ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಸದಸ್ಯರಾಗಿ ದೇವೇಂದ್ರಪ್ಪ ಕಪನೂರ ನೇಮಕ

0
730

ಬೆಂಗಳೂರು, ಜುಲೈ. 26:ಕಳೆದ ಎರಡು ದಶಕಗಳಿಂದ ನಿರಂತರ ಪತ್ರಿಕಾ ಸೇವೆಯಲ್ಲಿ ನಿರತರಾಗಿರುವ ಕಲಬುರಗಿಯ ಬುದ್ಧಲೋಕ ಪತ್ರಿಕೆಯ ಸಂಪಾದಕರೂ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕರ‍್ಯಕಾರಿಣಿ ಸಮಿತಿಯ ಸದಸ್ಯರಾದ ದೇವೇಂದ್ರಪ್ಪ ಹೆಚ್. ಕಪನೂರ ಅವರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಸದಸ್ಯರನ್ನಾಗಿ ಸರಕಾರ ನೇಮಿಸಿ ಆದೇಶ ಜಾರಿ ಮಾಡಿದೆ.
ಆಯ್ಕೆಗೆ ಹರ್ಷ:
ದೇವೇಂದ್ರಪ್ಪ ಹೆಚ್. ಕಪನೂರ ಆಯ್ಕೆಗೆ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿಸಿಂಗ್ ಠಾಕೂರ, ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಬಾಬುರಾವ ಯಡ್ರಾಮಿ, ಉದಯವಾಣಿಯ ಸ್ಥಾನಿಕ ಮುಖ್ಯಸ್ಥ ಹಣಮಂತರಾವ ಭೈರಾಮಡಗಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ, ಮನೀಷ ಪತ್ರಿಕೆ ಸಂಪಾದಕ ಹಾಗೂ ಪತ್ರಕರ್ತರ ಸಂಘದ ಜಿಲ್ಲಾ ಕೋಶಾಧ್ಯಕ್ಷ ರಾಜು ಎಂ. ದೇಶಮುಖ ಸೇರಿದಂತೆ ಹಲವಾರು ಪತ್ರಕರ್ತರು ತಮ್ಮ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here