ಕಲಬುರಗಿಯಲ್ಲಿ ಅವಧಿ ಮೀರಿದ ರೆಮಿಡಿಸಿವಿರ್ ಸರಬರಾಜು

0
1080

ಕಲಬುರಗಿ, ಏ. 19: ಕೋವಿಡ್‌ಗೆ ರಾಮಬಾಣವೆಂಬAತೆ ರೆಮಿಡಿಸಿವಿಯರ್ ಇಂಜಕ್ಷನ್ ಅನಿವಾರ್ಯವಾಗಿದ್ದು, ನಗರದಲ್ಲಿ ಎಲ್ಲಿಯೂ ಈ ಔಷಧಿ ಸಿಗುತ್ತಿಲ್ಲ, ಆದರೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವಧಿ ಮೀರಿದ ರೆಮಿಡಿಸಿವಿರ್ ಅನ್ನು ಸರಬರಾಜು ಮಾಡಲಾಗಿದೆ.
ನಗರದ ಖಾಸಗಿ ಕೆಬಿಎನ್ ಆಸ್ಪತ್ರೆಯಲ್ಲಿ ಕೊರೊನಾಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ 70 ವರ್ಷ ವಯಸ್ಸಿನ ಮಹಿಳಗೆ ಅವಧಿ ಮೀರಿದ ರೆಮಿಡಿಸಿವಿರ್ ಇಂಜಕ್ಷನ್ ಸರಬರಾಜು ಮಾಡಲಾಗಿದೆ.
ಏಪ್ರಿಲ್ 7, 2021ರಂದು ಸರಬರಾಜು ಮಾಡಲಾದ ಇಂಜಕ್ಷನ್ ತನ್ನ ಎಕ್ಸಪ್ರೆ ಅಂದರೆ ಅದರ ಔಷಧಗುಣದ ಅವಧಿ ಮೀರಿದ್ದು, ಆದರೂ ಪೋಲಿಸ್ ಇಲಾಖೆಯ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗಕ್ಕೆ ಕೊqವiಡಲಾದ ಆರೋಗ್ಯ ಸೇವೆಯ ಉಚಿತ ಕಾರ್ಡ ಮೇಲೆ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಈ ರೆಮಿಡಿಸಿವಿರ್ ಇಂಜಕ್ಷನ ಸರಬರಾಜು ಮಾಡಲಾಗಿದೆ.
ಸರಬರಾಜು ಮಾಡಲಾದ ಇಂಜಕ್ಷನಿAದ ಏನು ಅನಾಹುತ ಆಗಿಲ್ಲ ಪರವಾಗಿಲ್ಲ, ಒಂದೇ ವೇಳೆ ಅವಧಿ ಮೀರಿದ ಇಂಜಕ್ಷನ್‌ನಿAದಾಗಿ ರೋಗಿಗೆ ಏನಾದರೂ ತೊಂದರೆ ಆಗಿದ್ದರೆ ಯಾರು ಹೊಣೆ?
ಈ ಬಗ್ಗೆ ಸಂಸ್ಥೆಯ ಅಧ್ಯಕ್ಷರಿಗೆ ವಿಚಾರಿಸಲು ಸಂಪರ್ಕ ಸಾಧ್ಯವಾಗಲಿಲ್ಲ. ಆದರೂ ಇದು ಸಂಸ್ಥೆ ಇಂತಹ ಅವಧಿ ಮೀರಿದ ಔಷಧಿಗಳನ್ನು ಸರಬರಾಜು ಮಾಡುವುದು ಎಷ್ಟು ಸಮಂಜಸ ಈ ಬಗ್ಗೆ ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.

LEAVE A REPLY

Please enter your comment!
Please enter your name here