ಖೂಬಾ, ಶೋಭಾ, ನಾರಾಯಣಸ್ವಾಮಿ, ರಾಜೀವ ಸೇರಿ 43 ಜನರು ಪ್ರಧಾನಿ ಮೋದಿ ಸಂಪುಟಕ್ಕೆ ಸೇರ್ಪಡೆ

0
800

ನವದೆಹಲಿ,ಜು.7- ಪ್ತಧಾನಿ ನರೇಂದ್ರ ಮೋದಿಯವರು ಬಹು ನಿರೀಕ್ಷಿತ ಸಂಪುಟ 02 ಪುನರ್ ರಚನೆ ಮಾಡಿದ್ದು, ಕರ್ನಾಟಕದ ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ನಾರಾಯಣ ಸ್ವಾಮಿ, ರಾಜೀವ್ ಚಂದ್ರಶೇಖರ್ ಸೇರಿದಂತೆ ಒಟ್ಟು 43 ಮಂದಿ ನೂತನ ಕೇಂದ್ರ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾವಿಧಿ ಬೋಧಿಸಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎರಡನೇ ಬಾರಿ ಆಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಸಂಪುಟ ವಿಸ್ತರಣೆ ಮಾಡಿದ್ದಾರೆ.
ಇಂದು ಪ್ರಮಾಣವಚನ ಸ್ವೀಕರಿಸಿದ ಕರ್ನಾಟಕದ ನಾಲ್ವರು ರಾಜ್ಯ ಸಚಿವರಾಗಿದ್ದಾರೆ. ಆದರೆ ಯಾರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿಲ್ಲ. ರಾಜ್ಯದಿಂದ 26 ಮಂದಿ ಸಂಸದರಾಗಿ ಆಯ್ಕೆಯಾಗಿದ್ದರೂ ಇಂದು ಪ್ರಮಾಣ ವಚನ ಸ್ವೀಕರಿಸಿದ ನಾಲ್ವರು ರಾಜ್ಯ ಖಾತೆಯ ಸಹಾಯಕ ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕೇಂದ್ರ ಸಂಪುಟದಿAದ ಡಿ.ವಿ.ಸದಾನಂದ ಗೌಡ ಅವರನ್ನು ಕೈಬಿಟ್ಟು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭ ಕರಂದ್ಲಾಜೆ ,ವೀರಶೈವ ಸಮುದಾಯದ ಬೀದರ್ ಸಂಸದ ಭಗವಂತ ಖೂಬಾ, ಎಸ್‌ಟಿ ಸಮುದಾಯದ ಚಿತ್ರದುರ್ಗ ಸಂಸದ ಆನೇಕಲ್ ನಾರಾಯಣ ಸ್ವಾಮಿ ಹಾಗೂ ಮೂರು ಬಾರಿ ರಾಜ್ಯಸಭಾ ಸಚಿವರಾಗಿ ಆಯ್ಕೆಯಾಗಿರುವ ಉದ್ಯಮಿ ರಾಜೀವ್ ಚಂದ್ರಶೇಖರ್‌ಗೆ ಅವಕಾಶ ಕಲ್ಪಿಸಲಾಗಿದೆ.
