ಜನಾಶೀರ್ವಾದ ಯಾತ್ರೆ ಆಯೋಜಕರ ವಿರುದ್ಧ ಎಫ್‌ಐಆರ್

0
690

ಕಲಬುರಗಿ, ಆಗಸ್ಟ. 19: ಕಳೆದ ಎರಡು ದಿನಗಳ ಹಿಂದೆ ನೈಟ್ ಕರ್ಫ್ಯೂ ನಿಯಮ ಉಲ್ಲಂಘಟನೆ ಮಾಡಿ ಜನಾಶೀರ್ವಾದ ಯಾತ್ರೆ ನಡೆಸಿದ ಬಿಜೆಪಿ ಆಯೋಜಕರ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ ಎಂದು ನಗರ ಪೋಲಿಸ ಆಯುಕ್ತ ಡಾ.ವೈ.ಎಸ್. ರವಿಕುಮಾರ ಅವರು ಹೇಳಿದ್ದಾರೆ.
ತಹಸೀಲ್ದಾರರ ವರದಿ ಹಿನ್ನೆಲೆಯಲ್ಲಿ ಈ ಯಾತ್ರೆ ಆಯೋಜಿಸಿದ ವೀರಶೈವ ಕಲ್ಯಾಣ ಮಂಟಪದ ಆಯೋಜಕರ ಮೇಲೆ ಕ್ರಮ ಜರುಗಿಸಲಾಗುವುದು ಎಂದ ಅವರು ಇದರಲ್ಲಿ ಭಾಗಿಯಾದವರ ಮೇಲೂ ಕ್ರಮ ತೆಗೆದುಕೊಳ್ಳಲಾವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲ ಆಯೋಜಕರ ಮೇಲೆ ಮಾತ್ರ ಕ್ರಮ ಎಂದರು.
ಕೇAದ್ರ ಸಚಿವ ಭಗವಂತ ಖೂಬಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಕೋವಿಡ್ ನಿಯಮ ಮೀರಿ ರಾತ್ರಿ 9 ಗಂಟೆ ಬಳಿಕ ನಡೆದಿರುವುದಕ್ಕೆ ಎಫ್.ಐ.ಆರ್. ದಾಖಲಾಗುತ್ತಿದೆ.

ಕಾಂಗ್ರೆಸ್ ಕಾರ್ಯಕರ್ತರಿಂದಲೂ ನಿಯಮ ಉಲ್ಲಂಘನೆ
ಇAದು ಜನಾಶೀರ್ವಾದ ಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಈಶ್ವರ ಖಂಡ್ರೆ ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಆಗಮಿಸುತ್ತಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ವಾದ್ಯಗಳೊಂದಿಗೆ ಸ್ವಾಗತಿಸಿರುವುದು ಕೊವಿಡ್ ನಿಯಮದಲ್ಲಿ ಬರುತ್ತದೇಯೋ ಎಂಬ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಯಾವುದೇ ರಾಜಕೀಯ ಪಕ್ಷಗಳಿಗೆ ಜನಹಿತಕ್ಕಿಂತ ತಮ್ಮ ಹಾಗೂ ಪಕ್ಷದ ಹಿತವೆ ಮುಖ್ಯವಾದ ಹಿನ್ನೆಲೆಯಲ್ಲಿ ಯಾರು ಕೂಡಾ ಕೊವಿಡ್ ನಿಯಮಗಳಾದ ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ ಧರಿಸುವಿಕೆ ಕಡ್ಡಾಯ, ಹಸ್ತಲಾಘನ ಸೇರಿದಂತೆ ಎಲ್ಲವೂ ಗಾಳಿಗೆ ತೂರಿದಂತಾಗಿದೆ.
ನವರಾ ಮರೋ.. ನವರಿ ಮರೋ… ದಕ್ಷಿಣಾ ಘಟ್ ಎಂಬAತೆ ಮದುಮಗ ಸಾಯಿಲಿ… ಮದು ಮಗಳು ಸಾಯಿಲಿ… ದಕ್ಷಿಣೆ ಅಂತೂ ಗಟ್ಟಿಯಾಗಿದೆ ಎಂಬ ನಾನುಡಿಯಂತಾಗಿದೆ ಸಧ್ಯದ ಪರಿಸ್ಥಿತಿ.
ಕೋವಿಡ್ ನಿಯಮ ಉಲ್ಲಂಘಿಸಿ ನೂರಾರು ಕಾರ್ಯಕರ್ತರು ಮಹಾನಗರಪಾಲಿಕೆ ಟಿಕೆಟ್‌ಗಾಗಿ ನಗರದ ಕಾಂಗ್ರೆಸ್ ಕಛೇರಿ ಎದುರು ಸೇರಿದ್ದಾರೆ.

LEAVE A REPLY

Please enter your comment!
Please enter your name here