ರಾಜ್ಯದಲ್ಲಿ ಇನ್ನು ಮತ್ತೆ 10 ದಿನ ಲಾಕ್‌ಡೌನ್?

    0
    1239

    ಬೆoಗಳೂರು, ಮೇ. 04: ರಾಜ್ಯದಲ್ಲಿ ದಿನ ನಿತ್ಯ ಕೋವಿಡ್‌ನಿಂದಾಗಿ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದಕ್ಕೆಲ್ಲ ಕಾರಣ ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆ ಸಮರ್ಪಕವಾಗಿಲ್ಲ, ಈ ಹಿನ್ನೆಲೆಯಲ್ಲಿ ಸೋಂಕಿತರು, ವೆಂಟಿಲೇಟರ್, ಆಕ್ಸಿಜನ ಇಲ್ಲದೇ ಪ್ರಾಣ ಚೆಲ್ಲುತ್ತಿದ್ದಾರೆ.
    ಕಳೆದ ತಿಂಗಳು ಏಪ್ರಿಲ್ 27 ರಿಂದ 14 ದಿನಗಳ ಕಾಲ ರಾಜ್ಯ ಸರಕಾರ ಕಠಿಣ ನಿಯಮಗಳ ಹೆಸರಿನಲ್ಲಿ ಲಾಕ್‌ಡೌನ್ ಜಾರಿ ಮಾಡಿತ್ತು, ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಲಾಕ್‌ಡೌನ್ ತೆರವು ಮಾಡಿದರೆ ಮತ್ತೆ ಜನಜಂಗುಳಿಯಾಗಿ ಸೋಂಕು ಹೆಚ್ಚು ಹರಡುವ ಭೀತಿಯಿಂದ ರಾಜ್ಯ ಸರಕಾರ ರಾಜ್ಯದಲ್ಲಿ ಇನ್ನು 10 ದಿನಗಳ ಕಾಲ ಲಾಕ್‌ಡೌನ್ ಹೆಚ್ಚಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
    ನಿನ್ನೆಯಷ್ಟೆ ಚಾಮರಾಜನಗರದಲ್ಲಿ 24 ಮತ್ತು ಕಲಬುರಗಿ ಜಿಲ್ಲೆಯ ಅಫಜಲಪೂರ ಸಾರ್ವಜನಿಕ ಆಸ್ಪತ್ರೆಯಲ್ಲಿ 4 ಜನ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಕ್ಸಿಜನ ಕೊರತೆ ಎಷ್ಟು ತಲೆದೂಗಿದೆ ಎಂಬುವುದು ಅರ್ಥವಾಗುತ್ತದೆ.
    ಹೆಸರಿಗೆ ಹತ್ತು ದಿನಗಳಾದರೂ ಬರುವ ಕನಿಷ್ಟ ಜೂನ್ ಆರಂಭದವರೆಗೂ ಲಾಕ್‌ಡೌನ್ ಸಂಪೂರ್ಣವಾಗಿ ವಿಸ್ತರಿಸಿ, ಕಟ್ಟು ನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಸ್ವಲ್ಪ ಮಟ್ಟಿಗಾದರೂ ಕೊರೊನಾ ಮಹಾಮಾರಿ ಕಟ್ಟಿ ಹಾಕಿದಂತಾಗುತ್ತದೆ. ಆದರೆ ಲಾಕ್‌ಡೌನ್‌ನಿಂದ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನೀಡಿರುವ ಅಗತ್ಯ ವಸ್ತುಗಳ ಖರೀದಿಯ ವಿನಾಯಿ ಸಮಯದಲ್ಲಿ ಯಾವುದೇ ಕೋವಿಡ್‌ಗೆ ಕ್ಯಾರೆ ಅನ್ನದೇ ಜನರು ತರಕಾರಿ, ಹಣ್ಣು, ಹಂಪಲು, ದಿನಸಿ ಪದಾರ್ಥಗಳ ಖರೀದಿಯಲ್ಲಿ ತೊಡಗಿದ್ದು ನೋಡಿದರೆ ಇನ್ನು ಎರಡು ತಿಂಗಳು ಲಾಕ್‌ಡೌನ್ ಮಾಡಿದರೂ ಪರಿಸ್ಥಿತಿ ಸುಧಾರಣೆಗೆ ಬರುವ ಸಾಧ್ಯತೆಗಳು ಕಡಿಮೆ ಎನಿಸುತ್ತಿದೆ.
    ಸಂಪೂರ್ಣ ರಾಜ್ಯದಲ್ಲಿ ಲಾಕ್‌ಡೌನ್ ಮಾಡಿ ದಿನಸಿ ಅಗತ್ಯ ವಸ್ತುಗಳ ಖರೀದಿಗೆ ವಾರದಲ್ಲಿ ಎರಡು ದಿನಗಳ ಮಾತ್ರ 4 ರಿಂದ 6 ಗಂಟೆ ಸಮಯ ನಿಗದಿಪಡಿಸಬೇಕು ಅಲ್ಲದೇ ಕಡ್ಡಾಯವಾಗಿ ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರದೊAದಿಗೆ ಮಾರುಕಟ್ಟೆಯಲ್ಲಿ ವ್ಯವಹರಿಸಲು ಹೆಚ್ಚಿನ ಪೋಲಿಸರನ್ನು ನಿಯೋಜಿಸಿ, ಕಾರ್ಯಪ್ರವರ್ತರಾದಾಗ ಮಾತ್ರ ಏನಾದರೂ ಸ್ವಲ್ಪ ಮಟ್ಟಿಗೆ ಕೊರೊನಾಗೆ ಸಡ್ಡುಹೊಡೆಯಬಹುದು.
    ಲಾಕ್‌ಡೌನ್ ಮೇ 12ಕ್ಕೆ ಕೊನೆಗೊಳ್ಳಲಿದ್ದು, ಮತ್ತೇ 10 ವಿಸ್ತರಣೆಯಾದರೆÀ ಮೇ 22ರ ವರೆಗೆ ಮುಂದುವರೆಯಲಿದೆ.

    LEAVE A REPLY

    Please enter your comment!
    Please enter your name here