ಕಲಬುರಗಿ, ಮೇ. 25: ಪ್ರಾಯೋಗಿಕವಾಗಿ ಕಳೆದ ವಾರ ಜಿಲ್ಲೆಯಲ್ಲಿ ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಣೆಯಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ವಾರವು ಕೂಡಾ ಮೂರು ದಿನಗಳ ಆದೇಶವನ್ನು ಪರಿಷ್ಕರಿಸಿ ಮುಂದಿನ ನಾಲ್ಕು ದಿನಗಳ ಕಠಿಣ ಲಾಕ್‌ಡೌನ್‌ಗೆ ಆದೇಶ ನೀಡಿದೆ.
ಮೇ 27ರ ಬೆಳಿಗ್ಗೆ 6 ಗಂಟೆಯಿAದ ಮೇ 31ರ ಬೆಳಿಗ್ಗೆ 6ರ ವರೆಗೆ ಅಂದರೆ ಗುರುವಾರ, ಶುಕ್ರವಾರ, ಶನಿವಾರ ಮತ್ತು ರವಿವಾರ ಈ ನಾಲ್ಕು ದಿನಗಳ ಕಾಲ ಕಠಿಣ ಲಾಕ್‌ಡೌನ್ ಆಗಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣ ಲಾಕ್‌ಮಾಡಲು ಜಿಲ್ಲಾಧಿಕಾರಿ ವಿವಿ ಜೋತ್ಸಾö್ನ ಅವರು ಆದೇಶ ಹೊರಡಿಸಿದ್ದಾರೆ.
ಯಾವುದೇ ದ್ವಿಚಕ್ರವಾಹನಗಳಾಗಲೀ, ಕಾರು, ಆಟೋಗಳ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಿ ಆದೇಶ ಜಾರಿಮಾಡಲಾಗಿದೆ. ಸುಖಾಸುಮ್ಮನೆ ರಸ್ತಗಿಳಿದ ವಾಹನಗಳನ್ನು ಪೋಲಿಸರು ಸೀಜ್ ಮಾಡಲು ಸಹ ಆದೇಶಿಸಲಾಗಿದೆ.
ಹಾಲು ಮಾರಾಟ ಸಂಜೆವರೆಗೆ ಅವಕಾಶ ನೀಡಲಾಗಿದ್ದು, ತರಕಾರಿ ಮಾರಾಟ ಓಣಿ ಓಣಿಯಲ್ಲಿ ತಳ್ಳು ಬಂಡಿಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ಕಳೆದ ವಾರದ ಮಾರ್ಗಸೂಚಿಗಳು ಅನ್ವಯವಾಗುತ್ತವೆ.
ಬಾರ್, ವೈನ್ಸ್ ಶಾಪಗಳು ಕಂಪ್ಲೀಟ್ ನಾಲ್ಕು ದಿನ ಬಂದ್ ಆಗಲಿವೆ. ದಿನಾಂಕ 26ರ ಬೆಳಿಗ್ಗೆ 6 ಗಂಟೆಯಿoದ ಅಂದೇ ಬಳಿಗ್ಗೆ 10 ಗಂಟೆಯವರೆಗೆ ಮಾತ್ರ ಮದ್ಯದಂಗಡಿಗಳು ಪಾರ್ಸಲ್‌ಗಾಗಿ ಮಾತ್ರ ತೆರೆದಿರುತ್ತವೆ. ಉಳಿದ ವಾರದ ನಾಲ್ಕು ದಿನ ಸಂಪೂರ್ಣ ಮುಂದಿನ ಆದೇಶದವರೆಗೆ ಸಂಪೂರ್ಣ ಬಂದ್ ಆಗಲಿದೆ.