ಜುಲೈ 10ರಂದು ಕಲಬುರಗಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

0
1148

ಕಲಬುರಗಿ, ಜುಲೈ. 07:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದೇ ತಿಂಗಳು ಜುಲೈ 10ರಂದು ಕಲಬುರಗಿ ಜಿಲ್ಲೆಗೆ ಆಗಮಿಸಲಿದ್ದಾರೆ.
ಬೆಳಿಗ್ಗೆ 10.45ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿ 11.15ಕ್ಕೆ ಎಂ.ಎಸ್.ಕೆ.ಮಿಲ್ ಹತ್ತಿರದ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಲಿರುವ ತರಕಾರಿ ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ.
11.30ಕ್ಕೆ ಶರಣಸಿರಗಿಯ ಮಧ್ಯದ ಮೇಲುಸೇತುವೆ ಲೋಕಾರ್ಪಣೆ, ರಾಮಂದಿರ ಮಧ್ಯದ ಮೇಲುಸೇತುವೆ ಲೋಕಾರ್ಪಣೆ, ಲೋಕಾಪಯೋಗಿ ಭವನ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮವನ್ನು ಲೋಕೋಪಯೋಗಿ ಇಲಾಖೆ ಭವನ ಆವರಣದಲ್ಲಿ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ಸಹಕಾರ ಇಲಾಖೆ ವತಿಯಿಂದ ಆಯೋಜಿಸಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿAದ ರೈತರಿಗೆ ಬಡ್ಡಿರಹೀತ ಸಾಲ ವಿತರಣಾ ಕಾರ್ಯಕ್ರಮವನ್ನು ಡಾ. ಎಸ್. ಎಂ. ಪಂಡೀತ ರಂಗಮAದಿರದಲ್ಲಿ ಭಾಗವಹಿಸಿ ನಂತರ ಜಿಲ್ಲಾ ಬಿಜೆಪಿ ಕಛೇರಿಗೆ ಮಧ್ಯಾಹ್ನ 1.15ಕ್ಕೆ ಭೇಟಿ ನೀಡುವರು.
ನಂತರ 1.45ರಿಂದ ಐವಾನ್ ಎ. ಶಾಹಿ ಅತಿಥಿ ಗೃಹದಲ್ಲಿ ತಂಗಲಿರುವ ಮುಖ್ಯಮಂತ್ರಿಗಳು ಮತ್ತೆ ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಜಿಲ್ಲಾ ಕೋವಿಡ್-19 ಹಾಗೂ ಇತರೆ ಅಭಿವೃದ್ಧಿ ವಿಷಯಗಳ ಕುರಿತಂತೆ ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
4.15ಕ್ಕೆ ಕಲಬುರಗಿ ವಿಮಾನ ನಿಲ್ದಾಣ ಮೂಲಕ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

LEAVE A REPLY

Please enter your comment!
Please enter your name here