ಕಲಬುರಗಿ ಸೇರಿದಂತೆ ರಾಜ್ಯದ 16 ಜಿಲ್ಲೆಗಳು ಅನ್‌ಲಾಕ್ ಸಿನೇಮಾ, ಮಾಲ್, ಪಬ್, ಶಿಕ್ಷಣ ಸಂಸ್ಥೆಗಳಿಗೆ ನಿರ್ಭಂಧ

    0
    1788

    ಬೆoಗಳೂರು, ಜೂನ್. 19:ಕೊರೊನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಅನಲಾಕ್ 02ರ ಅನ್ವಯ ಮೊದಲಿದ್ದ ನಿರ್ಬಂಧ ಸಡಿಸಲಿಸಿ ಸೋಮವಾರದಿಂದ ಶೇ. 90ರಷ್ಟು ವಾಣಿಜ್ಯ ಚಟುವಟಿಕೆಗಳ ಪ್ರಾರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.
    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿ, ನಿರ್ಭಂಧ ಸಡಿಲಿಸಿದ ಜಿಲ್ಲೆಗಳಲ್ಲಿ ಸಂಜೆ 5 ಗಂಟೆಯವರೆಗೆ ಅನುಮತಿಸಿ ಕೆಲವು ಚಟುವಟಿಕೆಗಳು ಹೊರತುಪಡಿಸಿ ಎಲ್ಲ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾದ ಬಗ್ಗೆ ಪ್ರಕಟಿಸಿದರು.
    ಶೇ. 5ಕ್ಕಿಂತ ಹೆಚ್ಚಿರುವ 13 ಜಿಲ್ಲೆಗಳಲ್ಲಿ ಜೂನ್ 7ರಂದು ಸರಕಾರ ಹೊರಡಿಸಿದ ಮಾರ್ಗಸೂಚಿಗಳು ಅನ್ವಯವಾಗಲಿದ್ದು, ಈ ಜಿಲ್ಲೆಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರ ವರಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಅನ್‌ಲಾಕ್ 02ರಲ್ಲಿ ಸಿನೇಮಾ ಮಂದಿರಗಳು ಹಾಗೂ ಮಾಲ್ ಪಬ್‌ಗಳನ್ನು ಸಂಪೂರ್ಣ ನಿರ್ಭಂಧಿಸಲಾಗಿದೆ.
    ಮುAದುವರಿದು ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಾದ್ಯಂತ ಈ ಮುಂಚೆ ಹೊರಡಿಸಲಾಗಿದ್ದ ರಾತ್ರಿ ಕರ್ಫ್ಯೂ ಹಾಗೂ ವಿಕೆಂಡ್ ಕರ್ಫ್ಯೂ ಮುಂದುವರೆಯಲಿದೆ, ವಾರದ ಪ್ರತಿ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೆ ಸಂಪೂರ್ಣ ವಾಣಿಜ್ಯ ವಹಿವಾಟು ನಿರ್ಭಂದಿಸಿದೆ ಎಂದರು.
    ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಈಗ ನೀಡಲಾಗಿದ್ದ ಪಾರ್ಸ್ಲ್ ಜೊತೆಗೆ ಅಲ್ಲಿಯೇ ಕುಳಿತು ಊಟ, ಉಪಹಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಆದರೆ ಹವಾನಿಯಂತ್ರಿತ ಸೌಲಭ್ಯ ನಿರ್ಭಂಧಿಸಿದೆ.
    ದೇವಾಲಯ, ಪ್ರಾರ್ಥನಾ ಮಂದಿರ, ಚರ್ಚ, ಶಿಕ್ಷಣ ಸಂಸ್ಥೆಗಳು, ಹವಾನಿಯಂತ್ರಿತ ಶಾಪಿಂಗ್ ಕಾಂಪ್ಲೇಕ್ಸ್, ಮಾಲ್‌ಗಳು, ಪಬ್‌ಗಳು ಚಿತ್ರಮಂದಿರಗಳು, ತರಬೇತಿ ಕೇಂದ್ರಗಳು ಸಂಪೂರ್ಣ ನಿರ್ಭಂಧ ವಿಧಿಸಲಾಗಿದೆ.
    ಸರಕಾರ ಹೊರಡಿಸಿದ ಅನ್‌ಲಾಕ್ 02ರಲ್ಲಿ ಸಂಜೆ 5ರ ವರೆಗೆ ಎಲ್ಲ ಅನುಮತಿಸಲಾದ ವಾಣಿಜ್ಯ ವಹಿವಾಟುಗಳು ಬಂದ್ ಮಾಡಿ ಸಂಜೆ 7ರ ಒಳಗಡೆ ತಮ್ಮ ಮನೆಗಳಿಗೆ ಸೇರಬೇಕು. ಅಲ್ಲದೇ ಸಂಜೆ 7 ರಿಂದ ಬೆಳಗಿನ ಜಾವ 6ಗಂಟೆಯವರೆಗೆ ನೈಟ್ ಕರ್ಫ್ಯೂ ಮುಂದುವರಿಯಲಿದೆ ಎಂದರು.
