ಕಲಬುರಗಿ, ಜುಲೈ, 03: ಕರ್ಫ್ಯೂ, ನಿಷೇದಾಜ್ಞೆ ಅಂದರೆ ನಾಲ್ಕು ಜನಕ್ಕಿಂತ ಹೆಚ್ಚು ಜನರು ಓಡಾಡಬಾರದು ಅಲ್ಲದೇ ಅಂಗಡಿ ಮುಂಗಟ್ಟುಗಳು ತೆರೆಯಬಾರದು. ಆದರೆ ಕೊರೊನಾದಿಂದ ಇದರಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಿಕೆಯಿದ್ದು, ವಾರದ ಶನಿವಾರ ಹಾಗೂ ರವಿವಾರ ಎರಡು ದಿನಗಳ ಕಾಲ ಕಠಿಣ ಲಾಕ್‌ಡೌನ್ ಎಂದು ಸರಕಾರ ಮಾರ್ಗಸೂಚಿ ಪ್ರಕಟಿಸಿದರೂ ಕೂಡಾ ಕಲಬುರಗಿ ನಗರದ ಹಲವಾರು ಬಡಾವಣೆ ಹಿಡಿದು ಮುಖ್ಯರಸ್ತೆಗಳಲ್ಲಿ ಜನರ ಓಡಾಡವಷ್ಟೆ ಅಲ್ಲದೇ ಎಂದಿನAತೆ ಹಲವಾರು ಅಂಗಡಿ, ಮುಂಗಟ್ಟುಗಳು ತೆರೆದು ವ್ಯಾಪಾರ ಮಾಡುತ್ತಿ ಸರಕಾರದ ವಾರಾಂತ್ಯದ ಲಾಕ್‌ಡೌನ್‌ಗೆ ಕ್ಯಾರೆ ಅನ್ನದಿವುದರಿಂದ ಇದೊಂದು ಜೋಕ್ ಲಾಕ್‌ಡೌನ್ ಎಂದೇ ಹೇಳಬೇಕಾಗುತ್ತದೆ.
ಗಂಜ ಪ್ರದೇಶದಲ್ಲಿ ಹಲವಾರು ಅಂಗಡಿಗಳು ತೆರೆದಿದ್ದು, ಇನ್ನು ಕಿರಾಣಾ ಬಜಾರದಲ್ಲಿ ಎಲ್ಲ ಅಂಗಡಿಗಳು ಮುಚ್ಚಿವೆ. ಇನ್ನು ನಗರದ ಹೃದಯ ಭಾಗ ಸುಪರ್ ಮಾರ್ಕೆಟ್ ಪ್ರದೇಶದಲ್ಲಿ ಹಲವಾರು ದೊಡ್ಡ ದೊಡ್ಡ ಅಂಗಡಿಗಳು ತೆರೆದು ನಮಗೇನು ಯಾರು ಏನು ಮಾಡಿಯಾರು ಎಂಬAತೆ ವ್ಯಾಪಾರ ನಡೆಸುತ್ತಿದ್ದಾರೆ.
ಇನ್ನು ಬಡಾವಣೆಗಳ ಗತಿಯಂತೂ ಯಾರೂ ಕೇಳಕೂಡದು ಯಾಕೆಂದರೆ ಇಲ್ಲಿ ಯಾವ ಪೋಲಿಸರು ಕೂಡ ಹೋಗದಿರುವದರಿಂದ ಇವರಿಗೆ ಲಾಕ್‌ಡೌನ್ ಎಂದರೆ ಇಷ್ಟೇನಾ ಎನ್ನುವಂತಾಗಿದೆ.
ಶಹಾಬಜಾರ ನಾಕಾದಿಂದ ಖಾದರಿ ಚೌಕ್ ಮಾರ್ಗವಾಗಿ ಆಳಂದ ಚೆಕ್ ಪೋಸ್ಟರ ವರೆಗೆ ಸಣ್ಣ ಸಣ್ಣ ಅಂಗಡಿ, ಬಿಡಿ ದೊಡ್ಡ ದೊಡ್ಡ ಅಂಗಡಿಗಳು ತೆರೆದಿವೆ, ಇದಕ್ಕೆ ಪೋಲಿಸರೇ ಕೇಳುವಂತಿಲ್ಲ ಎನ್ನಲಾಗಿದೆ.
ಎಂಬಿ ನಗರ ಠಾಣೆ ವ್ಯಾಪ್ತಿಗೆ ಬರುವ ಸಂಗತ್ರಾಸ ವಾಡಿಯಲ್ಲಿ ಈಗ ಬಿಡಿ ಕಳೆದ ಎರಡು ತಿಂಗಳಿAದಲ್ಲೂ ಯಾವುದೇ ಅಂಗಡಿಗಳು ಬಂದೇ ಆಗಿಲ್ಲ, ಇಲ್ಲಿ ರಾತ್ರಿ 2 ಗಂಟೆಯವರೆಗೆ ಹೋಟೆಲ್ ರಾಜಾರೋಷವಾಗಿ ತೆರೆದಿರುವ ಸಮಯದಲ್ಲಿ ಇದೇನು ಪುಟಗೋಸಿ ಲಾಕ್‌ಡೌನ್ ಎಂದು ವ್ಯಾಪಾರಸ್ತರು ದರ್ಪದಿಂದ ಅಂಗಡಿ ತೆರೆದಿದ್ದಾರೆ.
