ಆಗಸ್ಟ 19 ವಿಶ್ವ ಛಾಯಾಗ್ರಾಹಕ ದಿನಾಚರಣೆ ಛಾಯಾಚತ್ರಗಳ ಪ್ರದರ್ಶನ, ಸನ್ಮಾನ

0
882

ಕಲಬುರಗಿ, ಆಗಸ್ಟ. 18: ವಿಶ್ವ ಛಾಯಾಚಿತ್ರಗಳ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಛಾಯಾಚಿತ್ರಗಳ ಪ್ರದರ್ಶನ ಮತ್ತು ಪತ್ರಿಕಾ ಛಾಯಾಚಿತ್ರಗಾರರಿಗೆ ಸನ್ಮಾನ ಸಮಾರಂಭವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದೆ.
ಈ ಸಮಾರಂಭದ ಉದ್ಘಾಟನೆಯನ್ನು ದಿ. ಐಡಿಯಲ್ ಫೈನ್ ಆರ್ಟ್ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೊ. ವ್ಹಿ. ಜಿ. ಅಂದಾನಿ ಅವರು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಛಾಯಾಗ್ರಾಹಕರಾದ ಡಿ. ವಿ. ಶಿರವಾಳಕರ್ ಮತ್ತು ಚಂದನ ಕಲರ್ ಲ್ಯಾಬ್‌ನ ಮಾಲಿಕರಾದ ಎಮ್. ಎನ್. ಎಸ್. ಶಾಸ್ತಿç ಅವರು ಆಗಮಿಸಲಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಭವಾನಿಸಿಂಗ್ ಎಂ ಠಾಕೂರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ, ರಾಜ್ಯ ಕರ‍್ಯಕಾರಿಣಿ ಸಮಿತಿಯ ಸದಸ್ಯರುಗಳಾದ ಹಣಮಂತರಾವ ಭೈರಾಮಡಗಿ ಹಾಗೂ ದೇವೇಂದ್ರಪ್ಪ ಹೆಚ್. ಕಪನೂರ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here