ಮಹಾಗಾಂವ ಜಿ.ಪಂ.ಗೆ ಸ್ಥಳೀಯರಿಗೆ ಅಧ್ಯತೆಗೆ ಆಗ್ರಹ

0
848

ಕಲಬುರಗಿ, ಆಗಸ್ಟ. 01: ಮುಂಬರುವ ಜಿಲ್ಲಾ ಪಂಚಾಯತ್ ಸಾರ್ವತ್ರಿಕ ಚುನಾವಣೆಯಲ್ಲಿ ಮಹಾಗಾಂವ ಜಿಲ್ಲಾ ಪಂಚಾಯತ್ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಕೆಕೆ ಪಾಟೀಲ ಕಣ್ಣೂರ ಈ ಕ್ಷೇತ್ರಕ್ಕೆ ಈಗಾಗಲೇ ಪಕ್ಷದ ಹಲವಾರು ಕಾರ್ಯಕರ್ತರು ಆಕಾಂಕ್ಷಿಗಳಾಗಿದ್ದು, ಪಂಚಾಯತ್ ವ್ಯಾಪ್ತಿಗೆ ಬರುವ 19 ಹಳ್ಳಿಗಳಲ್ಲಿನ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು, ಸ್ಥಳೀಯರಿಗೆ ಆದ್ಯತೆ ನೀಡುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಮತ್ತು ಕ್ಷೇತ್ರದ ಜನತೆಯ ಆಶಯದಂತೆ ಅಭ್ಯರ್ಥಿಯನ್ನು ಗುರುತಿಸಿದಂತಾಗುತ್ತದೆ ಎಂಬುದು ಬಿಜೆಪಿ ಕಾರ್ಯಕರ್ತರ ನಿಲುವು ಆಗಿತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಲಾ ಭಕ್ಷ ಕುರಿಕೋಟಾ, ನರೇಶ ಕೆ. ಹರಸೂರಕರ್ ಮಹಾಗಾಂವ, ಸಿದ್ದು ಬಿರಾದಾರ ಕಣ್ಣೂರ, ಅಶೋಕ ಅಂಕಲಗಾ, ಸಂತೋಷ ಕೊಟ್ಟರಗಿ ಶಿರಗಾಪೂರ, ಮಹೇಂದ್ರಿಸಿAಗ್ ಕಗ್ಗನಮಡಿ, ಅಕ್ಷಯಕುಮಾರ ಅಮರಿಕರ್ ಕುರಿಕೋಟಾ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here