ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಶೆಣೈ, ತಗಡೂರ, ಕಪನೂರ, ಮಹೆಂದರ್ ನೇಮಕ

0
374

ಬೆಂಗಳೂರು, ಜುಲೈ. 26:ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಕ ಮಾಡಿ, ಸರಕಾರ ಆದೇಶ ಜಾರಿಮಾಡಿದೆ.
ಅಧ್ಯಕ್ಷರಾಗಿ ಕೆ. ಸದಾಶಿವ ಶೆಣೈ ಹಾಗೂ ಸದಸ್ಯರುಗಳನ್ನಾಗಿ ಶಿವಮೊಗ್ಗದ ಗೋಪಾಲ ಯಡಗೆರೆ, ಸಂಯುಕ್ತ ಕರ್ನಾಟಕದ ಹಿರಿಯ ಪತ್ರತರ್ಕರಾದ ಕೆಕೆ ಮೂರ್ತಿ, ವಿಶ್ವವಾಣಿಯ ಪತ್ರಕರ್ತ ಶಿವಕುಮಾರ ಬೆಳ್ಳಿತಟ್ಟೆ, ಮೈಸೂರಿನ ಕೂಡ್ಲಿ ಗುರುರಾಜ್, ಕರ್ನಾಟಕ ಕಾರ್ಯನಿರತ ಪತ್ರತರ್ಕರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರ,

ಮೈಸೂರಿನ ವಿಯಯ ವಾಣಿಯ ಸಿ. ಕೆ. ಮಹೇಂದರ್, ಕಲಬುರಗಿಯ ಬುದ್ಧಲೋಕ ಪತ್ರಿಕೆಯ ಸಂಪಾದಕ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ‍್ಯಕಾರಿಣಿ ಸದಸ್ಯರಾದ ದೇವೇಂದ್ರಪ್ಪ ಹೆಚ್. ಕಪನೂರ ಮತ್ತು ಶಿವಮೊಗ್ಗದ ನಮ್ಮ ನಾಡು ಪತ್ರಿಕೆಯ ಸಂಪಾದಕರಾದ ಕೆ. ವಿ. ಶಿವಕುಮಾರ ಅವರನ್ನು ನೇಮಿಸಿ ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಆಧೀನ ಕಾರ್ಯದರ್ಶಿ ಎಂ.ಜೆಸಿAತ್ ಅವರು ಆದೇಶ ಜಾರಿ ಮಾಡಿದ್ದಾರೆ.
ಅಧ್ಯಕ್ಷರಾಗಿ ಶೆಣೈ ಅಧಿಕಾರ ಸ್ವೀಕಾರ
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡ ಕೆ. ಸದಾಶಿವ ಶೆಣೈ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಶಿವಾನಂದ ತಗಡೂರು, ಶಿವಕುಮಾರ ಬೆಳ್ಳಿ ತಟ್ಚೆ ಮತ್ತು ಕೆ ಕೆ ಮೂರ್ತಿಗಳು ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ರೂಪಾ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here