ಮೇ 4ರವರೆಗೆ ಎಲ್ಲಾ ಬಂದ್ ಬಾರ್, ವೈನ್ ಶಾಪಿಗಳು ಬಂದ್ ಇಲ್ಲ

    0
    1175

    ಬೆಂಗಳೂರು, ಏ. 22: ಹೆಚ್ಚುತ್ತಿರುವ ಕೊರೊನಾ ಮಾಹಾಮಾರಿಯನ್ನು ತಡೆಯಲು ಗುರುವಾರದಿಂದ ಮೇ 4ರ ವರೆಗೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸರಕಾರ ಆದೇಶ ಹೊರಡಿಸಿದೆ.
    ಗುರುವಾರ ಸಂಜೆ ಏಕಾ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೋಲಿಸರು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿದ್ದು, ಇದು ಮೇ 4ರ ವರೆಗೆ ಮುಂದುವರೆಯಲಿದೆ.
    ರಾಜ್ಯ ಸರಕಾರ ಕೋವಿಡ್ ನಿಯಂತ್ರಿಸಲು ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅದರ ಅನ್ವಯ ರಾಜ್ಯದಲ್ಲಿ ನಾಳೆ (ಶುಕ್ರವಾರ) ಬೆಳಿಗ್ಗೆಯಿಂದ ಮೋಬೈಲ್ ಶಾಪೀಗಳು, ಬಟ್ಟೆ ಅಂಗಡಿಗಳು, ಬಂಗಾರ ಅಂಗಡುಗಳು, ಎಲೆಕ್ಟಾçನಿಕ್ಸ್ ಮತ್ತು ಎಲೆಕ್ಟಿçÃಕಲ್ ಅಂಗಡಿಗಳು, ಹಾರ್ಡವೇರ್ ಅಂಗಡಿಗಳು, ಮಾಲ್‌ಗಳು, ಹ್ಯಾಂಡಿಕ್ರಾಫ್ಟ್ ಅಂಗಡಿಗಳು, ಬುಕ್ ಸ್ಟಾಲ್‌ಗಳು, ರೆಡಿಮೇಡ್ ಬಟ್ಟೆ ಅಂಗಡಿಗಳು, ವೆಲ್ಡಿಂಗ್ ಶಾಪ್‌ಗಳು, ಗ್ರಾಫಿಕ್ಸ್, ಮುದ್ರಣಾಲಯಗಳು ಅಲ್ಲದೇ ಅನ್ನು ಹಲವಾರು ಅಂಗಡಿಗಳು, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೊರ‍್ಸ್ ಮೇ 4ರ ಬೆಳಿಗ್ಗೆ 6 ಗಂಟೆಯವರೆಗೆ ತೆರೆಯುವಂತಿಲ್ಲ ಎಂದು ಪರಿಷ್ಕೃತ ಆದೇಶದಲ್ಲಿ ತಿಳಿಸಲಾಗಿದೆ.
    ಸಿಎಲ್ 4ನಲ್ಲಿ ಬರುವ ಪಬ್, ಕ್ಲಬ್‌ಗಳು ಕಂಪ್ಲಿಟ್ ಬಂದ್, ಬಾರ್, ವೈನ್ಸ್ ಶಾಪಗಳಲ್ಲಿ ಪಾರ್ಸಲ್ ಮಾತ್ರ ಅವಕಾಶ ನೀಡಲಾಗಿದೆ. ಬೇಕರಿ, ಹೋಟೆಲ್‌ಗಳು, ಖಾನಾವಳಿ, ದರ್ಶಿನಿಗಳಲ್ಲಿ ಕುಳಿತು ಊಟ, ತಿಂಡಿ ತಿನ್ನುವುದನ್ನು ಸಂಪೂರ್ಣ ನಿಷೇಧಿಸಿ, ಪಾರ್ಸ್ಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ.
    ಇನ್ನು ಬೇಕರಿ, ಮೆಡಿಕಲ್ ಸ್ಟೊರ‍್ಸ್, ವೈದ್ಯಕೀಯ ಸೇವೆಗಳು, ಮೆಡಿಕಲ್ ಡಿಸ್ಟಿçÃಬ್ಯೂರ‍್ಸ್ಗಳು, ಬ್ಯಾಂಕ್, ಎಟಿಎಂ., ಎಂದಿನAತೆ ಕಾರ್ಯನಿರ್ವಹಿಸಲಿದ್ದು, ಸರಕಾರಿ ಕಚೇರಿಗಳು, ನಿಗಮ ಮಂಡಳಿ ಕಛೇರಿಗಳಲ್ಲಿ ಶೇ 50ರ ಅನುಪಾತದಲ್ಲಿ ಕೆಲಸ ನಿರ್ವಹಿಸಲು ಆದೇಶಿಸಲಾಗಿದೆ.
    ಸಲೂನ್ ಮತ್ತು ಸ್ಪಾ, ಬ್ಯೂಟಿ ಪಾರ್ಲರಗಳಿಗೆ ಕೋವಿಡ ನಿಯಮದ ನಿರ್ಭಂದ ವಿಧಿಸಲಾಗಿದೆ.
    ಹಣ್ಣು, ತರಕಾರಿ, ಹಾಲು, ಕಾಯಿಪಲ್ಲೆ, ಕೃಷಿ ಚಟುವಟಿಕೆಗಳು, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಯಾವುದೇ ಅಡೆ ತಡೆಗಳಿಲ್ಲ.
    ಬಸ್, ರೈಲು, ವಿಮಾನ ಸೇವೆ ಎಂದಿನAತೆ ಮುಂದುವರೆಯಲಿದ್ದು, ಟ್ಯಾಕ್ಸಿ, ಸರಕಾರಿ ಬಸ್‌ಗಳು, ಆಟೋಗಳು ಎಂದಿನAತೆ ಕಾರ್ಯನಿರ್ವಹಿಸಲಿವೆ.
    ಮದುವೆ ಸಮಾರಂಭಗಳಿಗೆ ಒಳಾಂಗಣದಲ್ಲಿ ಕೇವಲ 50 ಮಂದಿಗೆ ಮತ್ತು ಹೊರಾಂಗಣದಲ್ಲಿ ನಡೆದರೆ 100 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಧಾರ್ಮಿಕ ಸಭೆ, ಸಮಾರಂಭಗಳು, ಜಾತ್ರೆ, ಉತ್ಸವ, ಉರುಸ್ ನಡೆಸುವಂತಿಲ್ಲ ಅಲ್ಲದೇ ಶವ ಸಂಸ್ಕಾರದಲ್ಲಿ ಭಾಗವಹಿಸಲು ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
    ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೆ ವಿಕೆಂಡ್ ಕಠಿಣ ಕರ್ಫ್ಯೂ ವಿಧಿಸಲಾಗಿದೆ.

