29 ರಿಂದ ಹೊಟೇಲ್‌ಗಳಲ್ಲಿ ಪಾರ್ಸಲ್ ಸೇವೆ ಪುನರಾರಂಭ

0
790

ಕಲಬುರಗಿ, ಮೇ. 28: ಜಿಲ್ಲೆಯಲ್ಲಿ ಮಾರಕ ಸಾಂಕ್ರಾಮಿಕ ಸೋಂಕು ಕೋವಿಡ್‌ಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಹೋಟೆಲ್‌ಗಳಲ್ಲಿ ಪಾರ್ಸಲ್ ಕೂಡ ನಿಷೇಧಿಸಿತ್ತು. ಆದರೆ ಜನರಿಗೆ ಆಗುವ ತೊಂದರೆಯನ್ನು ತಪ್ಪಿಸಲು ನಾಳೆಯಿಂದ ದಿನಾಂಕ 29.5.2021ರಿಂದ ಬೆಳಿಗ್ಗೆ 6 ಗಂಟೆಯಿAದ ರಾತ್ರಿ 8 ಗಂಟೆಯವರೆಗೆ ಹೋಟಲ್‌ಗಳಲ್ಲಿ ಪಾರ್ಸಲ್ ಮತ್ತು ಆನ್‌ಲೈನ್ ಮುಖಾಂತರವು ಪಾರ್ಸಲ್ ಗೆ ಅವಕಾಶ ನೀಡಲಾಗಿದೆ ಎಂದು ಪೋಲಿಸ್ ಆಯುಕ್ತರಾದ ಡಾ. ವೈ. ಎಸ್. ರವಿಕುಮಾರ ಅವರು ತಿಳಿಸಿದ್ದಾರೆ.
ಈ ಮುಂಚೆ ಅಂದರೆ ಮೇ 27ರ ಬೆಳಿಗ್ಗೆ 6 ರಿಂದ ಮೇ 31ರ ವರೆಗೆ ಹೋಟೆಲ್‌ಗಳಲ್ಲಿ ಸಂಪೂರ್ಣ ಪಾರ್ಸಲ್‌ಗೂ ಅವಕಾಶ ಕಲ್ಪಿಸಿರಲಿಲ್ಲ, ಜನರಿಗೆ ಆಗುವ ತೊಂದರೆಯನ್ನು ಗಮನದಲಿಟ್ಟುಕೊಂಡು ಮತ್ತೇ ಹೋಟೆಲ್‌ಗಳಲ್ಲಿ ಪಾರ್ಸಲ್ ಅವಕಾಶ ಕಲ್ಪಿಸಲಾಗಿದೆ.
ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ನಗರದ ಕೆಲವು ಹೊಟೇಲ್‌ಗಳಲ್ಲಿ ಗ್ರಾಹಕರಿಗೆ ಒಳಗಡೆ ಸೇವೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.

LEAVE A REPLY

Please enter your comment!
Please enter your name here