ಮಾಧ್ಯಮ ಸಮಾಜದ ಕಣ್ಣುಗಳು ಇದ್ದ ಹಾಗೆ:ಡಾ. ವೈ.ಎಸ್. ರವಿಕುಮಾರ್

0
790

ಕಲಬುರಗಿ, ಆಗಸ್ಟ. 16: ಮಾಧ್ಯಮ ಸಮಾಜದ ಕಣ್ಣುಗಳು ಇದ್ದ ಹಾಗೆ, ಸಮಾಜದಲ್ಲಿ ನಡೆಯುವ ಪ್ರತಿ ಘಟನೆಯನ್ನು ಪೊಲೀಸ್ ಅಧಿಕಾರಿಗಳು ಗಮನಕ್ಕೆ ತರುವಲ್ಲಿ ಮಾಧ್ಯಮ ಪಾತ್ರ ಬಹಳಷ್ಟಿದೆ. ಅಂತಹ ಮಾಧ್ಯಮ ಕ್ಷೇತ್ರದಿಂದ ಮಾಧ್ಯಮ ಅಕಾಡೆಮಿಗೆ ಆಯ್ಕೆಯಾದ ದೇವೀಂದ್ರಪ್ಪ ಕಪನೂರ ಅವರ ಈ ಸಾಧನೆ ಅಪಾರವಾಗಿದೆ ಎಂದು ಅವರು ತಿಳಿಸಿದರು.
ಸೋಮವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್ ಅವರು ಉದ್ಘಾಟಿಸಿ ಮಾತನಾಡುತ್ತ ಮಾಧ್ಯಮ ಕ್ಷೇತ್ರ ಇದು ಸಮಾಜದಲ್ಲಿ ಎಲ್ಲರನ್ನು ಆಗಾಗ ಬಡಿದೇಬ್ಬಿಸಿ, ಎಚ್ಚರಗೊಳಿಸುವ ಪ್ರಮುಖ ಕ್ಷೇತ್ರವಾಗಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಸದಸ್ಯರಾಗಿ ನೇಮಕಗೊಂಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಕಾರ್ಯದರ್ಶಿ ದೇವೀಂದ್ರಪ್ಪ ಹೆಚ್ ಕಪನೂರಕರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಕಲಬುರಗಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಭಿನಂದನಾ ಕಾರ್ಯ ಕ್ರಮದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿ ಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ದಯಾನಂದ ಅಗಸರ ಅವರು ಮಾತನಾಡಿ. ನಮ್ಮ ಭಾಗದಲ್ಲಿ ಸಹ ಉತ್ಕೃಷ್ಟ ಮಟ್ಟದ ಪ್ರತಿಭೆಗಳಿವೆ ಅದನ್ನು ಗುರುತಿಸುವ ಕೆಲಸ ಸರ್ಕಾರದಿಂದ ಆಗಬೇಕು. ಅಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಗೌರವ ಲಭಿಸುವಂತೆ ಮಾಡಿ ದ್ದು, ಮಾಧ್ಯಮ ಸಮೂಹವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಇದೆ ವೇಳೆ ರಂಗಾಯಣದ ನಿರ್ದೇಶಕ ಪ್ರಭಾಕರ್ ಜೋಷಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಸಿದ್ದೇಶ್ವರಪ್ಪ ಜಿ. ಬಿ ಅವರು ಉಪಸ್ಥಿತರಿದ್ದರು.
ಶರಣಯ್ಯ ಹಿರೇಮಠ ಅವರು ಕಪನೂರ ಅವರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. ದೇವೀಂದ್ರಪ್ಪ ಅವಂಟಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಅರುಣ ಕದಂ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ರಾಮಕೃಷ್ಣ ಬಡಶೇಷಿ, ರಾಜು ದೇಶಮುಖ, ಶರಣಯ್ಯ ಹಿರೇಮಠ, ವಿಜಯಕುಮಾರ ವಾರದ, ರಾಜಶೇಖರಯ್ಯ ಸ್ವಾಮಿ, ಮಲ್ಲಿಕಾರ್ಜುನ ಜೋಗ, ರಮೇಶ ಖಮಿತರಕರ್, ಭೀಮಬಾಯಿ ದೇಶಮುಖ, ಹಿರಿಯ ಪತ್ರಕರ್ತರಾ ಶಿವರಾಯ ದೊಡ್ಡಮನಿ, ಬಿ. ವ್ಹಿ. ಚಕ್ರವರ್ತಿ, ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮಹಾದೇವ ವಡಗಾಂವ (ಆಳಂದ), ಈರಣ್ಣ ವಗ್ಗೆ (ಆಫಜಲಪೂರ) ಮಂಜುನಾಥ ಅಂಜುಟಗಿ, ಅಶೋಕ ಕಲ್ಲೂರ, ಚಿತ್ತಾಪೂರದಿಂದ ಪ್ರಶಾಂತ ಪಾಟೀಲ್, ವೀರೇಂದ್ರ ಕಲ್ಲೂರ, ಮಲ್ಲಿಕಾರ್ಜುನ, ಶಹಾಬಾದದಿಂದ ವಾಸುದೇವ ಚವ್ಹಾಣ, ಕಾಳಗಿ, ಹಲವಾರು ಹಿರಿಯ ಮತ್ತು ಕಿರಯ ಪತ್ರಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here