ಕೊರೋನಾ ಸೋಂಕಿನಿಂದ ಆರು ಜನ ನಿಧನ

0
912

ಕಲಬುರಗಿ.ಏ.19:ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ‌ ಆರು ಜನ ನಿಧನರಾಗಿದ್ದಾರೆ ಎಂದು ಸೋಮವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಕಲಬುರಗಿಯ ರ‍್ಗಾ ರಸ್ತೆಯ ಚೋಟಾ ರೋಜಾ ಪ್ರದೇಶದ 31 ರ‍್ಷದ ಯುವಕ (ರೋಗಿ ಸಂ.1100845) ಏ.15 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.16ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ‌ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಕಾಶಿ‌ಕಮಲ್ ಅಪರ‍್ಟ್ ಮೆಂಟ್ ನಿವಾಸಿ 56 ರ‍್ಷದ ಮಹಿಳೆ (ರೋಗಿ ಸಂ.1120710) ಏ.11 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.17ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ಕಲಬುರಗಿಯ ಹಳೇ ಜೇರ‍್ಗಿ ರಸ್ತೆಯ ಬಾಲಾಜಿ ನಗರದ 60 ರ‍್ಷದ ವೃದ್ಧ (ರೋಗಿ ಸಂ.1125671) ಏ.19 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ‌ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಆಳಂದ ಪಟ್ಟಣದ ಶ್ರೀ ರಾಮ ಮರ‍್ಕೆಟ್ ಪ್ರದೇಶದ 70 ರ‍್ಷದ ವೃದ್ಧ (ರೋಗಿ ಸಂ.1136607) ಏ.16 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ‌ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ಶೇಖ್ ರೋಜಾ ಪ್ರದೇಶದ ಆಶ್ರಯ ಕಾಲೋನಿಯ 62 ರ‍್ಷದ ವೃದ್ಧ (ರೋಗಿ ಸಂ.1144724) ಏ.15 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.17ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ಮತ್ತು ಶ್ವಾಸಕೋಶ‌ ಸಮಸ್ಯೆಯಿಂದ ಬಳಲುತ್ತಿದ್ದ ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದ 55 ರ‍್ಷದ ಪುರುಷ (ರೋಗಿ ಸಂ.1192027) ಏ.14 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.17ಕ್ಕೆ ನಿಧನ ಹೊಂದಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಸೋಂಕಿನಿಂದ 384 ಜನ ನಿಧನರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here