ಜಿಲ್ಲೆಯಲ್ಲಿ ಹೆಚ್ಚಿದ ಪ್ರವಾಹ ನೀರಿನಲ್ಲಿ ಕೊಚ್ಚಿಹೋಗ್ತಿದ್ದ ಯುವಕನ ರಕ್ಷಣೆ

0
694

ಕಲಬುರಗಿ, ಆಗಸ್ಟ. 31: ಹರಿಯೋ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಯುವಕನ ಗ್ರಾಮದ ಯುವಕನೋರ್ವ ರಕ್ಷಣೆ ಮಾಡಿದ ಘಟನೆ ಕಾಳಗಿ ತಾಲೂಕಿನ ಹಳೆ ಹೆಬ್ಬಾಳ ಗ್ರಾಮದ ಸೇತುವೆ ಬಳಿ ನಿನ್ನೆ ಸಂಜೆ ನಡೆದಿದೆ.
ಹಳ್ಳದ ಹರಿವು ತೀವ್ರವಾಗಿದ್ದರಿಂದ ಕಾಶಿನಾಥ ಎನ್ನುವ ಯುವಕ ನೀರಿನಲ್ಲಿ ಕೊಚ್ಚಿಹೊಗುತ್ತಿದ್ದ ಸಮಯದಲ್ಲಿ ಮತ್ತೋರ್ವ ಯುವಕ ತಕ್ಷಣವೇ ನೀರಿಗೆ ಧುಮುಕಿ ಯುವಕ ಪ್ರಾಣ ರಕ್ಷಣೆ ಮಾಡಿದ್ದಾನೆ.
ಹಳ್ಳದಲ್ಲಿ ಈಜಾಡಲು ಹೋದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಬೆಣ್ಣೆತೋರಾ ಡ್ಯಾಂನಿAದ ನೀರು ಬಿಟ್ಟಿರುವುದರಿಂದ ಹಳ್ಳಗಳು ಉಕ್ಕಿ ಹರಿಯುತ್ತಿತ್ತು, ಆದರೂ ಇದನ್ನು ಲೆಕ್ಕಿಸದೇ ಯುವಕನ ಸಮಯ ಪ್ರಜ್ಞೆ ಮತ್ತು ಹರಸಾಹಸದಿಂದ ಯುವಕನ ಪ್ರಾಣವನ್ನು ಉಳಿಸಿದ್ದಾನೆ.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಿಳುತ್ತಿರುವ ಮಳೆಯಿಂದಾಗಿ ಹಳ್ಳ, ಕೊಳ್ಳ, ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹವುಂಟಾಗುತ್ತಿದ್ದು, ಇದರಿಂದಾಗಿ ಜನರು ಆತಂಕ್ಕೆಕೊಳಗಾಗಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಡ್ಯಾಂನಿAದ ನೀರು ಬಿಡುವ ಬಗ್ಗೆ ಮುನ್ನಚ್ಚರಿಕೆ ನೀಡಿದ್ದರೂ ಕೂಡ ಇಂತಹ ಘಟನೆಗಳು ನಡೆಯುತ್ತಿವೆ.

LEAVE A REPLY

Please enter your comment!
Please enter your name here