ಲಾಕ್‌ಡೌನ್ ಮಾರ್ಗಸೂಚಿಗಳ ಪ್ರಕಾರ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಯಾವುದೇ ಅದರಲ್ಲಿ ಹಣ್ಣು, ಕಾಯಿಪಲ್ಲೆ, ಹಾಲು, ಮೆಡಿಕಲ್, ಆಸ್ಪತ್ರೆಗಳು, ಮೆಡಿಕಲ್ ಡಿಸ್ಟಿçÃಬ್ಯೂರ‍್ಸ್ ಸೇರಿದ್ದು, ಹೊಟೆಲ್, ದಿನಸಿ ಅಂಗಡಿಗಳು, ಕಾರ್‌ಪೆಂಟರ್, ಝರಾಕ್ಸ್ ಅಂಗಡಿಗಳು, ಗ್ಯಾರೇಜ್, ಫೋಟೋ ಸ್ಟುಡಿಯೋ, ಮೋಬೈಲ್ ಶಾಪೀಗಳು, ಸಿದ್ದ ಉಡುಪುಗಳು ಬಟ್ಟೆ ಅಂಗಡಿಗಳು ಹಲವಾರು ಪ್ರದೇಶಗಳಲ್ಲಿ ವೀಕೆಂಡ್ ಕರ್ಫ್ಯೂನಲ್ಲೂ ಸಹ ತೆರೆದಿದ್ದು ನೋಡಿದರೆ ಜನರು ಹೇಳುವಂತೆ ಇದೊಂದು ಕಾಟಾಚಾರದ ಹಾಗೂ ಜೋಕ್ ಲಾಕ್‌ಡೌನ್ ಆಗಿದೆ ಅನ್ನುವಂತಾಗಿದೆ.
ಸAಬAಧಪಟ್ಟ ಅಧಿಕಾರಿಗಳು ಇನ್ನು ಆಯಾ ಆಯಾ ಬಡಾವಣೆಗಳಿಗೆ ಮುಖ್ಯರಸ್ತೆಯಲ್ಲಿ ಓಡಾಡಿದರೆ ನಿಜಾಂಶ ಗೊತ್ತಾಗುತ್ತದೆ. ನಾವು ಉದ್ದೇಶಪೂರ್ವಕವಾಗಿಯೇ ಯಾವುದೇ ತೆರೆದ ಅಂಗಡಿಗಳ ಭಾವಚಿತ್ರ ಪ್ರಕಟಿಸಿಲ್ಲ, ಯಾರೋಬ್ಬರ ವಿರುದ್ಧದ ಸುದ್ದಿಯನ್ನು ನಮ್ಮ ಪತ್ರಿಕೆ ಪ್ರಕಟಿಸುವುದಿಲ್ಲ.
ಸರಕಾರದ ಹಿಡಿತದಲ್ಲಿರುವ ಒಂದೇ ಒಂದು ಉದ್ಯಮ ಅಂದರೆ ಅದು ಬಾರ್ ಮತ್ತು ವೈನ್ಸ್ ಶಾಪೀಗಳು, ಅವುಗಳಿಗೆ ನಿರ್ಧಿಷ್ಟವಾದ ಸಮಯ ನೀಡಿದ್ದು, ಅದರ ಪ್ರಕಾರ ಅವರವರ ವ್ಯಾಪಾರ ನಡೆಸಲಾಗುತ್ತಿದೆ, ಆದರೆ ಬಾರ್‌ಗಳಲ್ಲಿ ಕುಳಿತು ಕುಡಿಯಂತೆ ಸರಕಾರ ಹೊರಡಿಸಿದ ಆದೇಶಕ್ಕೆ ಯಾರು ಪಾಲಿಸದಿರುವುದು ಒಂದು ಕಡೆ ಯಾದರೆ ಉಳಿದ ವಾರದ ಐದು ದಿನಗಳಲ್ಲಿ ಪಾರ್ಸಲ್ ನೆಪ್‌ದಲ್ಲಿ ರಾತ್ರಿ 8 ಗಂಟೆಯವರೆಗೆ ಹಿಂಬಾಗಿಲು ತೆರೆದು ಗ್ರಾಹಕರಿಗೆ ಬಾರ್‌ನಲ್ಲಿಯೇ ಸೇವೆ ಒದಗಿಸುತ್ತಿರುವುದು ನಗರದ ಹಲವಾರು ಕಡೆ ಕಂಡು ಬಂದರೂ ಪೋಲಿಸರು ಮಾತ್ರ ತಲೆ ಕೆಡಿಸಿಕೊಂಡಿಲ್ಲ.