ಕಲಬುರಗಿ, ಏ. 22: ನಿನ್ನೆಯಷ್ಟೆ ಎರಡು ವಾರಗಳ ಕಾಲ ರಾತ್ರಿ ಕರ್ಫ್ಯೂ ನಿಗದಿಪಡಿಸಿದ್ದು ಕಲಂ 144ರ ಅನ್ವಯ ರಾತ್ರಿ 9.00 ರಿಂದ 6.00ರ ವರೆಗೆ ನಿಷೇದಾಜ್ಞೆ ಜಾರಿಯಿದ್ದು, ಗುರುವಾರ ಸಂಜೆ 4 ಗಂಟೆಯಿAದ ಧಿಡೀರ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳನ್ನು ಪೋಲಿಸರು ಬಂದ್ ಮಾಡಿಸಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಬೆಳಿಗ್ಗೆಯ ಲೆಕ್ಕಾಚಾರದ ಮೆಲೆ ಹೋಟೆಲ್‌ಗಳಲ್ಲಿ ಗ್ರಾಹಕರ ಅಂದಾಜಿನ ಮೇಲೆ ಆಹಾರ ತಯಾರಿಸಲಾಗಿದ್ದು, ಧೀಡಿರ ಬಂದ್ ಮಾಡಿದ್ದರಿಂದ ಹೋಟೆಲ್ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
ಹಣ್ಣಿನ ಅಂಗಡ, ಮೋಬೈಲ್ ಅಂಗಡಿ, ಕಿರಾಣಾ ಅಂಗಡಿ, ಬಂಗಾರ ಅಂಗಡಿಗಳು, ಅಟೋಮೋಬೈಲ್‌ಗಳ ಅಂಗಡಿ ಬಂದ್ ಮಾಡಿದ್ದರಿಂದ ಅವರಿಗೂ ಕೂಡಾ ಈ ಬಂದ್‌ನಿAದಾಗಿ ಅಲ್ಪ ನಷ್ಟವಾದರೂ ಕೆಲಸಗಾರರ ಸಂಬಳ ಪೂರ್ತಿ ಕೊಡಬೇಕಾಗುತ್ತದೆ.
ಕೊರೊನಾ ಫ್ಯಾಕ್ಟರ್ ತರಕಾರಿ ಮಾರುಕಟ್ಟೆ
ಕೊರೊನಾ ಹೋಲ್‌ಸೆಲ್ ಆಗಿ ಸಿಗುವುದು ತರಕಾರಿ ಮಾರುಕಟ್ಟೆಯಲ್ಲಿ ಅಲ್ಲದೇ ಬೀದಿ ಬದಿಯ ಬಂಡಿಯಲ್ಲಿ ಇಟ್ಟು ಮಾರಾಟ ಮಾಡುವ ಹಣ್ಣಿನ ಅಂಗಡಿಗಳಿAದ, ಏಕೆಂದು ಮಾರುಕಟ್ಟೆಗೆ ಒಳಗೆ ಹೋಗಿ ನೋಡಿ ಒಬ್ಬರು ಕೂಡಾ ಮಾಸ್ಕ ಹಾಕದೇ ಸಾಮಾಜಿಕ ಅಂತರವAತೂ ದೂರೆ ಉಳಿದಿದೆ. ಸ್ಯಾನಿಟೈಜರ್ ಕೂಡಾ ಇಲ್ಲದೇ ಒಂದು ಅಂಗಡಿ ಮುಂದೆ 10 ರಿಂದ ಜನ ಸೇರಿ ಇಕ್ಕಟ್ಟಿನ ಜಾಗದಲ್ಲಿ ಸುಮಾರು 1500 ಜನರು ಒಂದೇಡೆ ಸೇರಿದರೆ ಮಾರಕ ಕೊರೊನಾ ಬರದೇ ಇರುತ್ತಾ?
ಅಂಗಡಿ ಮುಂಗಟ್ಟುಗಳು ಬಂದ ಮಾಡಿದರೂ ಕೂಡಾ ಸುಪರ್ ಮಾರ್ಕೆಟ್‌ನಲ್ಲಿ ಅಂಗಡಿ ಮಾಲಿಕರು ಪೋಲಿಸರು ಮುಂದೆ ಹೋಗುತಿದ್ದಂತೆ ಹಿಂದೆ ಅರ್ಧ ಶೆಟ್ಟರ್ ಎತ್ತಿ ಮತ್ತೆ ಗ್ರಾಹಕರನ್ನು ಒಳಗೆ ಕರೆದು ವ್ಯಾಪಾರ ಮಾಡುತ್ತಿದ್ದಾರೆ.
ಎಲ್ಲದಕ್ಕೂ ಒಂದು ಪರಿಹಾರವೆಂಬತೆ ಮಹಾನಗರಪಾಲಿಕೆಯ ಆಯುಕ್ತರು, ಪೋಲಿಸ ಇಲಾಖೆ, ಜಿಲ್ಲಾಡಳಿತ ಎಲ್ಲ ವ್ಯಾಪಾರಿಗಳಿಗೆ, ತರಕಾರಿ ಮಾರುಕಟ್ಟೆಯ ಮುಖ್ಯಸ್ಥರಿಗೆ ಕರೆದು ಸಭೆ ಮಾಡಿ, ಕೋವಿಡ ನಿಯಮಗಳನ್ನು ಕಡಕ್ ಪಾಲಿಸದಿದ್ದರೆ ನಿಮ್ಮ ಅಂಗಡಿ, ಮಂಗಟ್ಟುಗಳ ಲೈಸೆನ್ಸ್ ರದ್ದುಪಡಿಸುವ ಸೂಚನೆ ನೀಡಿ, ಅದರಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಒಂದು ಹಂತದಲ್ಲಿ ಕೊರೊನಾ ಚೈನ್ ಕಟ್ ಮಾಡುವಲ್ಲಿ ಸ್ವಲ್ಪವಾದರೂ ಶ್ರಮ ಸಾರ್ಥಕವಾಗುವುದು.