ಉತ್ತರ ಕ್ಷೇತ್ರದ ಶಾಸಕಿ ಅಳಿಯನ ಮೇಲೆ ಪೋಲಿಸ್ ಆಯುಕ್ತರಿಂದ ಹಲ್ಲೆ ಆರೋಪ

0
1536

ಕಲಬುರಗಿ, ಸೆ. 02: ನನ್ನ ಮೇಲೆ ಕಲಬುರಗಿ ಪೋಲಿಸ್ ಆಯುಕ್ತರಾದ ಡಾ. ವೈ.ಎಸ್. ರವಿಕುಮಾರ ಅವರು ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆದಿಲ್ ಸುಲೇಮಾನ್ ಅವರು ಆರೋಪ ಮಾಡಿದ್ದಾರೆ.
ಹಲ್ಲೆಗೊಳಗಾದ ಆದಿಲ್ ಸುಲೇಮಾನ್ ಅವರು ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ ಫಾತೀಮಾ ಅವರ ಅಳಿಯ ಎಂದರೆ ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ಅವರ ಸೋದರ,

ಬುಧುವಾರ ತಡ ರಾತ್ರಿ 2 ಗಂಟೆ ಸುಮಾರಿಗೆ ಶಾಸಕರ ಕಾರೊಂದು ನಗರದ ಸಾಥ ಗುಮ್ಮಜ ಹತ್ತಿರ ಬರುತ್ತಿದ್ದಾಗ ಎದುರಿಗೆ ಬಂದ ಪೋಲಿಸ್ ಆಯುಕ್ತರು ಎಲ್ಲಿಗೆ ಹೋಗಿದ್ದೀರಿ ಎಂದು ಪ್ರಶ್ನಿಸಿದಾಗ ಶಾಸಕರ ಸಹೋದರನಿಗೆ ದರ್ಗಾ ಹತ್ತಿರ ಬಿಟ್ಟು ಬರಲು ಹೋಗಿದ್ದೇವು ಎಂದು ಹೇಳಿದಾಗ, ಏನಿಲ್ಲ ಇದೆಲ್ಲ ನಿಮ್ಮ ಪ್ರಚಾರ ಗೀಜಾರ ಇದೆ ಕೆಲಸ ಮಾಡುತ್ತಿರಿ ಎಂದು ಹೇಳುತ್ತ ಜೊತೆಗಿದ್ದ ಪೋಲಿಸರಿಗೆ ನನಗೆ ಹೊಡೆಯಲು ಆದೇಶಿಸಿದಾಗ, ಅರ‍್ಯಾರು ನನ್ನ ಮೇಲೆ ಕೈ ಮಾಡಲಿಲ್ಲ, ಇದನ್ನು ಕಂಡ ಕಮಿಷನ್ನರರೇ ಸ್ವತಃ ಪ್ಲಾಸ್ಟಿಕ್ ಪೈಪ್ ತೆಗೆದುಕೊಂಡು “ಇಸಕಾ ಪೈರ್ ತೋಡೋ, ಕಾಲು ಮುರಿಯಿರಿ” ಹೇಳುತ್ತ ನನ್ನ ಮೇಲೆ ಎಲ್ಲಿ ಬಂತು ಅಲ್ಲೇ ಹಲ್ಲೆ ಮಾಡಿದ್ದಾರೆ, ನನ್ನ ಮೇಲೆ ಕೈಮಾಡದ ಪೋಲಿಸರ ಬ್ಯಾಡ್ಜ್ಗಳನ್ನು ಕಸಿದುಕೊಂಡು ಅವರಿಗೂ ಕೂಡ ಹೋಡಿದ್ದಾರೆ ಎಂದು ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಡಾ. ಶರಣಪ್ರಕಾಶ ಪಾಟೀಲ್ ಅವರ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೆದೂರಿಗೆ ಶರ್ಟ ತೆಗೆದು ಅವರಿಗಾದ ಗಾಯಗಳನ್ನು ತೋರಿಸಿದರು.
ನಂತರ ಅಲ್ಲಿಂದ ಡಾ. ಶರಣಪ್ರಕಾಶ ಪಾಟೀಲ್, ಶಾಸಕಿ ಕನೀಜಾ ಫಾತೀಮಾ, ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಅವರೊಂದಿಗೆ ಸರಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here