ಬೀದಿ ನಾಯಿ ಹಾವಳಿ ನಾಲ್ಕು ಮಕ್ಕಳಿಗೆ ಗಾಯ

0
941

ಕಲಬುರಗಿ, ಆಗಸ್ಟ. 10: ಬೀದಿ ನಾಯಿ ಗಳು ಕಚ್ಚಿದ ಪರಿಣಾಮವಾಗಿ ನಾಲ್ಕು ಮಕ್ಕಳ ತೀವ್ರವಾಗಿ ಗಾಯಗೊಂಡಿದ್ದ ಘಟನೆ ನಗರದ ಮುಸ್ಲಿಂ ಚೌಕ್ ಬಡಾವಣೆಯಲ್ಲಿ ನಿನ್ನೆ ನಡೆದ ಬಗ್ಗೆ ವರದಿಯಾಗಿದೆ.
ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಗಳ ಹಾವ ಳಿಯಿಂದಾಗಿ ಕೈ, ಕಾಲು, ತಲೆ ಸೇರಿದಂತೆ ಮೈತುಂಬ ಮಕ್ಕಳಿಗೆ ಕಚ್ಚಿ ಗಾಯಗಳಾಗಿವೆ.

ಗಾಯಗೊಂಡೊ ಮಕ್ಕಳನ್ನು ನಗರದ ಜೀಮ್ಸ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.

ಬೀದಿಗಳಲ್ಲಿ ಕೊರಳಿಗೆ ಬೆಲ್ಟ್ ಹಾಕದ ನಾಯಿಗಳನ್ನು ಮಹಾನಗರಪಾಲಿಕೆ ಹಿಡಿದು ಅವುಗಳಿಗೆ ಎನಿಮಲ್ ಬರ್ಥ ಕಂಟ್ರೋಲ್ (ಎಬಿಸಿ) ಆಪರೇಷನ್ ಮತ್ತು ಎಂಟಿ ರ‍್ಯಾಬಿಸ್ ಚಚ್ಚು ಮುದ್ದುಗಳನ್ನು ನೀಡಿ ಅವುಗಳನ್ನು ಮತ್ತೇ ಅದೇ ಓಣಯ ಜಾಗಕ್ಕೆ ತಂದು ಬಿಡುತ್ತಿದ್ದರು. ಆದರೆ ಒಂದು ವಾರದಿಂದ ಈ ಕರ‍್ಯಾಚರಣೆ ಸ್ಥಗೀತ ಗೊಂಡಿತ್ತು.

ಈ ಬಗ್ಗೆ ನಮ್ಮ ಪ್ರತಿನಿಧಿ ವಿಚಾರಾಸಿದಾಗ ಈ ಕರ‍್ಯಾಚರಣೆ ಮತ್ತೇ ಎರಡು ಮೂರು ದಿನಗಳಲ್ಲಿ ಆರಂಭಿಸ ಲಾಗುವುದು ಎಂದು ಮಹಾನಗರ ಪಾಲಿಕೆಯ ವಲಯ ಆಯುಕ್ತರು ಹಾಗೂ ಆರೋಗ್ಯಾ ಧಿಕಾರಿಗಳಾದ ಡಾ. ವಿನೋದ ಅವರು ಹೇಳಿ ದ್ದಾರೆ.
ಗಾಯಗೊಂಡ ಮಕ್ಕಳ ಆರೋಗ್ಯ ವಿಚಾರಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಿರುವುದಾಗಿಯೂ ಅವರು ತಿಳಿಸಿದರು.

LEAVE A REPLY

Please enter your comment!
Please enter your name here