ಕಲಬುರಗಿ, ಆಗಸ್ಟ. 07: ಈ ವರ್ಷದ ಮಾರ್ಚ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸಕ್ರೀಯ ಸೋಂಕಿತರ ಸಂಖ್ಯೆ 78 ಆಗಿತ್ತು, ಮತ್ತೇ 4 ತಿಂಗಳ ಬಳಿಕ ಕೋವಿಡ ಸೋಂಕಿತರ ಸಂಖ್ಯೆ ಇಂದು 98 ಇಳಿಕೆಯಾಗಿ ಮೂರಂಕಿಯಲ್ಲಿದ್ದ ಸಂಖ್ಯೆ ಎರಡು ಅಂಕಿಗೆ ತಲುಪುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದೆ ಎಂಬAತಾಗಿದೆ.
ಶನಿವಾರ ಜಿಲ್ಲೆಯಲ್ಲಿ ಕೇವಲ 4 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಅಲ್ಲದೇ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 19 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡೆಗಡೆಹೊಂದಿದ್ದಾರೆ.
ಒಟ್ಟು ಇಲ್ಲಿಯರೆಗೆ ಆಸ್ಪತ್ರೆಗಳಿಂದ 60751 ಜನರು ಬಿಡುಗಡೆಯಾಗಿದ್ದು, ಇಂದು ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಯಾವುದೇ ವರದಿಯಾಗಿಲ್ಲ ಅಲ್ಲದೇ ಇಲ್ಲಿಯವರೆಗೆ ಕೋವಿಡಿ ಜಿಲ್ಲೆಯಲ್ಲಿ 818 ಮಂದಿ ಬಲಿಯಾಗಿದ್ದಾರೆ.
ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 98 ಕೋವಿಡ್ ಸಕ್ರೀಯ ಪ್ರಕರಣಗಳು ಉಳಿದಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಕಡೆಮೆಯಾಗುತ್ತಿರುವ ಕೊರೊನಾ ಸೋಂಕು:
ರಾಜ್ಯದಲ್ಲೂ ಸೋಂಕು ಕಡಿಮೆಯಾಗಿದ್ದು, ಇಂದು 1610 ಕೊರೊನಾ ಹೊಸ ಪ್ರಕರಣಗಳು ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿವೆ.
ರಾಜ್ಯದ 13 ಜಿಲ್ಲೆಗಳಲ್ಲಿ ಕೊರೊನಾದಿಂದ ಇಂದು 32 ಜನರು ಸಾವನ್ನಪ್ಪಿದ್ದು, ಇದರಲ್ಲಿ ಹಾಸನದಲ್ಲಿ 6, ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ತಲಾ 5, ದಕ್ಷಿಣ ಕನ್ನಡದಲ್ಲಿ 4, ಉಡುಪಿ, ಮಂಡ್ಯ ಮತ್ತು ಧಾರವಾಡ ಜಿಲ್ಲೆಗಳಲ್ಲಿ ತಲಾ ಇಬ್ಬರು, ವಿಜಯಪುರ, ರಾಮನಗರ, ಮೈಸೂರು, ಹಾವೇರಿ, ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬ ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ.
ಉಳಿದಂತೆ ಕಲಬುರಗಿ ಸೇರಿದಂತೆ 16 ಜಿಲ್ಲೆಗಳಲ್ಲಿ ಕೊರೊನಾಗೆ ಯಾವುದೇ ಸಾವು ಉಂಟಾಗಿಲ್ಲ.
ಬೆAಗಳೂರು ನಗರ 357, ದಕ್ಷಿಣ ಕನ್ನಡ 342, ಹಾಸನ 129, ಮೈಸೂರು 141, ಉಡುಪಿ 131 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿವೆ.
ಬಾಗಲಕೋಟೆ ಮತ್ತು ಬೀದರ ಜಿಲ್ಲೆಗಳಲ್ಲಿ ಕೊರೊನಾದ ಯಾವುದೇ ಹೊಸ ಪ್ರಕರಣಗಳು ಇಂದು ವರದಿಯಾಗಿಲ್ಲ.
10 ಜಿಲ್ಲೆಗಳಲ್ಲಿ ಒಂದಕ್ಕಿಯಲ್ಲಿ ಮತ್ತು 13 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿ ಕೊರೊನಾ ಹೊಸ ಪ್ರಕರಣಗಳು ದಾಖಲಾಗಿವೆ.