

ಕಲಬುರಗಿ ಆ 8: ವೀಕೆಂಡ್ ವಾರಾಂತ್ಯದ ಕರ್ಫ್ಯೂ ನಡೆವೆಯು ಇಂದಿನಿoದ (ನಾಗರ ಅಮವಾಸ್ಯೆಯೊಂದಿಗೆ) ಹಿಂದೂಗಳ ಪವಿತ್ರ ಮಾಸ ಶ್ರಾವಣ ಆರಂಭವಾಗಿದೆ..
ನಗರದ ಸುಪ್ರಸಿದ್ಧ ಶರಣಬಸವೇಶ್ವರ ದೇವಾಲಯದ ಮುಂದೆ ಇಂದು ಬೆಳಿಗ್ಗೆ ಹಲವಾರು ಭಕ್ತರು ಸೇರಿದ್ದರು.
ಆದರೆ ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇವಾಲಯದೊಳಗೆ ಜನಜಂಗುಳಿ ಸೇರುವದನ್ನು ತಡೆ ಹಿಡಿದದ್ದರಿಂದ ಭಕ್ತರು ದೇವಾಲಯದ ಪ್ರವೇಶ ದ್ವಾರಕ್ಕೆ ನಮಿಸಿ ಹೋಗುತ್ತಿರುವದು ಕಂಡು ಬಂದಿತು.
ಭಕ್ತರು ವಾಡಿಕೆಯಂತೆ ಶ್ರಾವಣ ಮಾಸ ಆರಂಭದಿAದ ಮುಗಿಯುವವವರೆಗೂ ಪ್ರತಿದಿನ ಬೆಳಿಗ್ಗೆ ಶುಚಿರ್ಭೂತರಾಗಿ ಶರಣ ಬಸವೇಶ್ವರ ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳಿಗೆ ಆಗಮಿಸಿ ಹೂಕಾಯಿ ಪತ್ರೆ ನೈವೇದ್ಯ ಅರ್ಪಿಸಿ ಹೋಗುತ್ತಾರೆ.ಆದರೆ ಈ ಎಲ್ಲ ಚಟುವಟಿಕೆ ಈಗ ಮನೆಯಲ್ಲಿಯೇ ಮಾಡುವಂತಾಗಿದೆ
ಮಾಸ್ಕ್ ಧರಿಸದವರಿಗೆ ದಂಡ:
ಶನಿವಾರ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದ 20 ಜನರಿಗೆ 5 ಸಾವಿರ ರೂ ದಂಡ ವಿಧಿಸಲಾಗಿದೆ. ಮಾರ್ಗಸೂಚಿ ಮೀರಿ ಸಂಚರಿಸುತ್ತಿದ್ದ 5 ದ್ವಿ ಚಕ್ರವಾಹನ, 6 ತ್ರಿಚಕ್ರವಾಹನ, 2 ಕಾರು ಸೇರಿದಂತೆ 13 ವಾಹನ ವಶಪಡಿಸಿಕೊಳ್ಳಲಾಗಿದೆ.