯಲ್ಲಿ ಐದು ವಾರ್ಡಗಳ ಮತ ಏಣಿಕೆ ನಡೆಯಲಿದ್ದು, ಪ್ರತಿ ವಾರ್ಡಗೆ ಎರಡು ಸುತ್ತಿನ ಮತ ಏಣಿಕೆ ನಡೆದು ಅದರ ಫಲಿತಾಂಶದ ನಂತರ ಮತ್ತೊಂದು ವಾರ್ಡಿನ ಮತ ಏಣಿಕೆ ಕೈಗೆತ್ತಿಗೊಳ್ಳಲಾಗುವುದು ಎಂದು ವಿವರಿಸಿದರು.
ಎಲ್ಲ ಹನ್ನೊಂದು ಕೊಣೆಗಳಿಗೆ ಒಬ್ಬೊಬ್ಬ ಆರ್.ಓ.ಗಳನ್ನು ನೇಮಿಸಲಾಗಿದ್ದು, ಅಲ್ಲದೇ ಈ ಮತ ಏಣಿಕೆಗಾಗಿ ಒಟ್ಟು 110 ಸಿಬ್ಬಂದಿಗಳು ಕಾರ್ಯನಿರತರಾಗಲಿದ್ದಾರೆ ಎಂದು ಅವರು ತಿಳಿಸಿದರು.

ನಾಳೆ ಬೆಳಿಗ್ಗೆ 12 ರಿಂದ 1 ಗಂಟೆಯ ಸುಮಾರಿಗೆ ಎಲ್ಲ 55 ವಾರ್ಡಗಳ ಫಲಿತಾಂಶ ಹೊರಬಿಳುವ ಸಾಧ್ಯತೆಯಿದೆ ಎಂದರು.
ಅಭ್ಯರ್ಥಿಗಳು ವಿಜಯಿಗಳಾದ ಬಳಿಕ ಅವರ ಅನುಯಾಯಿಗಳು, ಆಯಾ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ ಜಿಲ್ಲಾಧಿಕಾರಿಗಳು, ಆನಂದ ಹೋಟೆಲ್‌ದಿಂದ ಮತ ಏಣಿಕೆ ಕೇಂದ್ರದ ವರೆಗಿನ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಮತ ಎಣಿಕೆ ದಿನದಂದು ಮತ ಎಣಿಕೆ ಕೇಂದ್ರಕ್ಕೆ ರಜೆಯನ್ನು ಘೊಷಿಸಲಾಗಿದೆ. ಮತ ಎಣಿಕೆ ಕೇಂದ್ರ ವ್ಯಾಪ್ತಿಯ 100 ಮೀಟರ್ ಅಂತರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಮತ ಎಣಿಕೆ ಪೂರ್ವದಿನದಂದು ದಿನಾಂಕ: 05.09.2021ರ ಸಾಯಂಕಾಲ 06-00 ಗಂಟೆಯಿAದ ಮತ ಎಣಿಕೆ ದಿನದ ಮಧ್ಯರಾತ್ರಿಯವರೆಗೆ ಮಧ್ಯಪಾನ ಮಾರಾಟ ಹಾಗೂ ತಯಾರಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದರು.

