

ಬೀದರ, ಮೇ. 11: ರಾಜ್ಯ ಸರಕಾರದ ಆದೇಶದಂತೆ ಪತ್ರಕರ್ತರನ್ನು ಕರೊನಾ ಪ್ರಂಟ್‌ಲೈನ ವಾರಿರ‍್ಸ್ ಎಂದು ಗುರುತಿಸಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪತ್ರಕರ್ತರಿಗೆ ಕೊರೊನಾ ರೋಗನಿರೋಧಕ ಲಸಿಕೆ ಹಾಕಲು ಆದೇಶಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಬೀದರನ ಬೀಮ್ಸ್ ಆಸ್ಪತ್ರೆಯಲ್ಲಿ ನೂರಾರು ಪತ್ರಕರ್ತರಿಗೆ ಲಸಿಕೆ ಹಾಕಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸ್ವತಃ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಬೀದರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕಕುಮಾರ ಕರಂಜಿ ಅವರ ನೇತೃತ್ವದಲ್ಲಿ ನಡೆದ ಲಸಿಕಾ ಕಾರ್ಯಕ್ರಮದಲ್ಲಿ ಪಬ್ಬಿಕ್ ಟಿವಿಯ ಮಹಾಂತೇಶ, ಟಿವಿ9ನ ವರದಿಗಾರ ಸುರೇಶ ನಾಯಕ, ಸಂಯುಕ್ತ ಕರ್ನಾಟಕದ ಕುಲಕರ್ಣಿ, ಇಂಡಿಯನ್ ಏಕ್ಸಪ್ರೇಸ್‌ನ ನಂದಕಿಶೋರ, ಬೀದರ ಕೀ ಜಂಗ್ ಪತ್ರಿಕೆಯ ಸುಧೀರ ಕುಲಕರ್ಣಿ, ಡಿಕ್ಕನ್ ಹೇರಾಲ್ಡನ ಮಾರುತಿ ಬಾನದೊಡ್ಡಿ, ಉದಯವಾಣಿಯ ಶಶಿಕಾಂತ ಅವರು ಸೇರಿದಂತೆ ಸುಮಾರು ನೂರಕ್ಕೆ ಹೆಚ್ಚು ಪತ್ರಕರ್ತರು ಲಸಿಕೆ ಪಡೆದರು.
ಲಸಿಕಾ ನೀಡಿಕೆ ಕಾರ್ಯಕ್ರಮದಲ್ಲಿ ಬೀದರ ಜಿಲ್ಲಾಧಿಕಾರಿ ಆರ್. ರಾಮಚಂದ್ರರಾವ್, ಬಿಡಿಎ ಅಧ್ಯಕ್ಷ ಬಾಬು ವಾಲಿ, ರಾಜ್ಯ ಕೆಎಸ್‌ಐಡಿಸಿನ ಶೈಲೆಂದ್ರ ಬೆಲದಾಳೆ, ಜಿಲ್ಲಾಪಂಚಾಯತ್ ಮುಖ್ಯಕಾರ್ಯದರ್ಶಿಗಳು ಸೇರಿದಂತೆ ಇನ್ನು ಆರೋಗ್ಯ ಇಲಾಖೆಯ ಹಲವಾರು ಅಧಿಕಾರಿಗಳು ಉಪಸ್ಥತಿರಿದ್ದರು.

