ಹವ್ಯಾಸಿ ಹಿರಿಯ ರಂಗ ಕಲಾವಿದೆ ಶೋಭಾ ರಂಜೋಳಕರ್ ಇನ್ನಿಲ್ಲ

0
821

ಕಲಬುರಗಿ, ಮೇ. 16: ರಂಗಮಾಧ್ಯಮದ ಹವ್ಯಾನಿ ಹಿರಿಯ ಕಲಾವಿದೆ ಶ್ರೀಮತಿ ಶೋಭಾ ರಂಜೋಳಕರ ಅವರು ಇಂದು ನಿಧನಹೊಂದಿದ್ದಾರೆ.
ಕಳೆದ ಕೆಲ ದಿನಗಳಿಂದ ಕೊರೊನಾದಿಂದ ಬಳಲುತ್ತಿದ್ದ ಅವರು ರವಿವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ದಿವಂಗತರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು ಅವರು ಸುಮಾರು 4 ದಶಕಗಳಿಂದ ರಂಗಕರ್ಮಿಯಾಗಿ ಸಿನೇಮಾ, ನಾಟಕ, ಧಾರವಾಹಿಗಳಲ್ಲಿ ಅಭಿನಯಿಸುವುದರೊಂದಿಗೆ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿಯೂ ಸಹ ಕೆಲಸ ಮಾಡಿದ ಇವರು ಹಲವಾರು ನಾಟಕಗಳನ್ನು ಸಹ ಅವರು ನಿದೇರ್ಶನ ಮಾಡಿದ್ದರು.
ಶ್ರೀ ಸಂಗಮೇಶ್ವರ ಮಹಿಳಾ ಮಂಡಳದ ಮೂಲಕ ಮಹಿಳೆಯರಲ್ಲಿ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದರು.
ಚಂದ್ರಶೇಖರ ಕಂಬಾರ ಅವರೊಂದಿಗೆ ಒಂದು ಚಲನಚಿತ್ರದಲ್ಲಿಯೂ ಸಹ ಅಭಿನಿಯಿಸಿದ ರಂಜೋಳಕರ್ ಅವರು ಹಲವಾರು ಕಿರುತೆರೆಯ ಧಾರವಾಹಿಗಳಲ್ಲಿ ಅಭಿನಯಿಸಿದ್ದರು.
ಎಲ್ಲರಿಗೂ ತಾಯಿಯ ಸ್ಥಾನದಲ್ಲಿದ್ದು ಅವ್ವ ಎಂದೇ ಕರೆಯಿಸಿಕೊಳ್ಳುತ್ತಿದ್ದ ಶ್ರೀಮತಿ ಶೋಭಾ ರಂಜೋಳಕರ ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ನೀಡಲಿ, ಅವರ ಕುಟುಂಬ ಹಾಗೂ ಒಂದೇ ಕುಟುಂಬದAತಿರುವ ರಂಗಮಾಧ್ಯಮದ ಎಲ್ಲ ಬಾಂಧವರಿಗೂ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಕಸಾಪದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅವರು ಭಗವಂತನಲ್ಲಿ ಮನಃ ಪೂರ್ವಕವಾಗಿ ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here