ಪೋಲಿಸ್ ಆಯುಕ್ತರಿಂದ ಶಾಸಕಿ ಅಳಿಯನಿಗೆ ಥಳಿತ ಪ್ರಕರಣ ಖಂಡಿಸಿ ಕಾಂಗೈದಿoದ ಬೃಹತ್ ಪ್ರತಿಭಟನೆ

0
879

ಕಲಬುರಗಿ, ಸೆ. 05: ಕಲಬುರಗಿ ನಗರ ಪೋಲಿಸ ಆಯುಕ್ತರಿಂದ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತೀಮಾ ಅವರ ಅಳಿಯನ ಮೇಲೆ ಹಲ್ಲೆ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತು.
ದರ್ಗಾ ಪ್ರದೇಶದ ಮುಸ್ಲಿಂ ಚೌಕ್‌ದಿಂದ ಐಜಿಪಿ ಕಛೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಪೊಲೀಸ್ ಆಯುಕ್ತ ವೈಎಸ್ ರವಿಕುಮಾರ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಈಶಾನ್ಯ ವಲಯ ಐಜಿಪಿ ಮನೀಶ್ ಖರ್ಬೆಕರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಹಲ್ಲೆಗೊಳಗಾದ ಆದೀಲ್ ಸುಲೇಮಾನ್, ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಫಾತೀಮಾ ಅವರ ಸಂಬAಧಿ ಜೊತೆಗೆ ಅವರ ಆಪ್ತ ಸಹಾಯಕರು ಕೂಡಾ ಆಗಿದ್ದಾರೆ.
ಸೆಪ್ಟೆಂಬರ್ 1 ತಡರಾತ್ರಿ 2 ಗಂಟೆಗೆ ಶಾಸಕರನ್ನ ಮನೆಗೆ ಡ್ರಾಪ್ ಮಾಡಿ ತಮ್ಮ ಮನೆಗೆ ತೆರಳುತ್ತಿದ್ದ ಆದೀಲ್ ಸುಲೇಮಾನ್
ಮೇಲೆ ಗಸ್ತಿನಲ್ಲಿದ್ದ ನಗರ ಪೊಲೀಸ್ ಆಯುಕ್ತ ವೈ ಎಸ್ ರವಿಕುಮಾರ್ ಹಲ್ಲೆ ಮಾಡಿದ್ದರು ಅಂತಾ ಆದೀಲ್ ಸುಲೇಮಾನ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದರು.
ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕಿ ಕನೀಜ್ ಫಾತೀಮಾ, ಮಾಜಿ ಶಾಸಕ ಬಿ. ಆರ್. ಪಾಟೀಲ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರುಗಳು, ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here