ಆಳಂದ, ಚಿತ್ತಾಪೂರ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರ ನೇಮಕ

0
989
Chittapur Taluka KUWJ New President Prashant Patil

ಕಲಬುರಗಿ, ಜುಲೈ. 19: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಆಳಂದ ಮತ್ತು ಚಿತ್ತಾಪೂರ ತಾಲೂಕ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರ ನೇಮಕ ಮಾಡಲಾಗಿದೆ.
ಆಳಂದ ತಾಲೂಕ ಅಧ್ಯಕ್ಷರಾಗಿ ಮಹಾದೇವ ಮಡಗಾಂವ ಮತ್ತು ಚಿತ್ತಾಪೂರ ತಾಲೂಕ ಅಧ್ಯಕ್ಷರಾಗಿ ಪ್ರಶಾಂತ ಪಾಟೀಲ್ ಅವರನ್ನು ನೇಮಿಸಿ ಜಿಲ್ಲಾಧ್ಯಕ್ಷರಾದ ಭವಾನಿಸಿಂಗ್ ಅವರು ಆದೇಶ ಜಾರಿಮಾಡಿದ್ದಾರೆ.
ಇತ್ತೀಚೆಗೆ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಕೈಗೊಂಡ ನಿಣರ್ಯದಂತೆ ಈ ನೇಮಕಾತಿ ಮಾಡಲಾಗಿದೆ ಎಂದು ಸಂಘದ ಪ್ರದಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ ಅವರು ತಿಳಿಸಿದ್ದಾರೆ.
ಇನ್ನು ಜಿಲ್ಲೆಯ ಚಿಂಚೋಳಿ ತಾಲೂಕ ಅಧ್ಯಕ್ಷರ ನೇಮಕ ಬಾಕಿ ಉಳಿದಿದಂತಾಗಿದೆ.
ಈಗಾಗಲೇ ಅಫಜಲಪುರ, ಸೇಡಂ, ಜೇವರ್ಗಿ, ಶಹಾಬಾದ ತಾಲೂಕ ಘಟಕಗಳಿಗೆ ಅಧ್ಯಕ್ಷರುಗಳನ್ನಾಗಿ ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here