ಚೌಕ್ ಠಾಣೆಗೊಬ್ಬ ಸಿಂಗo ಅಧಿಕಾರಿ ನಾಯ್ಕ

0
1309

ಕಲಬುರಗಿ, ಏ. 24: ಚೌಕ್ ಠಾಣೆಯ ಪಿಐ ಎಸ್. ಆರ್. ನಾಯಕರನ್ನು ಕಂಡರೆ ಸಿನೆಮಾದಲ್ಲಿದ್ದ ಸಿಂಗo ನೆನಪಗಾಗುತ್ತದೆ, ಅವರನ್ನು ಕಂಡರೆ ಪುಂಡ ಪೋಕರಿಗಳು ಎಲ್ಲಿಂದರಲ್ಲಿ ಬಿದ್ದಿ ಎದ್ದು ಓಡಿ ಹೋಗುತ್ತಾರೆ.
ಇದು ಕಂಡಿದ್ದು ಅವರ ಕಾರ್ಯವ್ಯಾಪಿಯ ಮುಸ್ಲಿಂ ಚೌಕ್, ಗಂಜ್ ಪ್ರದೇಶ ಸುಪರ್ ಮಾರ್ಕೆಟ್‌ನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಜಾರಿ ಮಾಡಿದ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಸ್ತೆಗೆ ಬೇಕಾಬಿಟ್ಟಿ ಇಳಿದ ವಾಹನ ಚಾಲಕರಿಗೆ ಇವರ ಲಾಠಿ ರುಚಿ ತುಂಬಾನೆ ಸಿಕ್ಕಿದೆ.

ಅಲ್ಲದೇ ಸದಾ ಗಜಗುಡುತ್ತಿದ್ದ ಹಾಗೂ ಯಾವುದೇ ಬಂದ್‌ಯಿರಲಿ ಲಾಕ್‌ಡೌನ್ ಇರಲಿ ಮುಸ್ಲಿಂ ಚೌಕ್‌ನಲ್ಲಿ ಹಲವಾರು ಹೊಟೆಲ್‌ಗಳು, ಅಂಗಡಿಗಳು ತೆರೆದೆ ಇರುತ್ತಿದ್ದವು, ನಿನ್ನೆ ದಿನ ಈ ಪ್ರದೇಶದಲ್ಲಿ ಗಸ್ತಿಗಾಗಿ ಮೂರು ಜನ ಸಿಬ್ಬಂದಿಯನ್ನು ನೇಮಿಸಿದ ಇವರು ಅಲ್ಲಿ ಒಂದು ಅಂಗಡಿಯಾಗಲಿ, ಹೋಟೆಲ್ ಆಗಲಿ ಸ್ವಲ್ಪ ತೆರೆಯದಂತೆ ಬಂದೋಬಸ್ತ ಮಾಡಿದ್ದು ಅಲ್ಲದೇ ಈ ರಸ್ತೆಯಲ್ಲಿ ಬೇಕಾಗಿ ಬಿಟ್ಟಿ ಒಬ್ಬರು ಕೂಡಾ ಒಡಾಡದಂತೆ ಮಾಡಿದರು.

ಸಂತ್ರಾಸ ವಾಡಿಯ ಮಸಿದಿ ಹತ್ತಿರಿದ ಮಾಂಸದ ಅಂಗಡಿ, ಬಿರಿಯಾನಿ ಹೋಟೆಲ್, ಅಲ್ಲದೇ ಪೆಟ್ರೋಲ್ ಬಂಕ್ ಹತ್ತಿರದ ಚಹಾ ಅಂಗಡಿ, ಬಸ್ ನಿಲ್ದಾಣದ ಎದುರಿದ ತಾರಿ ಅಂಗಡಿ, ಚಹಾ ಅಂಗಡಿ ಸಂಜೆಯಿAದ ರಾತ್ರಿ ವರೆಗೆ ತೆರೆದು ವ್ಯಾಪಾರ ಮಾಡುತ್ತಿರುವುದು ಎಲ್ಲರಿಗೂ ಗೋಚರವಾಗಿದೆ ಆದರೆ ಈ ಬಡಾವಣೆಯ ಪೋಲಿಸರಿಗೆ ಮಾತ್ರ ಕಾಣಲಿಲ್ಲವೆಂದು ಕಾಣುತ್ತಿದೆ. ಲಾಕ್‌ಡೌನ್‌ದಲ್ಲಿ ಅಷ್ಟೆ ಅಲ್ಲ ಉಳಿದ ಸಮಯದಲ್ಲಿಯೂ ಕೂಡಾ ರಾತ್ರಿ 2 ಗಂಟೆಯವರೆಗೆ ಹೋಟೆಲ್‌ಗಳು, ಪಾನ್ ಶಾಪ್‌ಗಳು ತೆರೆದು ವ್ಯಾಪಾರ ಮಾಡುವ ದೃಶ್ಯಗಳು ಕಾಣುತ್ತದೆ. ಯಾರು ಬೇಕಾದರೆ ಬಂದು ಇಲ್ಲಿ ಚಹಾ, ಸಿಗರೇಟ್, ಗುಟ್ಕಾ ಪಡೆಯಬಹುದು.

LEAVE A REPLY

Please enter your comment!
Please enter your name here