ನಾಲಾಯಕ ಪಕ್ಷ ಎಂದು ಜನತೆ ತಿರಸ್ಕಾರ ಮಾಡಿದರೂ ಬುದ್ಧಿ ಕಲಿಯದ ಕಾಂಗ್ರೆಸ್: ಕಟೀಲ್ ಟೀಕೆ

0
887

ಕಲಬುರಗಿ, ಆಗಸ್ಟ. 21: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಾವಧಿಯ ಏಳು ವರ್ಷದಲ್ಲಿ ಭ್ರಚ್ಟಾರ ರಹಿತ ಆಡಳಿತದೊಂದಿಗೆ ಹಲವಾರು ಜನಪರ ಯೋಜನೆಗಳು ಅನುಷ್ಠಾನಗೊಂಡಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟಿಲ್ ಅವರು ಹೇಳಿದ್ದಾರೆ.
ಅವರಿಂದ ನಗರದ ಗ್ರಾö್ಯಂಡ್ ಹೊಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಾನುಹೆಚ್ಚು ಗ್ರಾಮೀಣ ಭಾಗಕ್ಕೆ ಆದ್ಯತೆ ನೀಡುವ ಮೂಲಕ ರೈತ ಪರ ಕಾಳಜಿ ವಹಿಸಿದ್ದಾರೆ.
ವಿಶ್ವದಲ್ಲಿಯೇ ಮಹಾಮಾರಿ ಕೋವಿಡ್ ಸೋಂಕಿನಿAದ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದು, ಕೊರೊನಾಗೆ ರಾಮಬಾಣವೆಂಬAತೆ ಲಸಿಕೆ ಅಭಿಯಾನ ಆರಂಭಿಸಿದ ಪ್ರಧಾನಿಗಳು ಇಲ್ಲಿಯವರೆಗೆ 60 ಕೋಟಿ ಜನರಿಗೆ ಉಚಿತ ಲಕಸಿಕೆ ಕೊಡಲಾಗಿದೆ ಎಂದರು.
ಇಷ್ಟೆಲ್ಲ ಅಭಿವೃದ್ಧಿ ಪರ ಕೆಲಸ ಕಾರ್ಯಗಳು ಹಿಂದೆoದೂ ಯಾವ ಕೇಂದ್ರ ಸರಕಾರವು ಮಾಡದ ಕೆಲಸ ಮಾಡಿದ್ದು, ಸಹಿಸದ ವಿರೋಧ ಪಕ್ಷಗಳಿಗೆ ಚರ್ಚೆ ಮಾಡಲು ನೈಜ ವಿಷಯಗಳಿಲ್ಲ ಎಂದು ಟೀಕಿಸಿದರು.
ಕೇಂದ್ರ ಸರಕಾರ ಕೈಗೊಳ್ಳುವ ಪ್ರತಿಯೊಂದು ವಿಷಯಕ್ಕೆ ತಿರಸ್ಕಾರ ಮಾಡುವ ಮೂಲಕ, ಲೋಕಸಭೆಯ ಅತ್ಯಮೂಲ್ಯ ಸದನದ ಸಮಯ ಹಾಳು ಮಾಡಿದಲ್ಲದೇ, ಚರ್ಚೆಗೆ ಅವಕಾಶ ಕೊಡದೇ ಗದ್ದಲ, ಕೋಲಾಹಲ ಎಬ್ಬಿಸುವ ಮೂಲಕ ಹಲವಾರು ಅಭಿವೃದ್ಧಿ ಪರ ವಿಷಯಗಳ ಮಂಡನೆಗೆ ಸಮಯಕೊಡದೆ, ದೇಶದ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಹೇಳಿದ್ದಾರೆ.
ಅಲ್ಲದೇ ಲೋಕಸಭೆಯಲ್ಲಿ ವಿರೋಧ ಪಕ್ಷವಾಗಿ ಇರುವುದಕ್ಕೂ ಕಾಂಗ್ರೆಸ್ ನಾಲಾಯಕ ಪಕ್ಷ ಅಂತ ಜನ ತಿರಸ್ಕಾರ ಮಾಡಿದ್ದಾರೂ ಇನ್ನು ಇವರಿಗೆ ಬುದ್ಧಿ ಬಂದಿಲ್ಲ ಎಂದು ಖಾರವಾಗಿ ನುಡಿದರು.
ಕಾಂಗ್ರೆಸ್ ಅಜೆಂಡಾ ಅಂದರೆ ಎಲ್ಲ ಕೆಲಸಕ್ಕೂ ವಿರೋಧ ಮಾಡುವುದು ಬಿಟ್ಟಿರೇ ಬೇರೆನೂ ಇಲ್ಲ ಎಂದು ತಿಳಿಸಿದರು.
ಕೋವಿಡ್ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡ್ತಿದ್ದಾರೆ ಎಂದ ಕಟೀಲ್, ಸ್ವಾತಂತ್ರ‍್ಯ ದಿನಾಚರಣೆಯಂದು ಬಹಳ ಒಳ್ಳೆಯ ಯೋಜನೆಗಳನ್ನು ನೂನತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.
ಈ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಬಿ. ಎಸ್. ಯಡಿಯೂರಪ್ಪ ಅವರು ಕರೊನಾ ಸಂದರ್ಭದಲ್ಲಿ ಬಹಳಷ್ಟು ಕೆಲಸ ಮಾಡಿದ್ದು, ರಾಜ್ಯದ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ತಂದು ಒಳ್ಳೆಯ ಕೆಲಸ ಮಾಡಿತೋರಿಸಿದ್ದಾರೆ ಎಂದು ಅವರು ಪ್ರಶಂಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ, ವಿಧಾನ ಪರಿಷತ್ ಸದಸ್ಯರುಗಳಾದ ಬಿ.ಜಿ. ಪಾಟೀಲ್, ಸುನೀಲ್ ವಲ್ಲಾಪೂರೆ, ಶಾಸಕರುಗಳಾದ ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್ ತೇಲ್ಕೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಟೀಲ್, ಮಾಜಿ ಶಾಸಕ ನರಿಬೋಳ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here