ಕಲಬುರಗಿ ಜಿಲ್ಲೆಯಲ್ಲಿ ಆಕ್ಸಿಜನ್ ಹಾಹಾಕಾರ್ ಇದ್ದು ಇಲ್ಲದಂತಾಗಿರುವ ಜಿಲ್ಲಾಡಳಿತ

0
814

ಕಲಬುರಗಿ, ಮೇ. ೩: ಕಲಬುರಗಿ ಜಿಲ್ಲೆಯಲ್ಲಿ ಆಕ್ಸಿಜನ್ ಹಾಹಾಕಾರ್ ಉಂಟಾಗಿದ್ದು, ರೋಗಿಗಳ ಸಂಬAಧಿಕರು ಸೇರಿದಂತೆ ವೈದ್ಯರು ಆಕ್ಸಿಜನ್ ಉತ್ಪಾದನಾ ಘಟಕದೆದರು ಕಾಯುತ್ತ ಕುಳಿತ್ತಿದ್ದಾರೆ. ಈಗಾಗಲೇ ಚಾಮರಾಜನಗರದ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಇಂದು ೨೪ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲೂ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದ್ದುಕಾಣುತ್ತಿದ್ದು, ಕೇಳಿದರೆ ೩೦ ರೋಗಿಗಳಿದ್ದಾರೆ ಅವರಿಗೆ ಇನ್ನು ಎರಡು ಘಂಟ ಅಷ್ಟ ಆಕ್ಸಿಜನ್ ಪೂರೈಕೆ ಆಗುವುದು ಸರಕಾರವಾಗಲೀ, ಜಿಲ್ಲಾಡಳಿವಾಗಲೀ ಆಕ್ಸಿಜನ್ ಪೂರೈಸುತ್ತಿಲ್ಲ, ಕೇಳಿದರೆ ನಿನ್ನೆ ಕೊಟ್ಟಿಲ್ಲ, ಇಂದು ಕೊಟ್ಟಿಲ್ವ ಎಂಬ ಹಾರಿಕೆ ಉತ್ತರ ಸಿಗುತ್ತಿದೆ ಎಂದು ವೈದ್ಯರೊಬ್ಬರು ಹೇಳಿದ್ದಾರೆ.
ಜಿಲ್ಲಾಡಳಿತ ಈಗಾಗಲೇ ಬೆಳಿಗ್ಗೆ ಆಕ್ಸಿಜನ್ ಪೂರೈಕೆ ಹಿನ್ನಲೆಯಲ್ಲಿ ವೈದ್ಯರೊಂದಿಗೆ ಸಭೆ ನಡೆಸಿದ್ದು, ಖಾಸಗಿಯಾಗಿ ಯಾರಿಗೂ ಆಕ್ಸಿಜನ್ ಉತ್ಪಾದನಾ ಘಟಕಗಳು ಆಕ್ಸಿಜನ್ ತುಂಬಿಕೊಡಬಾರದು, ಏನಿದ್ದರೂ ಜಿಲ್ಲಾಡಳಿತವೇ ಇದನ್ನು ಪೂರೈಸುತ್ತದೆ ಎಂಬ ಸೂಚನೆಯ ಹಿನ್ನೆಲೆಯಲ್ಲಿ ಆಕ್ಸಿಜನ್ ಹಾಹಾಕಾರ ಹೆಚ್ಚುತ್ತಿದೆ.
ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಪರ್ಕಕಕ್ಕೆ ಸಿಗುತ್ತಿಲ್ಲ, ಸಹಾಯಕ ಔಷಧ ನಿಯಂತ್ರಕರು, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕೇಳಿದರೆ ನಾವು ಝೂಮ್ ಮೀಟಿಂಗ್‌ನಲ್ಲಿದ್ದೇವೆ ಏನಿದ್ದರೂ ನಂತರ ಮಾತಾಡೋಣ ಎಂಬ ಉತ್ತರದೊಂದಿಗೆ ದೂರವಾಣಿ ಕಟ್.
ಸರಕಾರ ಜಿಲ್ಲೆಯಲ್ಲಿ ಇದಯೇ ಎಲ್ಲವೋ ಎಂಬ ಅನುಮಾನ ಮೂಡಿದ್ದು, ನಿನ್ನೆಯಷ್ಟೆ ಕಲಬುರಗಿ ಜಿಲ್ಲಾ ಉಸ್ತುವಾರ ಸಚಿವರಾಗಿ ನೇಮಕಗೊಂಡ ಮರುಗೇಶ ನಿರಾಣಿಯವರು ಆದರೂ ಏನಾದರೂ ಕ್ರಮ ಕೈಗೊಂಡು ಇಲ್ಲಿನ ಪರಿಸ್ಥಿತಿ ಸುಧಾರಿಸಲು ಮುಂದಾಗಬೇಕಿದೆ.
ಜಿಲ್ಲೆಯಲ್ಲಿ ೫೭ ಹೆಲ್ಪ್ ಡೆಸ್ಕ್ಗಳನ್ನು ಜಿಲ್ಲಾಡಳಿತ ನಿರ್ಮಿಸಿದ್ದು, ಸುಮಾರು ಅರ್ಧಕ್ಕಿಂತ ಹೆಲ್ಪ್ ಡೆಸ್ಕಗಳಲ್ಲಿ ಯಾರೂ ಇಲ್ಲದೇ ಶೆಡ್‌ಗಳು ಖಾಲಿ ಖಾಲಿಯಾಗಿದ್ದು, ಇದು ಯಾರಿಗೂ ಯಾವ ಮಾಹಿತಿ ನೀಡುತ್ತೆ, ಎಲ್ಲವು ಆರಂಭ ಮಾತ್ರ ಮುಂದುವರೆಯುವುದು ಕಷ್ಟಸಾಧ್ಯ.
ಕಲಬುರಗಿ ಜಿಲ್ಲಾಧಿಕಾರಿಗಳಾದ ವಿವಿ ಜೋತ್ಸಾö್ನ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಬೇಕೆಂದು ಹಲವು ಮುಖಂಡರು ಆಗ್ರಹಿಸಿದ್ದು, ಅದರಲ್ಲೂ ಜೆಡಿಎಸ್ ಮುಖಂಡ ನಾಸೀರ ಹುಸೇನ್ ಉಸ್ತಾದ ಅವರು ಆಗ್ರಹಿಸಿದ್ದು, ಇಷ್ಟೋಂದು ಆಕ್ಸಿಜನ್ ಹಾಹಾಕರ್ ಉಂಟಾಗಿದ್ದು, ಕಲಬುರಗಿ ಜಿಲ್ಲೆ ಮತ್ತೊಂದು ಚಾಮರಾಜನಗರ ಆಗಬಾರದು ಈ ನಿಟ್ಟಿನಲ್ಲಿ ಸರಕಾರ ದಿಟ್ಟ ಕ್ರಮಕೈಗೊಂಡು ದಿಟ್ಟ ಅಧಿಕಾರಿಯೊಬ್ಬರನ್ನು ಇಲ್ಲಿ ನೇಮಿಸಲು ಅವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here