ಸರಳವಾಗಿ ಭಗವಾನ ಶ್ರೀ ಮಹಾವೀರರ ಜಯಂತಿ ಆಚರಣೆ

0
682

ಕಲಬುರಗಿ.ಏ.25: ಕೋವಿಡ್ ಹಿನ್ನೆಲೆಯಲ್ಲಿ ರವಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಭಗವಾನ ಶ್ರೀ ಮಹಾವೀರ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಅವರು ಭಗವಾನ‌ ಶ್ರೀ ಮಹಾವೀರರ ಭಾವಚಿತ್ರಕ್ಕೆ ಪುಷ್ಪರ‍್ಚನೆ ಮತ್ತು ಪೂಜೆ ಮಾಡುವುದರ ಮೂಲಕ ಗೌರವ ಸಲ್ಲಿಸಿದರು. ಕರ‍್ಯಕ್ರಮದಲ್ಲಿ ಭಾಗವಹಿಸಿದ ಜೈನ ಸಮುದಾಯದ‌ ಮುಖಂಡರು ಸರಳ ಜಯಂತಿಗೆ ಸಹಕರಿಸಿದರು.
ಈ‌ ಸಂರ‍್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನರ‍್ದೇಶಕ ದತ್ತಪ್ಪ ಸಾಗನೂರ, ಶ್ರೀ 1008 ಆದಿನಾಥ ದಿಗಂಬರ ಜೈನ‌ ಮಂದಿರದ ಅಧ್ಯಕ್ಷ ನಾಗನಾಥ್ ಚಿಂದೆ, ಶ್ರೀ 1008 ಮಹಾವೀರ ಜೈನ‌ ಮಂದಿರದ ಅಧ್ಯಕ್ಷ
ಚಂದ್ರಮೋಹನ್ ಶಹಾ, ಸಂಕೇಶ್ವರ ಪರ‍್ಶನಾಥ ಜೈನ ಶ್ವೇತಾಂಬರ ಸಂಘದ ಅಧ್ಯಕ್ಷ ಲಾಲಚಂದ ಜೈನ, ಜೈನ ಸೋಷಿಯಲ್‌ ಗ್ರೂಪ್ಪಿನ ಸಿ.ಎ. ಸುನೀಲ್ ಲೋಡಾ ಸೇರಿದಂತೆ ಜೈನ ಸಮುದಾಯದ ಮುಖಂಡರಾದ ಪ್ರೀತಮ್ ಮೆಹತಾ, ಅಭಿಜಿತ್ ಶಹಾ, ಹಾಗೂ ಸಿ.ಎ.ಮನಿಲಾಲ್ ಶಹಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here