    ಏನೇನು ಇರಲ್ಲ:

    • ಪಬ್, ಕ್ಲಬ್‌ಗಳು
    • ಮೋಬೈಲ್ ಶಾಪೀಗಳು
    • ಬಟ್ಟೆ ಅಂಗಡಿಗಳು,
    • ಬಂಗಾರ ಅಂಗಡಿಗಳು
    • ಎಲೆಕ್ಟಾçನಿಕ್ಸ್ ಮತ್ತು
    • ಎಲೆಕ್ಟಿçÃಕಲ್ ಅಂಗಡಿಗಳು,
    • ಹಾರ್ಡವೇರ್ ಅಂಗಡಿಗಳು,
    • ಮಾಲ್‌ಗಳು,
    • ಹ್ಯಾಂಡಿಕ್ರಾಫ್ಟ್ ಅಂಗಡಿಗಳು,
    • ಬುಕ್ ಸ್ಟಾಲ್‌ಗಳು,
    • ರೆಡಿಮೇಡ್ ಬಟ್ಟೆ ಅಂಗಡಿಗಳು,
    • ವೆಲ್ಡಿಂಗ್ ಶಾಪ್‌ಗಳು, ಗ್ರಾಫಿಕ್ಸ್,
    • ಮುದ್ರಣಾಲಯಗಳು
      _ ಝರಾಕ್ಸ್ ಅಂಗಡಿಗಳು
    • ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೊರ‍್ಸ್

    ಏನು ಇರುತ್ತೇ?

    • ಬಾರ್ (ಪಾರ್ಸಲ್)
    • ವೈನ್ಸ್ ಶಾಪ್ (ಪಾರ್ಸಲ್)
    • ಬೇಕರಿ (ಪಾರ್ಸಲ್)
    • ಹೋಟೆಲ್‌ಗಳು, (ಪಾರ್ಸಲ್)
    • ಖಾನಾವಳಿ (ಪಾರ್ಸಲ್)
    • ಹಾಲು, ಮೋಸರು ಅಂಗಡಿ
    • ತರಕಾರಿ, ಹಣ್ಣು ಹಂಪಲು
    • ಕಟ್ಟಡ ನಿರ್ಮಾಣ ಕಾಮಗಾರಿ
    • ಬ್ಯಾಂಕ್, ಎಟಿಎಮ್‌ಗಳು
    • ಸರಕಾರಿ ಕಚೇರಿ (ಶೇ. 50ರಷ್ಟು ಹಾಜರಾತಿ)

    LEAVE A REPLY

    Please enter your comment!
    Please enter your name here