ಕಲಬುರಗಿಯಲ್ಲಿ ಕೊರೊನಾ ಸೋಂಕು ಇಳಕೆ;ಇಂದು 175 ಪ್ರಕರಣಗಳು

0
769

ಕಲಬುರಗಿ, ಮೇ. 26: ಬುಧುವಾರ ಆರೋಗ್ಯ ಇಲಾಖೆ ಹೊರಡಿಸಿದ ಸಂಜೆ ಆರೋಗ್ಯ ಬುಲೇಟಿನ್‌ನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 175 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 9 ಜನರು ಸಾವಿಗೀಡಾಗಿದ್ದಾರೆ.
ಇಂದು ಆಸ್ಪತ್ರೆಯಿಂದ 1231 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, ಇಲ್ಲಿಯವರೆಗೆ 749 ಜನರು ಕೊರೊನಾಗೆ ಬಲಿಯಾಗಿದಂತಾಗಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ದಿನಂಪ್ರತಿ ಕೊರೊನಾ ಹೊಸ ಪ್ರಕರಣಗಳು ಕಡಿಮೆ ದಾಖಲಾಗುತ್ತಿದ್ದು ಜಿಲ್ಲಾಡಳಿತ ಕಳೆದ ವಾರದಿಂದ ವಾರದಲ್ಲಿ ಮೂರು ದಿನ ಗಳ ಕಠಿಣ ಫುಲ್‌ಲಾಕ್‌ಡೌನ್ ಮಾಡಿದ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಇನ್ನು ಜೂನ್ 15ರ ವರೆಗೆ ಜಿಲ್ಲೆಯಲ್ಲಿ ಸೋಂಕು ಶೇ. 70ರಷ್ಟು ಕಡಿಮೆಯಾಗುವ ನಿರೀಕ್ಷೆ ಹೊಂದಲಾಗಿದೆ.
ನಗರ ಪ್ರದೇಶದಲ್ಲಿ ಕೊರೊನಾ ಸಾವುಗಳ ಸಂಖ್ಯೆ ಕಡಿಮೆಯಿದ್ದು, ಗ್ರಾಮಾಂತರದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಹೆಚ್ಚಾಗತೊಡಗಿದೆ.

LEAVE A REPLY

Please enter your comment!
Please enter your name here