ಕಲಬುರಗಿ, ಆಗಸ್ಟ. 28: ಬರುವ ತಿಂಗಳು 3ರಂದು ನಡೆಯಲಿರುವ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೆರುತ್ತಿರುತ್ತಿದ್ದು, ಮತದಾರರ ಮನ ಸೇಳೆಯಲು ಅಭ್ಯರ್ಥಿಗಳಿಂದ ನಾನಾ ಕಸರತ್ತು ನಡೆಸುತ್ತಿದ್ದಾರೆ.
ಮತಕ್ಕಾಗಿ ವಿವಿಧ ರೀತಿಯಲ್ಲಿ ಆಮೀಷೆ ಒಡ್ಡಲಾಗುತ್ತಿದ್ದು, ಅದರಲ್ಲೂ ಒಂದು ಕೈ ಮುಂದೆ ಎಂಬAತೆ ಜೆ.ಡಿ.ಎಸ್. ಅಭ್ಯರ್ಥಿಯಿಂದ ಮತದಾರಿಗೆ ವಿಶೇಷ ರಿಯಾಯತಿ ಘೋಷಣೆಯ ಕರಪತ್ರವು ಮುದ್ರಿಸಲಾಗಿದೆ.
ಕಲಬುರಗಿಯ ವಾರ್ಡ್ ಸಂಖ್ಯೆ 42ರ ಜೆಡಿ ಎ¸ ಅಭ್ಯರ್ಥಿಯಿಂದ ಮತದಾರರಿಗೆ ಹೆಲ್ತ್ ಕಾರ್ಡ್ ಮುದ್ರಿಸಲಾಗಿದ್ದು, ಅದರಲ್ಲಿ ಜೆಡಿಎಸ್‌ಗೆ ಮತ ಹಾಕಿ ಗೆಲ್ಲಿಸಿದ್ರೆ ಐದು ವರ್ಷಗಳ ಕಾಲ ರಿಯಾಯಿತಿ ದರದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಔಷಧಿಗಳಲ್ಲಿಯೂ ಕೂಡ ಶೇ. 10%ರಷ್ಟು ಡಿಸ್ಕೌಂಟ್ ಘೋಷಣೆಯಾಗಿದ್ದು ಕಲಬುರಗಿಯ ಕ್ಯೂಪಿ ಆಸ್ಪತ್ರೆಯಲ್ಲಿ ಐದು ವರ್ಷಗಳ ಕಾಲ ಮತದಾರರಿಗೆ ಡಿಸ್ಕೌಂಟ್ ನಲ್ಲಿ ಟ್ರೀಟ್‌ಮೆಂಟ್.
ವಾರ್ಡ್ ನಂಬರ್ 42 ಜೆ ಡಿ ಎಸ್ ಅಭ್ಯರ್ಥಿ ಅಲೀಮ್ ಪಟೇಲ್ ರಿಂದ ಮತದಾರರಿಗೆ ಆಮಿಷೆ ಒಡ್ಡಿದ್ದು ಅವರು ಓಟಿಗಾಗಿ ನೀಡಿದ ರಿಯಾಯಿತಿ ಹೀಗಿದೆ:
ಓಪಿಡಿ 50% ಐಪಿಡಿ 20 ರಿಂದ 30% ಮೇಡಿಕಲ್‌ನಲ್ಲಿ ಶೇ. 10% ಮತ್ತು ಲ್ಯಾಬ್ 20% ಡಿಸ್ಕೌಂಟ್ ಘೋಷಣೆ ಪತ್ರದಲ್ಲಿ ನಮೂದಿಸಲಾಗಿದೆ.
ವಾರ್ಡ್ ನಂಬರ್ 42 ರ ಮತದಾರರ ಮನೆಮನೆಗೆ ತೆರಳಿ ಹೆಲ್ತ್ ಕಾರ್ಡ್ನ್ನು ಸ್ವತಃ ಅಭ್ಯರ್ಥಿ ಅಲೀಮ್ ಪಟೇಲ್ ಅವರು ಹಂಚಿಕೆ ಮಾಡಿದ್ದಾರೆ.
ಈ ಬಗ್ಗೆ ಆಕ್ಷಪಣೆ ವ್ಯಕ್ತಪಡಿಸಿ, ಕಾಂಗ್ರೆಸ್ ಪಕ್ಷವು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿದೆ.
ಚುನಾವಣೆಯಲ್ಲಿ ಈ ರೀತಿಯ ಆಮೀಷ ಒಡ್ಡುವುದು ನಡೆಯುತ್ತಿದ್ದರೂ ಕೂಡಾ ಜಿಲ್ಲಾಡಳಿತ ಕಣ್ಣು ಮುಚ್ಚಿಕುಳಿತುಕೊಂಡAತಿದೆ.
ಮತದಾರರ ಮತ ಚೀಟಿ ಮುದ್ರಣಕ್ಕಾಗಿ ರಾಜ್ಯ ಸರಕಾರ ಖಾಸಗಿ ಕಂಪನಿಯೊAದಕ್ಕೆ ಇದರ ಹಕ್ಕು ನೀಡಿದ್ದು, ಅದನ್ನು ಕಲಬುರಗಿ ಜಿಲ್ಲೆಯಲ್ಲಿ ಅದರಲ್ಲೂ ಮಹಾನಗರಪಾಲಿಕೆ ಚುನಾವಣೆಗಾಗಿ ಸೂಪರ್ ಝರಾಕ್ಸ್ ಎಂಬ ಖಾಸಗಿಯವರಿಗೆ ಹಕ್ಕು ನೀಡಿದ್ದು, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಂದ ಇವರು ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ.
ಉದಾಹರಣೆಗೆ ಒಂದು ವಾರ್ಡನಲ್ಲಿ 7 ಸಾವಿರ ಮತದಾರರಿದ್ದರೆ ಬರೀ ಕಪ್ಪು ಬಿಳುಪು ಮುದ್ರಣದ ಮತದಾನದ ಚೀಟಿಗಳಿಗೆ 17 ರಿಂದ 19 ಸಾವಿರ ರೂಪಾಯಿ, ಅಲ್ಲದೇ 9 ಸಾವಿರ ಮತದಾರರಿರುವ ವಾರ್ಡಿಗೆ 23 ಸಾವಿರ ರೂ ದರ ನಿಗದಿ ಮಾಡಿ, ಹಣ ಪಡೆದ ಮೇಲೆಯೆ ಚೀಟಿ ಮುದ್ರಿಸಿ ಕೊಡಲಾಗುತ್ತಿದೆ ಇದು ಮಹಾನಗರಪಾಲಿಕೆಯ ಆಯುಕ್ತರ ಗಮನಕ್ಕೂ ಬಂದರೂ ಯಾವುದೇ ಕ್ರಮವಾಗಿಲ್ಲ.
ನಗರದಲ್ಲಿ ಒಟ್ಟು 55 ವಾರ್ಡಗಳಿದ್ದು, ಒಟ್ಟು ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 350ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲರಿಂದ ಈ ರೀತಿಯ ಹಣ ಸಂಗ್ರವಾದರೆ ಇದು 60 ರಿಂದ 70 ಲಕ್ಷ ರೂ.ಗಳ ವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಡಳಿ ಮತ್ತು ಮಹಾನಗರಪಾಲಿಕೆ ಕ್ರಮ ತೆಗೆದುಕೊಳ್ಳುವರೆ ಎಂಬುವದು ಪ್ರಶ್ನೆಯಾಗಿದೆ.