ಪಾಲಿಕೆಯಲ್ಲಿ ಸ್ವಂತ ಶಕ್ತಿಯಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ:ಹೆಚ್.ಡಿ.ಕುಮಾರಸ್ವಾಮಿ

0
652
Watch your words and act your age': HDK warns BSY | Deccan Herald

ಕಲಬುರಗಿ, ಆಗಸ್ಟ 30: ಕಲಬುರಗಿ ಮಹಾನಗರಪಾಲಿಕೆಯಲ್ಲಿ ನಮ್ಮ ಪಕ್ಷ ಸ್ವಂತ ಶತ್ತಿಯಿಂದ ಅಧಿಕಾರಕ್ಕೆ ಈ ಬಾರಿ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜನತಾ ದಳದ ನಾಯಕರಾದ ಹೆಚ್. ಡಇ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಅವರು ಇಂದು ನಗರಕ್ಕೆ ಆಗಮಿಸಿ, ಬರುವ ತಿಂಗಳು ನಡೆಯಲಿರುವ ಮಹಾನಗರಪಾಲಿಕೆ ಚುನಾವಣೆ ಕುರಿತಂತೆ ಪತ್ರಕರ್ತರೊಂದಿಗೆ ಮಾತನಾಡುತ್ತ, ಕಾಂಗ್ರೆಸ್ ನಾಯಕರು ಪ್ರತಿನಿತ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ, ಅವರ ಅವಧಿಯಲ್ಲಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ ಎಂದು ಕುಮಾರಸ್ವಾಮಿ ರೈತರು ಬೆಳೆಯುವ ಬೆಳೆಯನ್ನು ರಫ್ತು ಮಾಡಲು ಉತ್ತೇಜನ ನೀಡಲು ಸಂಸ್ಥೆ ಪ್ರಾರಂಭ ಮಾಡಬೇಕು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಆದ್ರೆ ರಾಜ್ಯದಿಂದ ಸಾವಿರಾರು ಸಾವಿರಾರು ಕೋಟಿ ರೂಪಾಯಿ ಕೃಷಿ ಉತ್ಪನ್ನ ರಫ್ತಾಗುತ್ತದೆ ಅದರ ಪರಿಜ್ಞಾನವೇ ಕೇಂದ್ರ ಸಚಿವರಿಗೆ ಇಲ್ಲ, ಅಧಿಕಾರಿಗಳಿಗೂ ಇಲ್ಲ ಒಟ್ಟಿನಲ್ಲಿ ಈ ಸರಕಾರದಲ್ಲಿ ಅಭಿವೃದ್ಧಿಪರ ಕಾರ್ಯಕ್ರಮ ಕಾಣಲು ಸಾಧ್ಯವಿಲ್ಲ ಎಂದು ಅವರು ಕುಟಿಕದರು.
ಕೋವಿಡ್ ಕಾರಣದಿಂದಾಗಿ ಸರಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಲು ಬೀದಿಗಿಳಿದು ಹೋರಾಟ ಮಾಡಲು ಆಗಲಿಲ್ಲ, ಆದರೆ ಆಡಳಿತರೂಢ ಬಿಜೆಪಿ ಸರಕಾರದ ಪರವಾಗಿಯೂ ನಾನಿಲ್ಲ ಎಂದ ಅವರು ಕಾಂಗ್ರೆಸ್ ಅಧ್ಯಕ್ಷರು ಯಡಿಯೂರಪ್ಪ ಪರವಾಗಿ ಸಾಫ್ಟ ಕಾರ್ನರ್ ಮಾತುಗಳಣ್ನು ಹೇಳಿದ್ದಾರೆ, ಆದರೆ ನಮಗೆ ಸಾಫ್ಟ ಕಾರ್ನರ್ ಅವಶ್ಯಕತೆ ಇಲ್ಲ, ಅವಶ್ಯಕತೆ ಬಂದಾಗ ಹೋರಾಟಕ್ಕೆ ಧುಮುಕುತ್ತೇವೆ ಎಂದು ನುಡಿದರು.
ರಾಜಕಾರಣದಲ್ಲಿ ಇತ್ತೀಚೆಗೆ ಸಿದ್ಧಾಂತಗಳಲ್ಲಿ ಬೆನ್ನು ತಟ್ಟಿಕೊಳ್ಳೋ ಸ್ಥಿತಿ ಇಲ್ಲ, ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೇ ನಮ್ಮ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಇರಲಿಲ್ಲ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಮತನಾಡಿದ ಕುಮಾರಸ್ವಾಮಿ, ಪಕ್ಷ ಸಂಘಟನೆ ವಿಚಾರವಾಗಿ ನಾನು ತಪ್ಪು ಅಂತ ಹೇಳಲ್ಲ ಮತ್ತು ಅದರ ಬಗ್ಗೆ ಸಣ್ಣದಾಗಿ ಮಾತನಾಡುವುದಿಲ್ಲ ಎಂದರು.
ಪ್ರಸ್ತುತ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಅಂತಾರೆ, ಆದರೆ ಚುನಾವಣೆಗಳಲ್ಲಿ ಎಲ್ಲಿಂದ ಈ ಮಾರ್ಗಸೂಚಿ ಜಾರಿಯಾಗುತ್ತಿದೆ? ಎಂದ ಅವರು ಧಿಡೀರನೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದ್ದರಿಂದ ಚುನಾವಣೆ ಅನಿವಾರ್ಯವಾಯಿತು ಎಂದರು.
ಹೊಸದಾಗಿ ಪಕ್ಷ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಜೆಡಿಎಸ್ ಬಾಗಿಲು ತೆರೆದಿದೆ, ಹೋಗುವವರು ಹೋಗಬೇಕೆಂದರೆ ಹೋಗಬಹುದು, ಇರೋರು ಇರಬಹುದು ಎಂದು ಹೇಳಿದರು.
ಮೈಸುರು ಅತ್ಯಾಚಾರ ಪ್ರಕರಣದಲ್ಲಿ ಸಕರಾರದ ವೈಫಲ್ಯತೆ ಇದೆ, ಆರೋಪಿಗಳು ಈ ಹಿಂದೆ ಇದೇ ರೀತಿ ಅನೇಕ ಕೃತ್ಯವೆಸಗಿದ್ದಾರೆ ಎಂದು ಹೇಳುವ ಪೋಲಿಸ ಅಧಿಕಾರಿಗಳು ಇಷ್ಟು ದಿನ ಏನ ಮಾಡ್ತಿದ್ದರು ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here