ಮೋದಿ ಅವರ ಇಂದಿನ ಸಂಪುಟ ವಿಸ್ತರಣೆಯಲ್ಲಿ ಓಬಿಸಿಗೆ 27 ಅದರಲ್ಲಿ 5 ಕ್ಯಾಬಿನೆಟ್ 15 ರಾಜ್ಯಸಚಿವರುಗಳು, ಮತ್ತು 11 ಜನ ಮಹಿಳೆಯರಿಗೆ ಆದ್ಯತೆ ನೀಡಲಾಗಿದ್ದು, ಅದರಲ್ಲಿ ಇಬ್ಬರು ಮಹಿಳೆಯರಿಗೆ ಕ್ಯಾಬಿನೆಟ್ ದರ್ಜೆ ಉಳಿದಂತೆ 9 ಮಹಿಳೆಯರಿಗೆ ಆಯಾ ರಾಜ್ಯದ ರಾಜ್ಯ ಸಚಿವರಾಗಿ ಮತ್ತು ಅಲ್ಪಸಂಖ್ಯಾತರಿಗೆ 5 ಸ್ಥಾನ ನೀಡಿದ್ದು, ಅದರಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧಿಷ್ಟಗಳಿಗೆ ತಲಾ ಒಬ್ಬರಿಗೆ ಅವಕಾಶ ನೀಡಲಾಗಿದೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಮುಖಗಳಿಗೆ ಮೋದಿ ಮಣೆ ಹಾಕಿದ್ದಾರೆ. ಅದರಲ್ಲೂ ಉತ್ರರ ಪ್ರದೇಶಕ್ಜೆ ಸಂಪುಟ ವಿಸ್ತರಣೆಯಲ್ಕಿ ಸಿಂಹಪಾಲು ನೀಡಿರುವುದು ವಿಶೇಷ.
ಒಟ್ಟಾರೆ ಮೋದಿ ಸಂಪುಟಕ್ಕೆ 15 ಮಂದಿ ಸಂಪುಟ ದರ್ಜೆ ಸಚಿವರಾಗಿ 28 ಮಂದಿ ರಾಜ್ಯಸಚಿವರಾಗಿ ಮೋದಿ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಿದ್ದಾರೆ. ಆಡಳಿತದಲ್ಲಿ ಅನುಭವ ಹೊಂದಿರುವವರಿಗೆ ಮತ್ತು ಮಹಿಳೆಯರಿಗೆ ಮೋದಿ ಅವಕಾಶ ಕಲ್ಪಿಸಿದ್ದಾರೆ.
ಸಂಪುಟ ದರ್ಜೆ ಸಚಿವರು; ಮಹಾರಾಷ್ಟದ ನಾರಾಯಣ್ ಠಾಕೂರ್ ರಾಣೆ, ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್, ಡಾ. ವೀರೇಂದ್ರಕುಮಾರ್, ಜ್ಯೋತಿರಾದಿತ್ಯ ಮಾಧವರಾವ್ ಸಿಂಧಿಯಾ, ರಾಮಚಂದ್ರ ಪ್ರತಾಪ್ ಸಿಂಗ್, ಅಶ್ಚಿನಿ ವೈಷ್ಣವ್, ಬಿಹಾರ- ಪಶುಪತಿ ಕುಮಾರ್ ಪರಸ್ , ಅರುಣಾಚಲ ಪ್ರದೇಶ ಕಿರಣ್ ರಿಜಿಜು ಎರಡನೇ ಬಾರಿ ಸಚಿವರಾಗಿ ಬಿಹಾರ- ರಾಜ್ ಕುಮಾರ್ ಸಿಂಗ್, ಪಂಜಾಬಿನ ಹರ್ದೀಪ್ ಸಿಂಗ್ ಪುರಿ, ಗುಜರಾತ್ ನ ಮನ್ಸುಕ್ ಮಾಂಡವಿಯಾ, ತರಾಜಸ್ತಾನದ ಭೂಪೇಂದ್ರ ಯಾದವ್, ಗುಜರಾತ್ ಪುರಿಷೋತ್ತಮ್ ರೂಪಾಲಾ, *ಸಿಂಕAದರಾಬಾದ್ ಜಿ.ಕಿಶನ್ ರೆಡ್ಡಿ, .ಹಿಮಾಚಲ ಪ್ರದೇಶ (ಅನುರಾಗ್ ಸಿಂಗ್ ಠಾಕೂರ್