    ಲಾಡ್ಜ್ ಮತ್ತು ವಸತಿಗಳಲ್ಲಿ ಶೇ. 50ರ ಅನುಪಾತದಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೇ ಬಟ್ಟೆ, ಮೋಬೈಲ್ ಶಾಪ್‌ಗಳು, ಚಪ್ಪಲಿ ಅಂಗಡಿಗಳು, ಸರಾಫ್ ಬಜರಾರಗಳು, ಎಲೆಕ್ಟಿçಕ್, ಎಲೆಕ್ಟಾçನಿಕ್ ಶಾಪಗಳು, ಕಿರಾಣಾ ಅಂಗಡಿಗಳು, ಬೈಕ್, ಕಾರು ಶೋ ರೂಮಗಳು, ಮೊಟಾರು, ಬೈಕ್ ಕ್ಲಿನಿಕಗಳು ತೆರೆಯಲು ಅವಕಾಶ ನೀಡಲಾಗಿದೆ.
    ಜೂನ್ 7ರಂದು ಹೊರಡಿಸಿ ಸರಕಾರದ ಅನುಚೂಚಿಯಂತೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
    ಮೈಸೂರಿನಲ್ಲಿ ಮಾತ್ರ ಅನ್‌ಲಾಕ್ 02 ಅನ್ವಯವಾಗದೇ ಇಲ್ಲಿ ಶೇ. 10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಹಿನ್ನೆಲೆಯಲ್ಲಿ ಈ ಒಂದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮುಂದುವರೆಯಲಿದೆ. ಅನ್‌ಲಾಕ್ ಆಗದ 13 ಜಿಲ್ಲೆಗಳೆಂದರೆ ಚಾಮರಾಜನಗರ, ಚಿಕ್ಕಮಗಳೂರು, ದಾವಣಗೇರೆ, ಹಾಸನ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಧಾರವಾಡ, ಬಳ್ಳಾರಿ, ವಿಜಯಪುರ, ಚಿತ್ರದುರ್ಗ, ತುಮಕೂರ, ಕೋಲಾರ.
    ಅನ್‌ಲಾಕ್ 02ರ ಅನ್ವಯ ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ ಜಿಲ್ಲೆಗಳೆಂದರೆ ಬೆಂಗಳೂರು, ನಗರ, ರಾಯಚೂರು, ಬೆಳಗಾವಿ, ಬೀದರ, ಕಲಬುರಗಿ, ಉತ್ತರ ಕನ್ನಡ, ಚಿಕ್ಕ ಬಳ್ಳಾಪುರ, ಮಂಡ್ಯ, ಗದಗ, ಬೆಂಗಳೂರು ಗ್ರಾಮಾಂತರ. ಕೊಪ್ಪಳ, ರಾಮನಗರ, ಯಾದಗಿರಿ, ಹಾವೇರಿ ಹಾಗೂ ಬಾಗಲಕೋಟೆ ಸೇರಿದಂತೆ 16 ಜಿಲ್ಲೆಗಳಲ್ಲಿ ಶೇ. 90ರಷ್ಟು ವಾಣಿಜ್ಯ ವಹಿವಾಟುಗಳ ನಿರ್ಭಂಧ ತೆರೆವುಗೊಳಿಸಿದಂತಾಗಿದೆ.
    ಬಾರ್ ಮತ್ತು ವೈನ್ಸ್ ಶಾಪೀಗಳು ಸೋಮವಾರದಿಂದ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಸಂಪೂರ್ಣ ತೆರೆಯಲು ಅವಕಾಶ ನೀಡಿದ್ದು, ಬಾರ್‌ಗಳಲ್ಲಿ ಕುಳಿತ ಮದ್ಯ ಸೇವೆನೆಗೆ ಸರಕಾರ ಅವಕಾಶ ನೀಡಿಲ್ಲ, ಆದರೆ ಕುಳಿತು ಊಟ ಮಾಡಲು ಶೇ, 50ರಷ್ಟು ಜನರಿಗೆ ಅವಕಾಶ ನೀಡಲಾಗಿದೆ.
    ಶೇ. 50ರ ಅನುಪಾತದಲ್ಲಿ ಸರಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿಗೆ ಅವಕಾಶ ನೀಡಲಾದೆ. ಮೇಟ್ರೋ, ರೈಲು, ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಪುನರಾಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
    ಶಾಲಾ-ಕಾಲೇಜುಗಳು ತೆರೆಯಲು ಅವಕಾಶ ನೀಡಲಾಗಿಲ್ಲ, ಆದರೆ ಆನ್‌ಲೈನ್ ಶಿಕ್ಷಣಕ್ಕೆ ಅನುಮತಿ ಮುಂದುವರಿದಿದೆ.
    ರಾಜಕೀಯ ಸಭೆ, ಸಮಾರಂಭಗಳನ್ನು ನಿರ್ಭಂದಿಸಿದ್ದು, ಆದರೆ ಲಾಕ್‌ಡೌನ್ ಸಮದಯಲ್ಲಿಯೂ ಹಲವಾರು ರಾಜಕೀಯ ಸಭೆ, ಸಮಾರಂಭಗಳು ನಡೆದಿದ್ದು ನೋಡಿದರೆ ಅನ್‌ಲಾಕ್ 02ರ ಸರಕಾರದ ಆದೇಶ ರಾಜಕೀಯ ಪಕ್ಷಗಳು ಅದರಲ್ಲೂ ಆಡಳಿತರೂಢ ಪಕ್ಷ ಪಾಲನೆ ಮಾಡಲಿದೆ ಎಂಬುದು ಪ್ರಶನ್ನಯಾಗಿದೆ.

    LEAVE A REPLY

    Please enter your comment!
    Please enter your name here