ಭ್ರಷ್ಟ ಪಿಡಿಓಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಲಿತ ಸೇನೆಯಿಂದ ಜಿ.ಪಂ. ಕಛೇರಿಗೆ ಮುತ್ತಿಗೆ

0
1352

ಕಲಬುರಗಿ, ಆಗಸ್ಟ. 03: ಜಿಲ್ಲೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಭ್ರಷ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ದಲಿತ ಸೇನೆಯು ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಜಿಲ್ಲಾ ಪಂಚಾಯತ್ ಕಛೇರಿಗೆ ಮುತ್ತಿಗೆ ಹಾಕಿದೆ.
ದಲಿತ ಸಂಘಟನೆಯ ನೂರಾರು ಕಾರ್ಯಕರ್ತರು ಸಂಘಟನೆಯ ಜಿಲ್ಲಾಧ್ಯಕ್ಷ ಡಿ.ಕೆ. ಮದನಕರ್ ನೇತೃತ್ವದಲ್ಲಿ ನಗರದ ಸರದಾರ ವಲ್ಲಭ ಭಾಯಿ ಪಟೇಲ್ ವೃತ್ತದಿಂದ ಮುಖ್ಯ ರಸ್ತೆಯ ಮುಖಾಂತರ ಬೃಹತ್ ಮೆರವಣಿಗೆಯೊಂದಿಗೆ ತೆರಳಿ ಜಿಲ್ಲಾ ಪಂಚಾಯತ್ ಕಛೇರಿಗೆ ಮುತ್ತಿಗೆ ಹಾಕಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸರ್ಕಾರವು ಗ್ರಾಮ ಅಭಿವೃದ್ಧಿಯ ಕನಸು ಹೊತ್ತಿಕೊಂಡು ರಾಜ್ಯದ ಪ್ರತಿ ಹಳ್ಳಿಗಳ ಅಭಿವೃದ್ಧಿಗಾಗಿ ಕೋಟಿ ಕೋಟಿ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಹಳ್ಳಿಗಳ ಸರ್ವೋತೋಮುಖ ಬೆಳವಣಿಗೆಗಾಗಿ ಅನೇಕ ಯೋಜನೆಗಳ ಹೆಸರಿನಿಂದ ಗ್ರಾಮ ಪಂಚಾಯತಗಳಿಗೆ ಹಣ ಬಿಡುಗಡೆ ಮಾಡುತ್ತಿದೆ. ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಪಂಚಾಯತ ಕೆಲವು ಭ್ರಷ್ಟ ಧನದಾಹಿ. ಅಧಿಕಾರಿಗಳ ನೀಚತನದಿಂದಾಗಿ ಗ್ರಾಮ ಪಂಚಾಯತ ಅಭಿವೃ ಅಧಿಕಾರಿಗಳೊಂದಿಗೆ ಶ್ಯಾಮಿಲಾಗಿ ಹಣ ಹಡಪ್, ಮಾಡುವದರಲ್ಲಿ ನಿರತರಾಗಿರುವುದು ಅತ್ಯಂತ ಖಂಡನೀಯ ಮತ್ತು ಭ್ರಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸದೇ ನಿರ್ಲಿಪ್ತವಾಗಿರುವ ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆ ಕಿಡಿಕಾರಿದೆ.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಇಸ್ಮಾಯಿಲ್ ಸಾಬ ಎಂಬ ಅಧಿಕಾರಿಯ ಕೃಪಾಕಟಾಕ್ಷಯಿಂದ ಕೆಲ ಪಿಡಿಓಗಳು ಸರಕಾರದ ವಿವಿಧ ಯೋಜನೆಗಳ ಹಣ ದುರುಪಯೋಗಿಪಡಿಸಿಕೊಳ್ಳುತ್ತಿದು, ಜಿಲ್ಲೆಯ ಹಳ್ಳಿಗಳಲ್ಲಿ ಕಾಮಗಾರಿಗಳನ್ನು ಮಾಡದೇ ಹಣ ಎತ್ತಿಹಾಕರಿದ್ದರ ವಿರುದ್ಧ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಮತ್ತು ಡಿಎಸ್-1 ಅವರ ಗಮನಕ್ಕೆ ತಂದರೆ, ಅತ್ಯಂತ ಬೇಜವಾಬ್ದಾರಿಯಿಂದ ತನಿಖಾ ವರದಿಯನ್ನು ಸಿದ್ದಪಡಿಸಿ ಭ್ರಷ್ಟ ಪಿಡಿಗಳಣ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಕಮಲಾಪೂರ ತಾಲೂಕಿನ ನಾಗೂರ ಗ್ರಾಮ ಪಂಚಾಯತ ಕಾರ್ಯದರ್ಶಿ ಜಗದೇವಿ ಪವಾರ ಎನ್ನುವವರು 14 ಮತ್ತು 15ನೇ ಹಣಕಾಸು ಯೋಜನೆಯ ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡಿದ್ದು, ತಾಲೂಕಾ ಪಂಚಾಯತದಿAದ ನಡೆಸಿರುವ ತಾಲೂಕ ಪಂಚಾಯತ್ ನಡೆಸಿದ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. ಕಾಮಗಾರಿಗಳನ್ನು