ಶನಿವಾರ ಸನ್ನತಿಯಲ್ಲಿ ದೇವಿ ಪಂಚಮಿ ನಿಮಿತ್ಯ ಸಾಂಕೇತಿಕವಾಗಿ ರಥಕ್ಕೆ ಪೂಜೆ, ನೈವಿದ್ಯ

0
761

ಕಲಬುರಗಿ, ಮೇ. 1: ಆರಾಧ್ಯ ದೇವತೆ ಸನ್ನತಿಯ ಶ್ರೀ ಚಂದ್ರಲಾ ಪರಮೇಶ್ವರಿ ದೇವಿಯ ರಥೋತ್ಸವ ಇಂದು ದೇವಿ ಪಂಚಮಿ ನಿಮತ್ಯ ಸಾಂಕೇತಿಕವಾಗಿ ಪೂಜೆ ಸಲ್ಲಿಸುವುದರೊಂದಿಗೆ ಬೆಳಿಗ್ಗೆ 9.30 ಗಂಟೆಗೆ ನೆರವೇರಿತು.
ಚಿತ್ತಾಪೂರ ತಾಲೂಕಿನ ಶ್ರೀ ಕ್ಷೇತ್ರ ಸನ್ನತಿಯಲ್ಲಿ ಶನಿವಾರ ಶ್ರೀ ದೇವಿಗೆ ಪೂಜೆ ಸಲ್ಲಿಸಿ ನೈವಿದ್ಯ ಮತ್ತು ಅಭಿಷೇಕವನ್ನು ಬೆಳಿಗ್ಗೆೆ ಕೋವಿಡ್ ನಿಮಿತ್ಯವಾಗಿ ಯಾರಿಗೂ ಪ್ರವೇಶ ನೀಡದೇ ದೇವಾಲಯದ ಅರ್ಚಕರೆ ಎಲ್ಲಾ ಪೂಜಾ ಕೈಂಕರ್ಯಗಳನ್ನು ಕೈಗೊಂಡು ರಥಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ದೇವಿ ಪಂಚಮಿ ಆಚರಿಸಲಾಯಿತು.
ದೇಶದಲ್ಲಿ ತಲೆ ಎತ್ತಿರುವ ಮಹಾಮಾರಿ ಕೋವಿಡ್ ನಿಂದಾಗಿ ದೇಶ, ರಾಜ್ಯ ಮತ್ತು ಜಿಲ್ಲೆಯ ಜನತೆಯನ್ನು ಕಾಪಾಡಲು ದೇವಿಯಲ್ಲಿ ಪ್ರಾರ್ಥಿಸಲಾಯಿತು ಎಂದು ದೇವಸ್ಥಾನದ ವ್ಯವಸ್ಥಾಪಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here