ರಾಜ್ಯ ಖಾತೆ ಸಚಿವರು : ಉತ್ತರ ಪ್ರದೇಶ : ಪಂಕಜ್ ಚೌಧರಿ, ಅನುಪ್ರಿಯಾ ಸಿಂಗ್ ಪಟೇಲ್, ಸತ್ಯಾಪಾಲ್ ಸಿಂಗ್ ಬಘೇಲ್. ಕೌಶಲ್ ಕಿಶೋರ್, ವಿ.ಎಲ್.ವರ್ಮಾ. ಕರ್ನಾಟಕದಿಂದ ರಾಜೀವ್ ಚಂದ್ರಶೇಖರ್, ಆನೇಕಲ್ ಅಬ್ಬಯ್ಯ ನಾರಾಯಣ ಸ್ವಾಮಿ, ಭಗವಂತ ಗುರುಬಸಪ್ಖ ಖೂಬಾ, ಶೋಭಾ ಕರಂದ್ಲಾಜೆ, ಉತ್ತರ ಪ್ರದೇಶ- ಭಾನುಪ್ರತಾಪ್ ಸಿಂಗ್ ವರ್ಮಾ. ಗುಜರಾತ್ -ದರ್ಶನಾ ವಿಕ್ರಂ ಜರ್ದೋಶ್ ವಿಕ್ರಂ. ದೆಹಲಿ -ಮೀನಾಕ್ಷಿ ಲೇಖಿ. ಜಾರ್ಖಂಡ್:ಅನ್ನಪೂರ್ಣ ದೇವಿ. ಉತ್ತರಾ ಖಂಡ್- ಅಜಯ್ ಕುಮಾರ್ ಭಟ್ ಜಾರ್ಖಂಡ್ :ಅಜಯ್ ಕುಮಾರ್. ಗುಜರಾತ್ : ಚೌವಾಣ್ ದೇವಾಂಶ. ಮಹಾರಾಷ್ಟ್ರದಿಂದ ಕಪಿಲ್ ಮೋರೇಶ್ವರ್ ಪಾಟೀಲ್. ತ್ರಿಪುರಾ- ಸುಶ್ರೀ ಪ್ರತಿಮಾ ಭೌಮಿಕ್. ಪಶ್ಚಿಮ ಬಂಗಾಳ ಡಾ.ಸುಭಾಷ್ ಸರ್ಕಾರ್ ಮಹಾರಾಷ್ಟ್ರ -,ಭಗವತ್ ಕಿಶನ್ ರಾವ್ ಕರಡ್ ಡಿ.ಆರ್. ರಾಜ್‌ಕುಮಾರ್ ರಂಜನ್ ಸಿಂಗ್ ಡಾ. ಭಾರತಿ ಪ್ರವೀಣ್ ಪವಾರ್‌ಬಿಶ್ವೇಶ್ವರ ತುಡು ಶಾಂತನು ಠಾಕೂರ್ ಮುಂಜಾಪರ ಮಹೇಂದ್ರಭಾಯ್ ಜಾನ್ ಬಾರ್ಲಾ ಡಿ.ಆರ್. ಎಲ್.ಮುರುಗನ್ ನಿಸಿತ್ ಪ್ರಮಣಿಕ್.
ರಾಜೀನಾಮೆ ನೀಡಿರುವ ಸಚಿವರು :ಹರ್ಷವರ್ಧನ್, ರಮೇಶ್ ಪೊಕ್ರಿಯಾಲ್ ನಿಶಾಂಕ್, ಸಂತೋಷ್ ಗಂಗ್ವಾರ್, ಡಿ.ವಿ.ಸದಾನಂದ ಗೌಡ, ದೇಬಾಶ್ರಿ ಚೌಧರಿ, ಧನ್ವೆರಾವ್ ಸಾಹೇಬ್, ಸಂಜಯ್ ಧೋತೆ, ತಾವಲ್ ಚಂದ್ ಗೆಹ್ಲೋಟ್, ಅಶ್ವಿನ್ ಕುಮಾರ್ ಚೌಭೆ, ಬಾಬುಲ್ ಸುಪ್ರಿಯೊ, ಪ್ರತಾಪ್ ಸಾರಂಗಿ, ರತನ್ ಲಾಲ್ ಕಟಾರಿಯಾ. ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್.

LEAVE A REPLY

Please enter your comment!
Please enter your name here