ಸ್ಟಾçAಗ್ ರೂಂನ್ನು ಅಭ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟರ್ ಸಮ್ಮುಖದಲ್ಲಿ ಅಂದರೆ ಮತ ಎಣಿಕೆ ಗೊತ್ತುಪಡಿಸಿದ ದಿನಾಂಕ: 06.09.2021ರ ಬೆಳಿಗ್ಗೆ 07-45 ಗಂಟೆಗೆ ಸರಿಯಾಗಿ ತೆರೆಯಾಗುವುದು. ಸದರಿ ವಿಷಯವನ್ನು ಸಂಬAಧಪಟ್ಟ ಅಭ್ಯರ್ಥಿಯನ್ನು ಚುನಾವಣಾಧಿಕಾರಿಗಳು ತಿಳಿಸಬೇಕಾಗಿರುತ್ತದೆ.
ಪ್ರತಿಯೊಬ್ಬ ಚುನಾವಣಾಧಿಕಾರಿಗೆ 05 ಟೇಬಲ್‌ಗಳಂತೆ ನಿಗಧಿಪಡಿಸಲಾಗಿದೆ ಹಾಗೂ ಒಂದು ಟ್ಯಾಬುಲೇಷನ್ ಟೇಬಲ್ ಅಳವಡಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು (55) ಮತ ಎಣಿಕೆ ಮೇಲ್ವಿಚಾರಕರನ್ನು ಹಾಗೂ (55) ಜನ ಎಣಿಕೆ ಸಹಾಯಕರನ್ನು ಶೇ 10% ಹೆಚ್ಚುವರಿಯಾಗಿ ಈಗಾಗಲೇ ನೇಮಕಾತಿಗೊಳಿಸಿ, ಈಗಾಗಲೇ ಅವರಿಗೆ ತರಬೇತಿಯನ್ನು ನೀಡಲಾಗಿದೆ.
ಪ್ರತಿಯೊಬ್ಬ ಅಭ್ಯರ್ಥಿಗೆ (05) ಜನ ಎಣಿಕೆ ಏಜೆಂಟರ್ ಪಾಸುಗಳನ್ನು ಆಯಾ ಚುನಾವಣಾಧಿಕಾರಿಗಳ ಮುಖಾಂತರ ಒದಗಿಸಲು ಕ್ರಮ ಜರುಗಿಸಲಾಗಿದೆ.ಒಂದು ವಾರ್ಡಿನ ಮತ ಎಣಿಕೆ ಪೂರ್ಣಗೊಂಡ ತರುವಾಯ ಅಂದರೆ ಅಂಚೆ ಮತ ಪತ್ರದ ಎಣಿಕೆಯನ್ನು ಚುನಾವಣಾಧಿಕಾರಿಗಳ ಟೇಬಲ್‌ನಲ್ಲಿ ಮಾಡಿದ ನಂತರ ಹಾಗೂ ಟ್ಯಾಬುಲೇಷನ್ ತರುವಾಯ ನಿಯಮಾನುಸಾರ ಫಲಿತಾಂಶವನ್ನು ಸಂಬAಧಪಟ್ಟ ಚುನಾವಣಾಧಿಕಾರಿ ಘೋಷಣೆ ಮಾಡುವರು.
ಭದ್ರತಾ ಕೋಠಡಿಯಿಂದ ಎಣಿಕೆ ಕೇಂದ್ರಕ್ಕೆ, ಎಣಿಕೆ ಟೇಬಲ್ಲಿಗೆ ವ್ಯವಸ್ಥಿತವಾಗಿ ಕಂಟ್ರೋಲ್ ಯುನಿಟ್ ಕಳುಹಿಸಲು ಲಾಗ್ ಪುಸ್ತಕ ನಿರ್ವಹಿಸಿ ಎಣಿಕೆ ಮೇಲ್ವಿಚಾರಕರ ಸಹಿಂiÀiನ್ನು ಪಡೆಯಲು ಮತ್ತು ಎಣಿಕೆ ನಂತರ ಕಂಟ್ರೋಲ್ ಯುನಿಟ್‌ನ್ನು ಭದ್ರತಾ ಕೊಠಡಿಗೆ ಹಿಂಪಡೆದು ಮತ್ತೆ ನಿಯಮಾನುಸಾರ ಮೊಹರು ಮಾಡಲು ಆಯಾ ಸಹಾಯಕ ಚುನಾವಣಾಧಿಕಾರಿಗಳಿಗೆ ಒಂದು ತಂಡವನ್ನು ರಚಿಸಿದೆ.
ಮತ ಎಣಿಕೆ ದಿನದಂದು ನಗರ ಪೋಲಿಸ್ ಆಯುಕ್ತರಿಂದ ಸೂಕ್ತ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಅಂತೆಯೇ ಮತ ಎಣಿಕೆ ಕೇಂದ್ರದ ವಿದ್ಯುಚ್ಛಕ್ತಿ ಕಡಿತಗೊಳಿಸದಂತೆ ಜೇಸ್ಕಾಂ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.
ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಯವರು ಹಾಗೂ ರಾಜಕೀಯ ಪಕ್ಷದವರಿಗೆ ಥರ್ಮಲ್ ಸ್ಕಾö್ಯನಿಂಗ್‌ಗೆ ಒಳಪಡಿಸಲಾಗುವುದು ಹಾಗೂ ಮತ ಎಣಕೆ ಕೇಂದ್ರ ಎಲ್ಲಾ ಕೋಠಡಿಗಳಿಗೆ ಸೂಕ್ತ ಸ್ಯಾನಿಟೈಜೆಷನ್ ಮಾಡಿಸಲಾಗಿದೆ ಹಾಗೂ ಎಲ್ಲಾ ಮತ ಎಣಿಕೆ ಮೇಲ್ವಿಚಾರಕರಿಗೆ ಹಾಗೂ ಸಿಬ್ಬಂದಿಯವರಿಗೆ ಹ್ಯಾಂಡ್‌ಗ್ಲೌಸ್, ಫೇಸ್ ಶೀಲ್ಡ್, ಮಾಸ್ಕ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಂತೆ ಕೋವಿಡ್ ನಿಯಮಾವಳು ಪಾಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ವಿವರಸಿದರು.

LEAVE A REPLY

Please enter your comment!
Please enter your name here