ರಾಜ್ಯದಲ್ಲಿ ಬುಧುವಾರ 50 ಸಾವಿರ ದಾಟಿದ ಸೋಂಕಿತರ ಸಂಖ್ಯೆ: 346 ಜನ ಒಂದೇ ಕೋವಿಡ್‌ಗೆ ಬಲಿ

0
747

ಬೆಂಗಳೂರು, ಮೇ. 05: ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರು ನಗರ ಕೊರೊನಾ ಹಾಟ್‌ಸ್ಪಾಟ್ ಆಗಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 50 ಸಾವಿರಕ್ಕೂ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಅದರಲ್ಲೂ ಬೆಂಗಳೂರು ನಗರವೊಂದರಲ್ಲೇ 23603 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, 161 ಜನರು ಕರೊನಾಗೆ ಬಲಿಯಾಗಿದ್ದು ಬೆಂಗಳೂರು ನಗರವೊಂದರಲ್ಲೇ.
ಇದು ಹೀಗೆ ಮುಂದುವರೆದರೆ ಇನ್ನು ಒಂದು ವಾರದಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನಂಪತ್ರಿ 1 ಲಕ್ಷಕ್ಕೂ ತಲುಪಿದರೆ ಆಶ್ಚರ್ಯವೆನಿಲ್ಲ.
ದಿನಾಲು ಹೊಸ ಕೊರೊನಾ ಪ್ರಕರಣಗಳ ಪ್ರಮಾಣದ 5% ಪ್ರತಿಶತದಷ್ಟು ಜನರು ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂ ಬಿಡುಗಡೆಯಾಗುತ್ತಿದ್ದು, ನೋಡಿದರೆ ಗುಣಮುಖರಾಗುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ
ಎರಡನೇ ಸ್ಥಾನಕ್ಕೆ ಮೈಸುರು ಜಿಲ್ಲೆಯೆರಿದ್ದು, ಇಲ್ಲಿ ಇಂದು ಕೊರೊನಾದಿಂದ 2790 ಜನರು ಆಸ್ಪತ್ರೆಗೆ ದಾಖಲಾದರೆ ಕೊರೊನಾಗೆ 10 ಜನ ಬಲಿಯಾಗಿದ್ದಾರೆ.
ಇನ್ನು ರಾಜ್ಯದಾದ್ಯಂತ ಜಿಲ್ಲಾವಾರು ವಿವರ ಇಂತಿದೆ: ಬಾಗಲಕೋಟೆಯಲ್ಲಿ 719, 3 ಜನರ ಸಾವು, ಬಳ್ಳಾರಿಯಲ್ಲಿ 927, 19 ಜನರ ಮರಣ, ಬೆಳಗಾವಿಯಲ್ಲಿ 920, ಮೃತರ ಸಂಖ್ಯೆ 2, ಬೆಂಗಳೂರು ಗ್ರಾಮಾಂತರ 1033, 5 ಜನ ಬಲಿ, ಬೀದರ ಜಿಲ್ಲೆಯಲ್ಲಿ 482, 8 ಜನ ಸಾವು, ಚಾಮರಾಜನಗರದಲ್ಲಿ 542, 5 ಜನ ಬಲಿ, ಚಿಕ್ಕಬಳ್ಳಾಪೂರದಲ್ಲಿ 830, 5 ಜನ ಬಲಿ, ಚಿಕ್ಕಮಗಳೂರು 1009, ಇಬ್ಬರು ಬಲಿ, ಚಿತ್ರದುರ್ಗದಲ್ಲಿ 152 ಇಲ್ಲಿ ಒಂದು ಸಾವು, ದಕ್ಷಿಣ ಕನ್ನಡದಲ್ಲಿ 1529, 4 ಮಂದಿ ಬಲಿ, ದಾವಣಗೆರೆ 548, 2 ಸಾವು, ಧಾರವಾಡದಲ್ಲಿ 1030, 8 ಸಾವು, ಗದಗದಲ್ಲಿ 189, 3 ಜನರ ಬಲಿ, ಹಾಸನದಲ್ಲಿ 1604, 11 ಜನರ ಸಾವು, ಹಾವೇರಿಯಲ್ಲಿ 224, 4 ಜನರ ಬಲಿ, ಕಲಬುರಗಿ ಜಿಲ್ಲೆಯಲ್ಲಿ 1097, 15 ಜನರ ಸಾವು, ಕೊಡಗು 768, ಇಲ್ಲಿ ಯಾವುದೇ ಸಾವು ಸಂಭವಿಸಿಲ್ಲ, ಕೋಲಾರದಲ್ಲಿ 1115, 5 ಸಾವು, ಕೊಪ್ಪಳದಲ್ಲಿ 182, ಇಲ್ಲಿ ಸಾವು ಸೊನ್ನೆ, ಮಂಡ್ಯದಲ್ಲಿ 1621, 19 ಸಾವು, ರಾಯಚೂರಿನಲ್ಲಿ 427, 3 ಬಲಿ, ರಾಮನಗರದಲ್ಲಿ 475, 2 ಜನರ ಸಾವು, ಶಿವಮೊಗ್ಗದಲ್ಲಿ 702, 15 ಜನರ ಸಾವು, ತುಮಕೂರು 2335, 12 ಜನರ ಬಲಿ, ಉಡುಪಿಯಲ್ಲಿ 1655, 3 ಜನರ ಸಾವು, ಉತ್ತರ ಕನ್ನಡ ಜಿಲ್ಲೆಯಲ್ಲಿ 849, 15 ಜನರ ಬಲಿ, ವಿಜಯಪುರದಲ್ಲಿ 513, 4 ಜನರ ಸಾವು, ಯಾದಗಿರಿ ಜಿಲ್ಲೆಯಲ್ಲಿ 739, ಇಲ್ಲಿ ಇಂದು ಯಾವುದೇ ಸಾವು ಸಂಭವಿಸಿಲ್ಲ.
ರಾಜ್ಯದಲ್ಲಿ ಬುಧುವಾರ ಒಂದೇ ದಿನ 50112 ಜನರಿಗೆ ಸೋಕು ತಗುಲಿದರೆ, ಇಂದು 26841 ಜನರು ಬಿಡುಗಡೆಯಾಗಿದ್ದು, ಒಟ್ಟು 1741046 ಒಟ್ಟು ಪ್ರಕರಣಗಳಾಗಿದ್ದು, ಇಂದು ಬಿಡುಗಡೆ ಸೇರಿ ಇಲ್ಲಿಯವರೆಗೆ ಒಟ್ಟು ಆಸ್ಪತ್ರೆಯಿದ 1236854 ಜನರು ಬಿಡುಗಡೆಯಾಗಿದ್ದಾರೆ. ಒಟ್ಟು ಸಕ್ರೀಯ 48728 ಪ್ರಕರಣಗಳಿವೆ. ಇಂದು 346 ಜನರ ಮರಣ ಸೇರಿದಂತೆ ಈವರೆಗೆ 16884 ಜನರು ಬಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here