ಕಸ ವಿಲೇವಾರಿ ಮಾಡುವ ವಾಹನದಲ್ಲಿ ಹೆಲ್ಪಡೆಸ್ಕ್ ಸಿಬ್ಬಂದಿಗೆ ಊಟ ಸರಬರಾಜು

0
1009

ಕಲಬುರಗಿ, ಏ. 24: ಹೆಚ್ಚುತ್ತಿರುವ ಕೋಡಿವ -19ರ ಸೋಂಕಿನಿAದ ಬಳಲುತ್ತಿರುವರಿಗೆ ಆಸ್ಪತ್ರೆ ಹಾಸಿಗೆ, ಇತರೆ ಮಾಹಿತಿ ನೀಡಲು ಜಿಲ್ಲಾಡಳಿತ ಹೆಲ್ಪಡೆಸ್ಕ್ ನಗರದಲ್ಲಿ ಎಲ್ಲಡೆ ನಿರ್ಮಿಸಿದ್ದು ಶ್ಲಾಘನೀಯ ಆದರೆ ಇಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕ ಸಿಬ್ಬಂದಿಗಳು ಪಾಡು ದೇವರೇ ಬಲ್ಲ.

ನಗರದ ಮುಖ್ಯಬೀದಿಯ ಬದಿಯಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಬಟೆ ಶೆಡ್ ಬಿಸಿಲು ಬಂದಾಗ ಅದರಿಂದ ರಕ್ಷಿಸಿಕೊಳ್ಳಲು ಸಾಧ್ವವಿಲ್ಲ, ಇದರಿಂದ ಸಿಬ್ಬಂದಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದು, ಈ ಬಗ್ಗೆ ಕೇಳುರ‍್ಯಾರು ಇಲ್ಲ.
ನಗರದಲ್ಲಿ ಒಟ್ಟು 57 ಹೆಲ್ಪಡೆಸ್ಕ ನಿರ್ಮಿಸಲಾಗಿದ್ದು, ಅದರಲ್ಲಿ ಸುಮಾರು ಶೆಡ್‌ಗಳು ಗಾಳಿಯಿಂದ ಉರುಳಿಬಿದ್ದಿದ್ದು, ಸಿಬ್ಬಂದಿಗಳು ಅಲ್ಲಿ ಕೂಡಲು ಸಾಧ್ಯವಾಗದೇ ರಸ್ತೆ ಪಕ್ಕದ ಬಂದ್ ಆದ ಶೆಟರ ಅಂಗಡಿ ಮುಂದೆ ನಿಲ್ಲುತ್ತಿರುವುದ ಕಾಣಬಹುದಾಗಿದೆ.
ಅಲ್ಲದೇ ಶೆಡ್‌ನಲ್ಲಿಯ ಸಿಬ್ಬಂದಿಗಳಿಗೆ ದಿನಾಲೂ ಜಿಲ್ಲಾಡಳಿತ ಊಟ ಸರಬರಾಜು ಮಾಡುತ್ತಿದ್ದು, ಅದು ಮಹಾನಗರಪಾಲಿಕೆಯ ಕಸ ವಿಲೇವಾರಿ ಮಾಡುವ ವಾಹನದಲ್ಲಿ, ಮತ್ತು ಈ ಊಟ ಅತ್ಯಂತ ಕಳಪೆ ಮಟ್ಟದ್ದಾಗಿದ್ದು, ಸಿಬ್ಬಂದಿಗಳು ಅದನ್ನು ತಿನ್ನದೇ ರಸ್ತೆ ಬದಿ ಅನಾಥವಾಗಿರುವ ಬೀಕ್ಷÄಕರಿಗೆ ನೀಡಿ ತಮ್ಮ ಹಣದಲ್ಲಿ ಹೋಟೆಲ್‌ಗಳಿಂದ ಪಾರ್ಸ್ಲ ತಂದು ತಿನ್ನತ್ತಿರುವುದು ಹಲವಡೆ ಕಂಡುಬAದಿತು.

ನಗರದ ರಾಮತೀರ್ಥ ಹಿಂದುಡಗಡೆಯ ಸರಕಾರ ವಸತಿಗೃಹದಲ್ಲಿ ಊಟ ತಯಾರಿಸಿ ಸುಮಾರು 2-3 ಗಂಟೆಗಳ ಬಳಿಕೆ ಕಸದ ವಾಹನದಲ್ಲಿ ಶೆಡ್‌ಗಳಿಗೆ ಊಟ ಸರಬರಾಜು ಮಾಡಿದರೆ ಎಲ್ಲಿ ಉಳಿಯುತ್ತೆ ಬಿಸಿಯೂಟ, ಪೂರ್ತಿಯಾಗಿ ಆರಿಹೋಗಿ ಊಟಕ್ಕೆ ಯೋಗ್ಯವಲ್ಲದ್ದಾಗಿದೆ.

ಹಲವಡೆ ಕೂಡಲ ಆಸನಗಳನ್ನು ಸಹ ನೀಡಲಾಗಿಲ್ಲ, ಅಲ್ಲದೇ ಅವರು ನಿಂತು ಕೆಲಸ ಮಾಡಬೇಕು, ಅವರ ರಕ್ಷಣೆಗಾಗಿ ಯಾವ ಪೋಲಿಸ್ ಪೇದೆ ಹಾಗೂ ಆರೋಗ್ಯ ಇಲಾಖೆಯ ಓರ್ವ ಸಿಬ್ಬಂದಿಯನ್ನು ನೇಮಿಸಬೇಕು ಅದು ಇಲ್ಲ. ಬೇಕಾಗಿ ಬಿಟ್ಟಿ ಕಾಟಾಚಾರಕ್ಕೆ ಹೆಲ್ಪಡೆಸ್ಕ್ ನಿರ್ಮಿಸಿದ ಜಿಲ್ಲಾಡಳಿತ ಮಾಡಲು ಹೊರಟಿದ್ದಾರೂ ಏನು? ಬಿಸಲಲ್ಲಿ ಕೆಲಸ ಮಾಡುವಾಗ ಡಿಹೈಡ್ರೆಸೆನ್ ಆಗಿ ಆಸ್ಪತ್ರೆಗೆ ದಾಖಲು ಆಗುವ ಪರಿಸ್ಥಿತಿ ಉಂಟಾಗಲು ಬಹುದು, ಇದಲ್ಲವನ್ನು ಗಮನಿಸಲು ಜಿಲ್ಲಾಡಳಿತಕ್ಕೆ ಸಮಯ ಇಲ್ಲ.
ಇನ್ನಾದರೂ ಜಿಲ್ಲಾಡಳಿತ ಇಂತಹ ಕಳಪೆ ಊಟವನ್ನು ಹಾಗೂ ಸರಬರಾಜು ಮಾಡುವ ಕಸದ ವಾಹನವನ್ನು ಬದಲಿಸಿ ಉತ್ತಮವಾದ ಊಟ, ಕುಡಿಯಲು ಒಳ್ಳೆಯ ಗುಣಮಟ್ಟದ ನೀರು, ಕೂಡಲು ಉತ್ತಮವಾದ ಶೆಡ್‌ಗಳು ಅದು ಬಿಸಿಲು ಪ್ರದೇಶದಲ್ಲಿರದೇ ನೆರಳಿನಲ್ಲಿ ನಿರ್ಮಿಸಿ, ಸಿಬ್ಬಂದಿಗಳನ್ನು ರಕ್ಷಿಸಬೇಕೆಂಬುದು ನಮ್ಮ ಆಸೆಯಾಗಿದೆ.

LEAVE A REPLY

Please enter your comment!
Please enter your name here