ಕೊರೊನಾ ಕಲಬುರಗಿಯಲ್ಲಿ 5 ಹೊಸ ಪ್ರಕರಣಗಳ ದಾಖಲು

0
890
Day after reporting less than 40,000 new Covid-19 cases, India's daily  caseload rises to 45,951 | Latest News India - Hindustan Times

ಕಲಬುರಗಿ, ಆಗಸ್ಟ. 10: ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾದ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖಾಗುತ್ತಿದ್ದು, ಎರಡಂಕಿಯೂ ತಲುಪದೆ ಇರುವುದು ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಮAಗಳವಾರ ಕಲಬುರಗಿ ಜಿಲ್ಲೆಯಲ್ಲಿ ಕೇವಲ 5 ಜನರಿಗೆ ಕೊರೊನಾ ಸೋಂಕು ತಗುಲಿದ ಬಗ್ಗೆ ವರದಿಯಾದರೆ ಆಸ್ಪತ್ರೆಯಿಂ 9 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಂದು ಕೋವಿಡ್‌ಗೆ ಯಾವುದೇ ವ್ಯಕ್ತಿ ಬಲಿಯಾಗಿಲ್ಲ, ಈವರೆಗೆ ಒಟ್ಟು 818 ಜನರು ಈ ಸೋಂಕಿನಿAದ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 93 ಸಕ್ರೀಯ ಪ್ರಕರಣಗಳಿದ್ದು, ಇನ್ನು 127 ಜನರ ಕೋವಿಡ್ ಪರೀಕ್ಷೆಯ ವರದಿ ನಿರೀಕ್ಷೆಯಲ್ಲಿದೆ.
ಇಂದು 9 ಜನರು ಸೇರಿದಂತೆ ಈ ವರೆಗೆ ಜಿಲ್ಲೆಯಲ್ಲಿ 60772 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here