![](https://manishpatrike.com/wp-content/uploads/2021/07/NEKRTC.jpg)
![](https://manishpatrike.com/wp-content/uploads/2021/07/NEKRTC.jpg)
ಕಲಬುರಗಿ.ಜುಲೈ.7:ಈಶಾನ್ಯ ರ‍್ನಾಟಕ ರಸ್ತೆ ಸಾರಿಗೆ ನಿಗಮದ ಹೆಸರನ್ನು “ಕಲ್ಯಾಣ ರ‍್ನಾಟಕ ರಸ್ತೆ ಸಾರಿಗೆ ನಿಗಮ” ಎಂದು ಮರುನಾಮಕರಣ ಮಾಡಲಾಗಿದೆ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷö್ಮಣ ಸವದಿ ಅವರು ತಿಳಿಸಿದರು.
ಈಶ್ಯಾನ ರ‍್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರಗಿ ಹಾಗೂ ಸೆಲ್ಕೋ ಸೋಲಾರ್ ಸಿಸ್ಟಮ್ ಬೆಂಗಳೂರು ಇವರ ಸಹಯೋಗದಲ್ಲಿ ಬುಧವಾರ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸರ‍್ವಜನಿಕ ಪ್ರಯಾಣಿಕರಿಗೆ ಉಪಯೋಗವಾಗುವಂತೆ ವಿಶೇಷವಾಗಿ ನರ‍್ಮಿಸಿದ ಸಂಚಾರಿ ಮಹಿಳಾ ಶೌಚಾಲಯ ಹಾಗೂ ಮಗುವಿಗೆ ಹಾಲುಣಿಸುವ ವ್ಯವಸ್ಥೆ ಇರುವ ಸಂಚಾರಿ ವಾಹನವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
“ಕಲ್ಯಾಣ ರ‍್ನಾಟಕ ರಸ್ತೆ ಸಾರಿಗೆ ನಿಗಮ” ಎಂದು ಮರುನಾಮಕರಣ ಪತ್ರವನ್ನು ಈಶಾನ್ಯ ರ‍್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ವ್ಯವಸ್ಥಾಪಕ ನರ‍್ದೇಶಕ ಕರ‍್ಮಾರಾವ್. ಎಂ, ಅವರಿಗೆ ಹಸ್ತಾಂತರಿಸಿ ಸಚಿವರು, ಕೂಡಲೇ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕೆಂದು ಅವರು ತಿಳಿಸಿದರು.
ಕರೋನಾದಿಂದ ಉಂಟಾದ ನಷ್ಟಕ್ಕೆ ರ‍್ಕಾರವು ನಿಗಮಕ್ಕೆ ಅನುದಾನ ನೀಡುತ್ತಿದ್ದು, ಯಾವುದೇ ಸಿಬ್ಬಂದಿಯ ವೇತನವೂ ಬಾಕಿ ಇರುವುದಿಲ್ಲ. ಕರೋನಾದಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ನಿಗಮ ಕರ‍್ಯ ನರ‍್ವಹಿಸುತ್ತಿವೆ ಎಂದರು.
ಮುಂದಿನ ದಿನಗಳಲ್ಲಿ ನಮ್ಮದೇ ಘಟಕಗಳಲ್ಲಿ 200 ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪನೆ ಮಾಡುವ ಯೋಜನೆಯಿದ್ದು, ಅನಾರೋಗ್ಯ ತೊಂದರೆ ಇರುವ ಸಿಬ್ಬಂದಿಗಳನ್ನು ಈ ಬಂಕ್‌ಗಳಲ್ಲಿ ಸೇವೆಗೆ ನಿಯೋಜಿಸಲಾಗುವುದು ಎಂದು ಅವರು ವಿವರಿಸಿದರು.
ಜಿಲ್ಲೆಗೆ 4 ಎಲೆಕ್ಟಿçಕಲ್ ಬಸ್ಸಗಳು ಶೀಘ್ರದಲ್ಲಿಯೇ ಬರಲಿವೆ. ಈಗಾಗಲೇ ನಿಗಮದಲ್ಲಿ ಕೋರಿಯರ್ ರ‍್ವಿಸ್ ಆರಂಭವಾಗಿದೆ ಎಂದು ತಿಳಿಸಿದ ಅವರು 2 ಕೋವಿಡ್ ಲಸಿಕಾ ಬಸ್‌ಗಳನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದರು.
ಈ ಸಂರ‍್ಭದಲ್ಲಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ, ಕಲಬುರಗಿಯ ಕಲ್ಯಾಣ ರ‍್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ, ವಿಧಾನ ಪರಿಷತ್ ಶಾಸಕರುಗಳಾದ ಬಿ.ಜಿ ಪಾಟೀಲ, ಶಶೀಲ ಜಿ.ನಮೋಶಿ, ಎನ್ ರವಿಕುಮಾರ್, ರ‍್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಬಿ. ಟೆಂಗಳಿ, ಬೆಂಗಳೂರು ಸೆಲ್ಕೋ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಸುದಿಪ್ತ ಘೋಷ್, ರಾಯಚೂರು ಸೆಲ್ಕೋ ಹಿರಿಯ ವ್ಯವಸ್ಥಾಪಾಕ ಆನಂದ ಕುಮಾರ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾö್ನ, ಎನ್‌ಇಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ನಿಯಂತ್ರಕ ಕೊಟ್ರಪ್ಪ, ವಿಭಾಗ-1 ರ ಸಂಚಾರ ನಿಯಂತ್ರಣಾಧಿಕಾರಿ ಸಂತೋಷ್ ಕುಮಾರ್ ಹೆಚ್.ವಿ, ವಿಭಾಗ-2 ರ ಸಂಚಾರ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ಇನ್ನಿತರ ಅಧಿಕಾರಿಗಳು ಹಾಜರಿದ್ದರು.