ಮೂರನೇ ಅಲೇಯ ಆತಂಕದಲ್ಲಿಯೂ ಏರಿಕೆ ಕಾಣದ ಲಸಿಕೆ ಪ್ರಮಾಣ

0
1082

ಕಲಬುರಗಿ, ಆಗಸ್ಟ. 10: ಒಂದಾಯಿತು.. ಎರಡಾಯಿತು.. ಈಗ ಮೂರನೇ ಅಲೇ. ಇದು ಯಾವುದೋ ಸಮುದ್ರದ ಅಲೆಯಲ್ಲ. ಇದು ಕೊರೊನಾ ಅಲೆ. ಸಮುದ್ರದ ಅಲೆಯಷ್ಟೆ ಜೋರಾಗಿದಿದ್ದು ಎರಡನೇ ಅಲೆಯಾಗಿತ್ತು, ಆದರೆ ಮೂರನೇ ಅಲೆಯ ಆತಂಕದ ಮಧ್ಯೆಯೂ ಸಹ ಏರಿಕೆ ಕಾಣದ ಲಸಿಕೆ ಪ್ರಮಾಣ.
ಜಿಲ್ಲೆಯ 18 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡುವ ಗುರಿ ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ಕೇವಲ ಶೇ. 35% ರಷ್ಟು ಮಾತ್ರ ಲಸಿಕೆ ನೀಡುವ ಪ್ರಗತಿ ಸಾಧಿಸಲಾಗಿದ್ದು, ಇದರಿಂದ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾದಂತೆ ಕಾಣುತ್ತದೆ.
ಲಸಿಕೆ ಅಭಿಯಾನದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ನಗರ ಪ್ರದೇಶದಕ್ಕಿಂತ ಗ್ರಾಮೀಣ ಪ್ರದೇಶದ ಜನತೆಯೆ ಮುಂದಿದ್ದು, ನಗರ ಪ್ರದೇಶದ ಜನರು ಹಿಂದೆ ಬಿದ್ದಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ಗ್ರಾಮೀಣ ಭಾಗದಲ್ಲಿ 4,83,429 ಜನರಿಗೆ ಲಸಿಕೆ ನೀಡಲಾಗಿದ್ದು, ನಗರ ಪ್ರದೇಶದ 3,79,648 ಮಂದಿಗೆ ಲಸಿಕೆ ಹಾಕಲಾಗಿದೆ. ಇದರಲ್ಲಿ ಕೆಲವರಿಗೆ ಒಂದನೇ ಡೋಜ್ ಆಗಿದ್ದರೆ ಕೆಲವರಿಗೆ 2ನೇ ಡೋಸ್ ಒಳಗೊಂಡಿದೆ.
ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 8 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಶರಣಬಸಪ್ಪ ಗಣಜಲಖೇಡ ಅವರು ಮಾಹಿತಿ ನೀಡಿದ್ದಾರೆ.
ಸರಿ ಸುಮಾರು ನಾಲ್ಕು ತಿಂಗಳೂ ಗತಿಸಿದರೂ, ಜಿಲ್ಲೆಯಲ್ಲಿ ನೀಡಿದ್ದ ನಿರೀಕ್ಷತ ಗುರಿ ತಲುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ.
ಲಸಿಕೆ ನಿಧಾನ ಗತಿಯ ಪ್ರಗತಿಗೆ ಕಾರಣ ಹುಡುಕಬೇಕಿಲ್ಲ, ಜನರ ಜೀವ ಮಾತ್ರ ಮುಖ್ಯವಾಗಿದೆ, ಈ ಹಿನ್ನೆಲೆಯಲ್ಲಿ ಲಸಿಕೆ ವೇಗ ಹೆಚ್ಚಾಗಬೇಕಿದೆ.

LEAVE A REPLY

Please enter your comment!
Please enter your name here