ನಾಗೂರ ಪಿಡಿಓ ಜಗದೇವಿ ಪವಾರ ಅಮಾನತ್ತು

0
1388

ಕಲಬುರಗಿ, ಆಗಸ್ಟ. 05: ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದಡಿಯಲ್ಲಿ ನಾಗೂರ ಮತ್ತು ಮಹಾಗಾಂವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಜಗದೇವಿ ಪವಾರ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದಿಲೇಶ ಸಾಸಿ ಅವರು ಆದೇಶ ಹೊರಡಿಸಿದ್ದಾರೆ.
ನಾಗೂರ ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆಯೆನ್ನಲಾದ ಖರೀದಿಯಲ್ಲಿನ ಅವ್ಯವಹಾರ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗ ಖಾತ್ರ ಯೋಜನೆಯಡಿ ಹಣ ಎತ್ತಿಹಾಕಿದ್ದ ಬಗ್ಗೆ ಇತ್ತೀಚೆಗೆ ದಲಿತ ಸೇನೆ ಕ್ರಮಕ್ಕೆ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ನಡೆಸಿದ ತನಿಖಾ ವರದಿ ಹಿನ್ನೆಲೆಯಲ್ಲಿ ಶ್ರೀಮತಿ ಜಗದೇವಿ ಪವಾರ ಅವರನ್ನು ತಾತ್ಕಾಲಿಕವಾಗಿ ಅಮಾನತ್ತಿಲಿಟ್ಟು ಆದೇಶ ಜಾರಿಮಾಡಿದ್ದಾರೆ.
ಈ ಕುರಿತಂತೆ ಮನೀಷ ಪತ್ರಿಕೆ ವರದಿ ಪ್ರಕಟಿಸಿತ್ತು, ಆದರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಿಡಿಓ ಜಗದೇವಿ ಪವಾರ ಅವರು ಪತ್ರಿಕೆಯವರ ಮೇಲೆ ಇಲ್ಲ ಸಲ್ಲದೇ ಆರೋಪ ಹೊರಡಿಸಿ, ತಾವು ಮಾಡಿದ ಕೆಲಸಕ್ಕೆ ದಾಖಲೆಗಳಿವೆ, ತಾವು ಯಾವುದೇ ಅವ್ಯವಹಾರ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

LEAVE A REPLY

Please enter your comment!
Please enter your name here