ಮಾಡದೆ, ತನ್ನ ಗಂಡ ಹರಿಲಾಲ ಶಂಕರ ಪವಾರ ಎನ್ನುವವರ ಖಾತೆಗೆ ಹಣ ಪಾವತಿ ಮಾಡುವದರ ಮುಖಾಂತರ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಶ್ರೀಮತಿ ಜಗದೇವಿ ಪವಾರ ಎನ್ನುವವರ ಜಿಲ್ಲಾ ಪಂಚಾಯತನ ಡಿಎಸ್-1 ಇಸ್ಮಾಯಿಲ್ ಸಾಬರ ಬೆಂಬಲ ಮತ್ತು ತಾಲೂಕಾ ಪಂಜಾ ಕಾರ್ಯನಿರ್ವಾಹಕ ಅಧಿಕಾರಿಯ ಸಹಾಯ ಮತ್ತು ಜೆಂಬಲದೊAದಿಗೆ ನಾಗೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿ ಹಿನ್ನೆಡೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಜಿಲ್ಲಾ ಪಂಚಾಯತ್ ಡಿ.ಎಸ್. 1 ಇಸ್ಮಾಯಿಲ್ ಅವರು ಪಿಡಿಓ ಜಗದೇವಿ ಪವಾರ ಅವರ ನಿವಾಸದಲ್ಲಿಯೇ ಬಾಡಿಗೆಗೆ ಇದ್ದು, ಇವರ ಕುಮ್ಮಕ್ಕಿನಿಂದಾಗಿ ಈ ಎಲ್ಲ ಅವ್ಯವಹಾರಗಳು ನಡೆಯುವಂತಾಗಿವೆ ಎಂದು ಇತ್ತಿಚೆಗೆ ದಲಿತ ಸೇನೆಯ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಮದನಕರ್ ಅವರು ತಿಳಿಸಿದ್ದು, ಇಂತಹ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ನಿಲ್ಲದೇ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿದರು.
ದಲಿತ ಸೇನೆ ದೂರನ್ನು ಆಧರಿಸಿ ಮತ್ತು ಕಮಲಾಪೂರ ತಾಲೂಕಾ ಪಂಚಾಯತ ನಕಾರ್ಯನಿರ್ವಾಹಕ ಅಧಿಕಾರಿಗಳು ರವರು ಸಲ್ಲಿಸಿರುವ ತನಿಖಾ ವರದಿ ಆಧಾರದ ಮೇಲಿಂದ ತಕ್ಷಣ ಜಾರಿಯಾಗುವಂತೆ ನಾಗೂರ ಗ್ರಾಮ “ಪಂಚಾಯತ ಕಾರ್ಯದರ್ಶಿಯನ್ನು ಸೇವೆಯಿಂದ, ಅಮಾನತ್ತುಗೊಳಿಸಬೇಕು. ವಿವಿಧ ಯೋಜನೆಗಳ ಅಡಿಯಲ್ಲಿ ಕಾಮಗಾರಿಗಳನ್ನು ಮಾಡದೇ ತನ್ನ ಗಂಡನ ಖಾತೆಗೆ ವರ್ಗಾವಣೆ ಮಾಡಿರುವ ಪಂಚಾಯತನ ಕೋಟ್ಯಾಂತರ ರೂಪಾಯಿಯನ್ನು ವಸೂಲಿ ಮಾಡಿ ಅಭಿವೃದ್ಧಿಗೆ ಬಳಸಬೇಕು ಎಂದು ಮತ್ತು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆನಿರ್ದಕ್ಷಣ್ಯ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಬ್ರಹತ್ ಮೆರವಣಿಗೆಯಲ್ಲಿ ದಲಿತ ಸೇನೆಯ ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ ರೆಡ್ಡಿ, ಯುವ ಘಟಕದ ಜಿಲ್ಲಾಧ್ಯಕ್ಷರಾದ ಗೌಸಬಾಬಾ ಜುನೈದಿ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶಿವಲಿಂಗ ಎಸ್. ದೊಡ್ಡಮನಿ, ಕಲಬುರಗಿ ತಾಲೂಕ ಅಧ್ಯಕ್ಷರಾದ ಮಂಜುನಾಥ ಭಂಡಾರಿ, ಕಮಲಾಪೂರ ತಾಲೂಕ ಅಧ್ಯಕ್ಷ ರಾಜು ಲೇಂಗಟಿ, ನಗರ ಅಧ್ಯಕ್ಷರಾದ ಗುರು ಮಳಗಿ, ವಸಂತ ಲೇಂಗಟಿ, ಕಪೀಲ ವಾಲಿ, ಹುಸೇನಿ ತಳಕೇರಿ, ಮಲ್ಲಿಕಾರ್ಜುನ ಬೋಳನಿ, ಕಾಶಿನಾಥ ಸಿಂಧೆ, ಇರ್ಷಾದ ಮೇಲಿಮನಿ, ಧರ್ಮಾ ಬಂಗರಗಾ< ಮಹಾಂತ ಬಳೂಂಡಗಿ, ಅಂಬರೀಶ ಬಿ. ಗುಡಿ, ಬಂಡೆಪ್ಪ ಯಂಗನೂರ, ಮಲ್ಲು ಬಡಿಗೇರ, ಸಂಜು ಸಂಜು ಕಮ್ಮನ ಸೇರಿದಂತೆ ಸೇನೆಯ ನೂರಾರು ಕಾರ್ಯಕರ್ತರು ಭಾಗವಹಿಸಿದದರು.

LEAVE A REPLY

Please enter your comment!
Please enter your name here