ಬಿಜೆಪಿಯಿಂದ ಮಹಾನಗರಪಾಲಿಕೆಯ ಅಭ್ಯರ್ಥಿಗಳ ಅಂತಿಮ ಪಟ್ಟಿ

0
1661

ಕಲಬುರಗಿ, ಆಗಸ್ಟ 23: ಮುಂದಿನ ತಿಂಗಳು ಸಪ್ಟಂಬರ್ 3ರಂದು ನಡೆಯಲಿರುವ ಕಲಬುರಗಿ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಹಲವಾರು ಹಳೆ ಮುಖಗಳಿಗೆ ಮಣೆ ಹಾಕದೇ ಹೊಸಬರನ್ನು ಆಯ್ಕೆಮಾಡುವ ಮೂಲಕ ಬಿಜೆಪಿ ತನ್ನ ಪಟ್ಟಿಯನ್ನು ತಯಾರಿಸಿದೆ.
ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಎಲ್ಲ ಜನಾಂಗ ಮತ್ತು ಕೋಮಿನವರಿಗೆ ಆಧ್ಯತೆ ನೀಡಲಾಗಿದ್ದು, ಅತೀ ಹೆಚ್ಚಿನ ಸ್ಥಾನಗಳನ್ನು ಲಿಂಗಾಯಿತ ಜನಾಂಗಕ್ಕೆ 12 ಸ್ಥಾನಗಳನ್ನು ನೀಡಿದ್ದು, ನಂತರ ಸ್ಥಾನದಲ್ಲಿ ಅಲ್ಪಸಂಖ್ಯಾತ ಮುಸ್ಲಿಂರಿಗೆ 10 ಸ್ಥಾನಗಳನ್ನು ಬಿಜೆಪಿ ನೀಡಿದೆ.
ಅಲ್ಲದೇ ಬ್ರಹಾಣ 01, ಕೋಲಿ, ಕಬ್ಬಲಿಗ, ಸೇರಿದಂತೆ ಇನ್ನುಳಿದ ಹಲವಾರು ವರ್ಗಗಳಿಗೂ ಟಿಕೆಟ್ ನೀಡುವ ಮೂಲಕ ಭಾರತೀಯ ಜನತಾ ಪಕ್ಷ ತನ್ನ ಪಟ್ಟಿ ಬಿಡುಗಡೆ ಮಾಡಿದೆ.

LEAVE A REPLY

Please enter your comment!
Please enter your name here