ಭಗವಂತ ಖೂಬಾರಿಂದ ದತ್ತನ ದರ್ಶನ

0
835

ಕಲಬುರಗಿ, ಆಗಸ್ಟ. 18: ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಬಳಿಕ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಬೀದರ ಸಂಸದ ಭಗವಂತ ಖೂಬಾ ಅವರು ದತ್ತನ ದರ್ಶನ ಪಡೆದರು.
ಅಫಜಲಪೂರ ತಾಲೂಕಿನ ಘಾಣಗಾಪುರದಲ್ಲಿರುವ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ದತ್ತನ ನಿರ್ಗುಣ ಪಾದುಕುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.

ಅವರು ಗುರುವಾರ ಬೆಳಿಗ್ಗೆ ಆರು ಗಂಟೆಗೆ ಗಾಣಗಾಪೂರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾ ಮಾಲೀಕಯ್ಯ ಗುತ್ತೇದಾರ ಅವರು ನೂತನ ಕೇಂದ್ರ ಸಚಿವರಿಗೆ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಸನ್ಮಾನಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರದ್ದೆವಾಡಗಿ ಅವರುಗಳು ಸೇರಿದಂತೆ ಇನ್ನು ಹಲವಾರು ಬಿಜೆಪಿ ನಾಯಕರು ಜೊತೆಯಲ್ಲಿದ್ದರು.
ಪೂಜೆ ಸಲ್ಲಿಸದ ನೂತನ ಕೇಂದ್ರ ಸಚಿವರಿಗೆ ಶ್ರೀ ದತ್ತಾತ್ರೇಯ ದೇವಸ್ಥಾನ ಕಮಿಟಿಯಿಂದ ದತ್ತನ ಭಾವಚಿತ್ರದ ಆಶೀರ್ವಾದದರೊಂದಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here