ವಿಕೆಂಡ್ ಕರ್ಫ್ಯೂ ಅಂತ್ಯ ಹಿನ್ನೆಲೆಯಲ್ಲಿ ಶ್ರಾವಣ ಮಾಸದಲ್ಲಿ ಸಾಮಾಜಿಕ ಅಂತರವಿಲ್ಲದೇ ದರ್ಶನಕ್ಕೆ ಸರತಿಯಲ್ಲಿ ನಿಂತ ಭಕ್ತರು

0
725

ಕಲಬುರಗಿ, ಆಗಸ್ಟ. 09:್ಲ ಈ ಶತಮಾನದ ಮಾರಕ ರೋಗ ಕೊರೊನಾ ಮತ್ತೇ ಮೂರನೇ ಅಲೆ ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಸೋಂಕು ಹಬ್ಬಬಾರದೆಂಬ ಉದ್ದೇಶದಿಂದ ಹೇರಿದ್ದ ವಾರಾಂತ್ಯದ ಕರ್ಫ್ಯೂ ಸೋಮವಾರ ಅಂತ್ಯವಾಗುತ್ತಿದ್ದAತೆ ದೇವಸ್ಥಾನಗಳ ಮುಂದೆ ಜನಜಂಗುಳಿಯೇ ಸೇರಿದೆ.

ಕೊರೊನಾ ಮಹಾಮಾರಿ ಓಡಿಸಲು ಸರಕಾರದ ಪ್ರಯತ್ನ ಮಾತ್ರ ಸಾಲದು ಸಾರ್ವಜನಿಕರಲ್ಲಿಯೂ ಇದರ ಬಗ್ಗೆ ಅರಿವಿನೊಂದಿಗೆ ಕೋವಿಡ್ ನಿಯಮಗಳನ್ನು ಪಾಲಿಸುವುದು ಆದ್ಯ ಕರ್ತವ್ಯವಾಗಿದೆ. ಭಕ್ತರ ಭಾವನೆಗಳಿಗೆ ಬೆಲೆಕೊಡಬೇಕಾತ್ತದೆ ಆದರೆ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ದರ್ಶನ ಪಡೆಯುವುದು ನಮ್ಮ ನಿಮ್ಮಲ್ಲರ ಆದ್ಯ ಕರ್ತವ್ಯವಾಗಿದೆ.
ಸೋಮವಾರ ವಿಕೇಂಡ್ ಕರ್ಫ್ಯೂ ಅಂತ್ಯವಾಗುತ್ತಿದ್ದAತೆ ಶ್ರಾವಣ ಮಾಸದ ಮೊದಲ ಸೋಮವಾರವಾಗಿದ್ದರಿಂದ ಸಾರ್ವಜನಿಕರು ದೇವರ ದರ್ಶನಕ್ಕೆ ದೇಗುಲಗಳಲ್ಲಿ ದರ್ಶನಕ್ಕೆ ಸಾಮಾಜಿಕ ಅಂತವಿಲ್ಲದೇ ನಿಂತಿರುವುದು ನಗರದ ಶ್ರೀ ಶರಣಬಸವೇಶ್ವರ ದೇವಾಲಯದ ಮುಂದೆ ಕಾಣಬಹುದು.

ಶ್ರೀ ಶರಣಬಸವೇಶ್ವರ ದೇವಸ್ಥಾನದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕಾಗಿ ಸರತಿಯಲ್ಲಿ ನಿಂತಿದ್ದು, ಇದರಿಂದ ದೇವಸ್ಥಾನದ ಸಂಪೂರ್ಣ ಭಕ್ತರಿಂದ ತುಂಬಿಹೋಗಿದೆ.
ಅಲ್ಲದೇ ನಗರದ ಎಲ್ಲ ದೇವಸ್ಥಾನಗಳು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದ್ದು, ಎಲ್ಲ ದೇವಸ್ಥಾನಗಳಲ್ಲಿ ಭಕ್ತರು ದರ್ಶನಕ್ಕಾಗಿ ಸರತಿ ಸಾಲ್ಲಿನಲ್ಲಿ ಸಾಮಾಜಿಕ ಅಂತರವಿಲ್ಲದೇ ನಿಂತಿದ್ದು ಎಲ್ಲಡೆ ಸರ್ವೆ ಸಾಮಾನ್ಯವಾಗಿದೆ.

LEAVE A REPLY

Please enter your comment!
Please enter your name here