ಪಾಲಿಕೆ ಟಿಕೆಟ್ ಹಂಚಿಕೆ ಬಿಕಟ್ಟು ಕಾಂಗೈ ತ್ಯಜ್ಜಸಿದ ನಾಯಕರುಗಳು

0
1236

ಕಲಬುಗಿ, ಆಗಸ್ಟ. 23:ಒಂದು ಸಂದರ್ಭ ಹೀಗಿತ್ತು ಅಂದರೆ ದಿ. ಖಮರುಲ್ ಇಸ್ಲಾಂ ಅವರ ಜೀವತಾವಧಿಯಲ್ಲಿ ಸುಮಾರು 8 ಜನ ಅಲ್ಪಸಂಖ್ಯಾತರನ್ನು ಮೇಯರನ್ನಾಗಿ ಮಾಡಿ, ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳಲ್ಲದೇ ಜಿಲ್ಲೆಯಲ್ಲಿ ಸಂಸತ್ ಚುನಾವಣೆಯಾಗಲೀ, ಶಾಸಕ ಸ್ಥಾನದ ಚುನಾವಣೆ ಆಗಲಿ ಕಾಂಗ್ರೆಸ್ ಪ್ರಭಲತೆ ಸಾಧಿಸುತ್ತಿತ್ತು.
ಆದರೆ ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಖಮರುಲ್ ಇಸ್ಲಾಂ ಅವರ ಧರ್ಮಪತ್ನಿ ಕನೀಜಾ ಫಾತಿಮಾ ಅವರ ಶಾಸಕತ್ವದಲ್ಲಿ ಮತ್ತು ಕಾಂಗ್ರೆಸ್ ಪಕ್ಷದ ದ್ವೀನೀತಿಯ ವಿರುದ್ಧ ಬಂಡೆದ್ದು, ಹಲವಾರು ಮಾಜಿ ಮೇಯರ್‌ಗಳು, ಮಾಜಿ ಪಾಲಿಕೆ ಸದಸ್ಯಗಳು, ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರುಗಳು ಪಕ್ಷ ತ್ಯಜ್ಜಸಿ, ಬಿಜೆಪಿ, ಜೆಡಿಎಸ್, ಆಮ್ ಆದ್ಮಿ, ಎಂ.ಐ.ಎಮ್. ಎಸ್‌ಡಿಎಂ ಪಕ್ಷಗಳಿಗೆ ವಲಸೆ ಹೋಗಿದ್ದಾರೆ.

ಕಾAಗ್ರೆಸ್ ಎಡ ಮತ್ತು ವಿವಿಧ ವಾರ್ಡ್ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಇಕ್ಬಾಲ್ ಅಹಮದ್ ಶೀರ್ನಿ ಮಾಜಿ ಮೇಯರ್, ಸಯೀದಾ ಬೇಗಂ ಮಾಜಿ ಮೇಯರ್, ನಯೀಮ್ ಸೇರಿಕಾರ್ ಮಾಜಿ ಕಾರ್ಪೊರೇಟರ್ ಅವರುಗಳಿಗಿದ್ದಾರೆ.
ಇನ್ನು ಕಾಂಗ್ರೆಸ್ ತೊರೆದು ಎಐಎಮ್‌ಐಎಮ್ ಪಕ್ಷ ಸೇರಿದ ಮಾಜಿ ಪಾಲಿಕೆ ಸದಸ್ಯರುಗಳಾದ ಅಜಮ್ ಪಟೇಲ್, ಶಫೀ ಅಹ್ಮದ್ ಹುಂಡೇಕರ್, ಅನ್ವರ್ ಪಟ್ವೇಗರ್, ಏಜಾಜ್ ಅಲಿ ಇನಾಮದಾರ, ಎಂಡಿ ಜೀಲಾನ್, ಫಯಾಜ್ ಪಟೇಲ್, ಎಂಡಿ ನೂರುದ್ದೀನ್, ಮಜೀದ್ ಖುರೇಶಿ, ಅಹ್ಮದ್ ಕೇಬಲ್, ಫಯಾಜ್ ಹುಸೇನ್, ಜಾಫರ್ ಶಾಹ ಅಲಿ, ಅಜರ್ ಮುಬಾರಕ್ ಮತ್ತು ಇತರರು ಸೇರ್ಪಡೆಗೊಂಡಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ತೋರೆದು ಸೈಯದ್ ಸಜ್ಜದ್ ಅಲಿ ಇನಾಮದಾರ್ ಮಾಜಿ ಉಪ ಮೇಯರ್, ಅಬ್ದುಲ್ ಖದರ್ ಮತ್ತು ಮಾಜಿ ಸೇನಾಧಿಕಾರಿ ಎಸ್‌ಡಿಪಿಐಗೆ ಸೇರಿದರು, ಕಾಂಗ್ರೆಸ್ ನಾಯಕ ಅಹ್ಮದ್ ಪಾಷಾ ಮಿಲ್ಲತ್ ನಾಗರ್ ಎಸ್‌ಡಿಪಿಐ ಪಕ್ಷಕ್ಕೆ ಸೇರಿದರು

ಕಾಂಗ್ರೆಸ್ ನಾಯಕ ಎಂಡಿ ನವಾಜ್ ಖಾನ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.

LEAVE A REPLY

Please enter your comment!
Please enter your name here